Sexual Harassment; ವಿದ್ಯಾರ್ಥಿನಿಯರ ಮುಂದೆ ಪ್ಯಾಂಟ್ ಬಿಚ್ಚಿದ, ತುಮಕೂರು ಜನರಿಂದ ಗೂಸಾ
* ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯಿಂದ ಏಕಾಏಕಿ ಅಸಭ್ಯ ವರ್ತನೆ
* ರೈಲ್ವೆ ನಿಲ್ದಾಣದಲ್ಲಿ ಹೆಣ್ಣು ಮಕ್ಕಳ ಮುಂದೆ ಅಸಭ್ಯವಾಗಿ ವರ್ತಿಸುತ್ತಿದ್ದ
* ಹುಚ್ಚು ಹುಚ್ಚಾಗಿ ಆಡುತ್ತಿದ್ದ ವ್ಯಕ್ತಿಯನ್ನು ಹಿಡಿದು ಧರ್ಮದೇಟು ನೀಡಿದ ಸಾರ್ವಜನಿಕರು
* ಕಳೆದ ಮೂರು ದಿನಗಳಿಂದ ಬೀದಿ ಬೀದಿ ಅಲೆಯುತ್ತಿದ್ದ
ತುಮಕೂರು(ನ. 10) ರೈಲ್ವೆ ನಿಲ್ದಾಣದಲ್ಲಿ (Indian Railways) ಹೆಣ್ಣು ಮಕ್ಕಳ ಮುಂದೆ ಅಸಭ್ಯವಾಗಿ (Sexual Harassment) ವರ್ತಿಸುತ್ತಿದ್ದ ವ್ಯಕ್ತಿಗೆ ಸರಿಯಾಗಿ ಧರ್ಮದೇಟು ಬಿದ್ದಿದೆ. ತುಮಕೂರಿನ (Tumkur) ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಘಟನೆ ನಡೆದಿದೆ.
ಶಾಲೆಯಿಂದ ಬರುವ ಹೆಣ್ಣು ಮಕ್ಕಳನ್ನ ( (Students)) ಕಾಮುಕ ದೃಷ್ಟಿಯಿಂದ ಚೂಡಾಯಿಸುತ್ತಿದ್ದ ಕೀಚಕ ಕೈಯಲ್ಲಿ ಬಿಸ್ಕತ್ ಹಿಡಿದುಕೊಂಡು ಹೆಣ್ಣು ಮಕ್ಕಳನ್ನ ಕರೆಯುತ್ತಿದ್ದ. ಹತ್ತಿರ ಬಂದರೆ ತನ್ನ ಪ್ಯಾಂಟ್ ತೆಗೆದು ಅಸಭ್ಯವಾಗಿ ವರ್ತಿಸುತ್ತಿದ್ದ.
ಮಹಿಳೆ ಜತೆ ಈ ರೀತಿ ವರ್ತನೆ .ಕರ್ಮಕಾಂಡ ಬಿಚ್ಚಿಟ್ಟ ವಿಡಿಯೋ
ಈತನ ವರ್ತನೆ ಗಮನಿಸುತ್ತಿದ್ದ ಸಾರ್ವಜನಿಕರು ಹಿಡಿದು ಸರಿಯಾಗಿ ಗೂಸಾ ನೀಡಿದ್ದಾರೆ. ಈತ ಕಳೆದ ಮೂರು ದಿನಗಳಿಂದ ರೈಲ್ವೆ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಎನ್ನಲಾಗಿದೆ. ಏಕಾಏಕಿ ಅಸಭ್ಯವಾಗಿ ವರ್ತಿಸಲು ಶುರು ಮಾಡಿದ್ದು ಜನರೇ ಗೂಸಾ ಕೊಟ್ಟಿದ್ದಾರೆ. ಹೊಸ ಬಡವಾಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಈತನ ಮಾನಸಿಕ ಸ್ಥಿತಿಯ ಬಗ್ಗೆಯೂ ಪ್ರಶ್ನೆ ಎದ್ದಿದೆ.
