Asianet Suvarna News Asianet Suvarna News

ಗಂಡ ಇದ್ರೂ ಪರಪುರುಷನ ಜೊತೆ ಲವ್ವಿಡವ್ವಿ: ಗೋಕಾಕ್‌ನಲ್ಲಿ ಬಿತ್ತು ಎರಡು ಹೆಣ

* ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
* ಬೆಳಗಾವಿ ಜಿಲ್ಲೆಯ ಗೋಕಾಕ್‌ ತಾಲೂಕಿನ ತಪಸಿ ಗ್ರಾಮದಲ್ಲಿ ನಡೆದ ಘಟನೆ
* ಈ ಸಂಬಂಧ ಕುಲಗೋಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

Man Kills Wife and Her Lover for Having Illicit Relationship at Gokak in Belagavi grg
Author
Bengaluru, First Published May 10, 2021, 11:08 AM IST

ಬೆಳಗಾವಿ(ಮೇ.10): ಅಕ್ರಮ ಸಂಬಂಧ ಜೋಡಿ ಕೊಲೆಗೆ ಕಾರಣವಾದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್‌ ತಾಲೂಕಿನ ಕೌಜಲಗಿ ಹೋಬಳಿಯ ತಪಸಿ ಗ್ರಾಮದಲ್ಲಿ ಈಚೆಗೆ ನಡೆದಿದೆ.

ತಪಸಿ ಗ್ರಾಮದ ಲಕ್ಷ್ಮೀ ಜ್ಞಾನೇಶ್ವರ ನಾಯಕ (25) ಮತ್ತು ಕೃಷ್ಣ ದ್ಯಾಮನಾಯಿಕ ನಾಯಿಕ (22)ಕೊಲೆಯಾದವರು. ಈ ಇಬ್ಬರು ವ್ಯಕ್ತಿಗಳನ್ನು ಅದೇ ಗ್ರಾಮದ ಜ್ಞಾನೇಶ್ವರ ಶಿವನಾಯಕ ನಾಯಿಕ (28) ಮತ್ತು ಇತರರು ಕೂಡಿ ಕೊಲೆಗೈದಿದ್ದಾರೆ.

ಪ್ರೀತಿಸಿ ಮದುವೆಯಾದ್ರೂ ಮತ್ತೊಬ್ಬಳ ಜೊತೆ ಅಫೇರ್ : ಅವಳ ಜೊತೆ ಸೇರಿ ಹೆಂಡ್ತಿ ಕೊಂದ

ಕೊಲೆಗೆ ಕಾರಣ:

ತಪಸಿ ಗ್ರಾಮದ ಜ್ಞಾನೇಶ್ವರ ಶಿವನಾಯಕ ನಾಯಕನ ಹೆಂಡತಿ ಲಕ್ಷ್ಮೀ ಜೊತೆ ಅದೇ ಗ್ರಾಮದ ಕೃಷ್ಣಾ ದ್ಯಾಮನಾಯಿಕ ನಾಯಿಕ ಅಕ್ರಮ ಸಂಬಂಧ ಇರಿಸಿಕೊಂಡಿದ್ದು, ಅದು ಗುರುವಾರ ಬೆಳಗಿನ ಜಾವ ಲಕ್ಷ್ಮೀಯ ಪತಿ ಜ್ಞಾನೇಶ್ವರನಿಗೆ ಪ್ರತ್ಯಕ್ಷ ಕಂಡಾಗ ಕೋಪಗೊಂಡ ಜ್ಞಾನೇಶ್ವರ ಸ್ನೇಹಿತರ ಸಹಾಯದೊಂದಿಗೆ ತಪಸಿ ಗ್ರಾಮದ ಲಚ್ಚಪ್ಪ ಲಕ್ಷ್ಮಪ್ಪ ಕುರೇರ ಅವರ ಕಬ್ಬಿನ ತೋಟದಲ್ಲಿ ಕೃಷ್ಣಾನನ್ನು ಹರಿತವಾದ ಆಯುಧದಿಂದ ಕುತ್ತಿಗೆ ಮುಂಭಾಗ ಕೊಯ್ದಿದ್ದಾರೆ. 
ಅನಂತರ ಜ್ಞಾನೇಶ್ವರ ಈತನು ಮನೆಯಲ್ಲಿಯಿರುವ ಪತ್ನಿ ಲಕ್ಷ್ಮೀಯನ್ನು ಹರಿತ ಆಯುಧದಿಂದ ತಲೆ ಕಡೆದಿದ್ದಾನೆ. ಈ ಪ್ರಕರಣವು ಸಮೀಪದ ಕುಲಗೋಡ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.
 

Follow Us:
Download App:
  • android
  • ios