ನವದೆಹಲಿ, (ಮೇ.17): 20 ವರ್ಷದ ಯುವಕನೊಬ್ಬ ತನ್ನ ತಾಯಿಯ ಬಾಯ್ ಫ್ರೆಂಡ್‌ನನ್ನು ಚಾಕುವಿನಿಂದ ಹಿರಿದು ಹತ್ಯೆ ಮಾಡಿರುವ ಘಟನೆ ದೆಹಲಿಯ ಬಾಬಾ ಹರಿದಾಸ್ ನಗದಲ್ಲಿ ನಡೆದಿದೆ.

2012ರಲ್ಲಿ ತನ್ನ ಗಂಡನನ್ನು ಕಳೆದುಕೊಂಡು ಇಬ್ಬರ ಮಕ್ಕಳ ಜೊತೆ ವಾಸವಿದ್ದ ಮಹಿಳೆ, ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು.

ಆದ್ರೆ ಹತ್ಯೆಯಾದ ವ್ಯಕ್ತಿ ತಾನು ಸಂಬಂಧ ಬೆಳೆಸಿದ್ದ ಮಹಿಳೆಯ 15 ವರ್ಷದ ಮಗಳ ಮೇಲೆ ಕಣ್ಣಾಕ್ಕಿದ್ದ. ಅಷ್ಟೇ ಅಲ್ಲದೇ ಪ್ರತಿದಿನ ಅಪ್ರಾಪ್ತ ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ.

ಇದರಿಂದ ಕುಪಿತಗೊಂಡ ಯುವತಿ ಅಣ್ಣ, ತಾಯಿಯ ಪ್ರಿಯತಮನನ್ನು ಚಾಕುವಿನಿಂದ ತಿವಿದು ಹತ್ಯೆ ಮಾಡಿದ್ದಾನೆ ಎಂದು ಪೋಲಿಸ್ ಕಮಿಷನರ್ ಆಂಟೊ ಆಲ್ಫೋನ್ಸ್ ತಿಳಿಸಿದ್ದಾರೆ. ಸಧ್ಯ ಯುವಕನನ್ನು ಪೋಲಿಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.