ಮಹಿಳೆ ಜೊತೆ ಅಸಭ್ಯ ವರ್ತನೆ : ಸಿಸಿಟಿವಿಯಲ್ಲಿ ಸೆರೆಯಾಯ್ತು ಸದಸ್ಯನ ಕರ್ಮಕಾಂಡ
- ನಿವೇಶನಕ್ಕೆಂದು ಅರ್ಜಿ ನೀಡಲು ಬಂದಿದ್ದ ಮಹಿಳೆಗೆ ಗ್ರಾಮ ಪಂಚಾಯಿತಿ ಹಿರಿಯ ಸದಸ್ಯ ಲೈಂಗಿಕ ಕಿರುಕುಳ
- ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಉಳ್ಳಾಲ (ಅ.07) : ನಿವೇಶನಕ್ಕೆಂದು ಅರ್ಜಿ ನೀಡಲು ಬಂದಿದ್ದ ಮಹಿಳೆಗೆ ಗ್ರಾಮ ಪಂಚಾಯಿತಿ ಹಿರಿಯ ಸದಸ್ಯ ಲೈಂಗಿಕ ಕಿರುಕುಳ (sexual harassment) ನೀಡಿರುವ ಘಟನೆ ಮುನ್ನೂರು ಗ್ರಾಮ ಪಂಚಾಯಿತಿ (Grama Panchayat) ಅಧ್ಯಕ್ಷರ ಕೊಠಡಿಯಲ್ಲಿ ನಡೆದಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಮಹಿಳೆಯೊಬ್ಬರು (woman) ನಿವೇಶನದ ಅರ್ಜಿ ನೀಡಲು ಪಂಚಾಯಿತಿಗೆ ಬಂದಿದ್ದು ಅಲ್ಲಿ ಇದ್ದ ಪಂಚಾಯಿತಿ ಸದಸ್ಯ ಬಾಬು ಶೆಟ್ಟಿಆ ಮಹಿಳೆಯನ್ನು ನೇರ ಅಧ್ಯಕ್ಷ ಡಿಸೋಜ ಕೊಠಡಿಗೆ ಕರೆದುಕೊಂಡು ಹೋಗಿದ್ದರು. ಅಧ್ಯಕ್ಷರು ಈ ಸಂದರ್ಭದಲ್ಲಿ ಹೊರ ಬಂದಿದ್ದರು.
ಪಾಪಿ ಅಪ್ಪ: 6 ವರ್ಷದ ಮಗಳ ರೇಪ್ ಮಾಡಲಾಗಲಿಲ್ಲ ಎಂದು ಗುಪ್ತಾಂಗಕ್ಕೆ ಕೋಲು ಹಾಕಿದ!
ಈ ಸಂದರ್ಭ ಮಹಿಳೆಯೊಂದಿಗೆ ಇದ್ದ ಮಕ್ಕಳನ್ನು ಹೊರಗೆ ಕಳುಹಿಸಿದ ಬಾಬು ಶೆಟ್ಟಿಅಧ್ಯಕ್ಷರು ಬರುವವರೆಗೆ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಕುರಿತ ದೃಶ್ಯಾವಳಿ ಗ್ರಾ.ಪಂ ಸಿ.ಸಿ. ಟಿ.ವಿ (CCTV).ಯಲ್ಲಿ ದಾಖಲಾಗಿದೆ. ತಪ್ಪಿತಸ್ಥನಿಗೆ ಶಿಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿ ಡಿವೈಎಫ್‌ಐ (DIYFI) ನಿಯೋಗ ಮುನ್ನೂರು ಗ್ರಾಮದ ಅಧ್ಯಕ್ಷ ವಿಲ್‌ಫ್ರೆಡ್ ಅವರಿಗೆ ಮನವಿ ಸಲ್ಲಿಸಿತ್ತು. ಇದೀಗ ಮಹಿಳೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಂತೆ ,ಆರೋಪಿತ ಗ್ರಾ.ಪಂ ಸದಸ್ಯನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಹಿಳೆಗೆ ಕಿರುಕುಳ: ಆರೋಪಿಗೆ 3 ವರ್ಷ ಶಿಕ್ಷೆ
ಕಾರವಾರಲ್ಲಿಯೂ (karwar) ಮಹಿಳೆಗೆ ಕಿರುಕುಳ ನೀಡಿದ ಆರೋಪಿಯ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಇಲ್ಲಿನ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ (JMF) ನ್ಯಾಯಾಲಯ ದಂಡ ಹಾಗೂ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮಧುಕರ ರಾಮಾ ದೇಸಾಯಿ ಶಿಕ್ಷೆಗೆ ಒಳಗಾಗಿದ್ದು, ತಾಲೂಕಿನ ಜಗಾವಾಡದ ನಿವಾಸಿ ಕರಿಷ್ಮಾ ದೇಸಾಯಿ ನಾಯಿಗೆ ತಿಂಡಿ ಹಾಕುತ್ತಿದ್ದಾಗ ಜ. 1, 2021 ರಂದು ಸಂಜೆ 7.45 ಗಂಟೆ ವೇಳೆಗೆ ಕರಿಷ್ಮಾ ಅವರ ಅತ್ತೆ ವಿಜಯಾ ದೇಸಾಯಿಗೆ ಮಧುಕರ ಅವಾಚ್ಯ ಶಬ್ಧಗಳಿಂದ ನಿಂದಿಸಿ ಅವರ ಮೇಲೆ ಹಲ್ಲೆ ಮಾಡಿದ್ದನು.
ಈ ಬಗ್ಗೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಂದಿನ ಉಪ ನಿರೀಕ್ಷಕ ಎಂ.ಜಿ. ಕುಂಬಾರ ಪ್ರಕರಣ ದಾಖಲಿಸಿಕೊಂಡು ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ವಿವೇಕ ಗ್ರಾಮೋಪಾಧ್ಯಾಯ ಕಲಂ 354(ಬಿ) ಅಡಿಯಲ್ಲಿ 3 ವರ್ಷ ಸಾದಾ ಕಾರಾಗೃಹ, . 2500 ದಂಡ, ಕಲಂ 447 ರಡಿ 3 ತಿಂಗಳು ಕಠಿಣ ಕಾರಾಗೃಹ, . 500 ದಂಡ, ಕಲಂ 323ರಡಿ 1 ವರ್ಷ ಕಠಿಣ ಕಾರಾಗೃಹ, .1ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರಿ ಪರವಾಗಿ ಸರ್ಕಾರಿ ಅಭಿಯೋಜಕಿ ಎಸ್.ಬಿ. ಮುಲ್ಲಾ ವಾದ ಮಂಡಿಸಿದ್ದರು.