ಮಳವಳ್ಳಿ ಪ್ರಕರಣ: ಮಂಡ್ಯ (Mandya) ಜಿಲ್ಲೆ ಮಳವಳ್ಳಿ (Malavalli) ತಾಲೂಕಿನ ಹಿಟ್ಟನಹಳ್ಳಿ ಕೊಪ್ಪಲು ಗ್ರಾಮದ ವಿವೇಕಾನಂದ ಪ್ರೌಢಶಾಲೆಯ ಮುಖ್ಯ ಶಿಕ್ಷಕರೊಬ್ಬರು ಎಸ್ಸೆಸ್ಸೆಲ್ಸಿ(SSLC) ವಿದ್ಯಾರ್ಥಿನಿಯರ (Students) ಜತೆ ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿ ಬಂದಿತ್ತು.
ಗ್ರಾಪಂ ಪಿಡಿಒ (PDO) ಸಿದ್ದರಾಜು ಅವರಿಗೆ ವಿದ್ಯಾರ್ಥಿನಿಯರು ಮುಖ್ಯಶಿಕ್ಷಕ ಬೋರಯ್ಯ ಅಸಭ್ಯವಾಗಿ ವರ್ತಿಸಿ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಶಾಲೆಗೆ (School) ಗ್ರಾಪಂ ಅಧ್ಯಕ್ಷ ಚಿಕ್ಕಣ್ಣಶೆಟ್ಟಿ ಅವರ ಜತೆ ಪಿಡಿಒ ತೆರಳಿ ವಿದ್ಯಾರ್ಥಿನಿಯರನ್ನು ವಿಚಾರಿಸಿದಾಗ ವಿದ್ಯಾರ್ಥಿನಿಯರು ಏನು ಹೇಳದೇ ಮೌನವಾಗಿದ್ದರಿಂದ ಅಧ್ಯಕ್ಷರು ಮತ್ತು ಪಿಡಿಒ ವಾಪಸಾಗಿದ್ದಾರೆ.
'ಮಹಿಳಾ ಶಿಕ್ಷಕರಿದ್ದ ಶಾಲೆಯ ಪ್ರಾಂಶುಪಾಲರು 'ಈ' ಮದ್ದು ಸೇವಿಸ್ಬೇಕು!'
ಮತ್ತೆ ಗ್ರಾಪಂಗೆ ವಿದ್ಯಾರ್ಥಿನಿಯರು ಹೋಗಿ ನಮಗೆ ಸಾಕಷ್ಟು ಭಯವಾಗುತ್ತದೆ. ಗಂಡು ಮಕ್ಕಳು ಇರುವುದರಿಂದ ಸಮಸ್ಯೆ ಹೇಳಿಕೊಳ್ಳಲು ಆಗುತ್ತಿಲ್ಲ. ದಯವಿಟ್ಟು ದೂರಿನ ಬಗ್ಗೆ ಹೆಣ್ಣುಮಕ್ಕಳನ್ನು (Girls) ಪ್ರತ್ಯೇಕವಾಗಿ ಸಮಲೋಚನೆ ನಡೆಸಬೇಕು ಎಂದು ಮನವಿ ಮಾಡಿದ್ದರು.
ಹೀಗಾಗಿ ಗಂಡು ಮಕ್ಕಳು (Boys) ಹೊರಗಡೆ ಕಳುಹಿಸಿ ಹೆಣ್ಣುಮಕ್ಕಳನ್ನು ಪ್ರತ್ಯೇಕವಾಗಿ ಸಮಲೋಚನೆ ನಡೆಸಿದ ವೇಳೆ ಮುಖ್ಯಶಿಕ್ಷಕ ಬೋರಯ್ಯ ವಿದ್ಯಾರ್ಥಿನಿಯರ ಜತೆ ಅಸಭ್ಯವಾಗಿ ವರ್ತಿಸಿ ಕೆಟ್ಟವಾಗಿ ಮಾತಾಡುತ್ತಾರೆ ಎಂಬ ಆರೋಪ ಕೇಳಿಬಂದಿದೆ.
ನನ್ನ ವಿರುದ್ಧ ಮಾಡಿರುವ ಆರೋಪ ಸುಳ್ಳು. ನಾನು ಯಾವುದೇ ತಪ್ಪು ಮಾಡಿಲ್ಲ. ದುರುದ್ದೇಶದಿಂದ ಕೆಲವರು ನನ್ನ ಮೇಲೆ ಆರೋಪ ಮಾಡಿದ್ದಾರೆ ಎಂದು ಮುಖ್ಯಶಿಕ್ಷಕ (Head master) ಬೋರಯ್ಯ ಪ್ರತಿಕ್ರಿಯೆ ನೀಡಿದ್ದರು.