ಮೈಸೂರು; ಬೇರೆ ಜಾತಿ ಯುವಕನ ಪ್ರೀತಿಸುತ್ತಿದ್ದ ಮಗಳ ಕೊಚ್ಚಿ ಕೊಂದ ತಂದೆ
* ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಘಟನೆ
* ಮಗಳನ್ನು ಕೊಂದ ಬಳಿಕ ಪೊಲೀಸರಿಗೆ ಶರಣಾದ ತಂದೆ
* ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಪುತ್ರಿ
* ಮರ್ಯಾದೆ ಹತ್ಯೆ ಎಂದು ಕರೆಯುವುದು ನಿಮಗೆ ಬಿಟ್ಟಿದ್ದು
ಪಿರಿಯಾಪಟ್ಟಣ(ಜೂ.22) ವಿಜ್ಞಾನ ಎಷ್ಟು ಬೆಳೆದಿದೆ ಆದರೆ ಏನು ಪ್ರಯೋಜನ? ಜಾತಿ, ಪಂಥಕ್ಕೆ ಕಟ್ಟುಬಿದ್ದು ಇಂಥ ಘಟನೆಗಳು ನಡೆಯುತ್ತಲೇ ಇವೆ. ಮರ್ಯಾದೆ ಹತ್ಯೆ ಎಂದು ಕರೆಯುವುದು ಅವರವರಿಗೆ ಬಿಟ್ಟಿದ್ದು. ಹೆತ್ತ ತಂದೆಯೇ ಮಗಳ ಹತ್ಯೆ ಮಾಡಿದ್ದ.
ತಿಪಟೂರು; 7 ಗುಂಟೆ ಜಮೀನಿಗಾಗಿ ಬಡಿದಾಟ, ಯುವಕ ಹತ್ಯೆ
ಪಿರಿಯಾಪಟ್ಟಣದ ಗೊಲ್ಲರಬೀದಿಯ ನಿವಾಸಿ ಗಾಯತ್ರಿ (19) ಕೊಲೆಯಾದ ಯುವತಿ. ಈಕೆ ತಂದೆ ಜಯರಾಂ ಪೊಲೀಸರಿಗೆ ಶರಣಾಗಿದ್ದಾನೆ. ಮಗಳು ಅನ್ಯಜಾತಿಯ ಯುವಕ ಪ್ರೀತಿ ಮಾಡಿದ್ದಳು ಎಂಬ ಕಾರಣಕ್ಕೆ ಹತ್ಯೆ ಆಗಿಹೋಗಿದೆ.