Asianet Suvarna News Asianet Suvarna News

ನಿವೃತ್ತ ನೌಕಾಪಡೆ ಯೋಧನನ್ನೇ ಕೊಂದ ಪುತ್ರ: ಮೃತದೇಹವನ್ನು ತುಂಡು ಮಾಡಿ ಬಿಸಾಡಲು ತಾಯಿಯ ನೆರವು..!

ಪರೀಕ್ಷೆಯೊಂದಕ್ಕೆ ಶುಲ್ಕ ಕಟ್ಟುವ ವಿಚಾರವಾಗಿ ಮೃತ ವ್ಯಕ್ತಿ ತನ್ನ ಕುಟುಂಬ ಸದಸ್ಯರೊಂದಿಗೆ ಜಗಳವಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮಗ ತಂದೆಯ ಕತ್ತು ಹಿಸುಕಿ ಕೊಂದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

man kills father in bengal mother helps dispose of chopped body parts ash
Author
First Published Nov 21, 2022, 8:40 PM IST

ದೆಹಲಿಯ ಶ್ರದ್ಧಾ ವಾಕರ್‌ ಹತ್ಯೆ ಪ್ರಕರಣ (Shraddha Walkar Murder Case) ಬೆಳಕಿಗೆ ಬಂದ ಬಳಿಕ ದೇಶದಲ್ಲಿ ಅನೇಕ ಬರ್ಬರ ಹತ್ಯೆ ಪ್ರಕರಣಗಳು (Murder Cases) ವರದಿಯಾಗುತ್ತಲೇ ಇವೆ. ಇದೇ ರೀತಿ, ಪಶ್ಚಿಮ ಬಂಗಾಳದಲ್ಲಿ (West Bengal) ಭಾರತೀಯ ನೌಕಾ ಪಡೆಯ (Indian Navy) ನಿವೃತ್ತ ನಾನ್‌ ಕಮೀಷನ್ಡ್‌ ಅಧಿಕಾರಿಯನ್ನೇ (Non Commissioned Officer) ಹತ್ಯೆ ಮಾಡಲಾಗಿದೆ. ಮಗನೇ (Son) ತಂದೆಯನ್ನು (Father) ಹತ್ಯೆ ಮಾಡಿದ್ದು, ಮೃತದೇಹವನ್ನು ತುಂಡಾಗಿಸಲು ಮಗನಿಗೆ ತಾಯಿಯೂ (Mother) ಸಾಥ್‌ ನೀಡಿದ್ದಾರೆ ಎಂದು ಪೊಲೀಸ್‌ ಮೂಲಗಳು ಮಾಹಿತಿ ನೀಡಿವೆ. ಅಲ್ಲದೆ, ಸೈಕಲ್‌ನಲ್ಲಿ ಪುತ್ರ ಹಲವು ಬಾರಿ ಮೃತದೇಹದ ಭಾಗಗಳನ್ನು ಅವರ ಮನೆ ಬಳಿಯ ವಿವಿಧ ಸ್ಥಳಗಳಲ್ಲಿ ಎಸೆದಿದ್ದಾರೆ ಎಂದೂ ತಿಳಿದುಬಂದಿದೆ. 

ಮೃತಪಟ್ಟವರನ್ನು 55 ವರ್ಷದ ಉಜ್ವಲ್‌ ಚಕ್ರವರ್ತಿ ಎಂದು ಪೊಲೀಸರು ತಿಳಿಸಿದ್ದು, ಇವರು 2000ನೇ ಇಸವಿಯಲ್ಲಿ ನೌಕಾಪಡೆಯಿಂದ ನಿವೃತ್ತರಾಗಿದ್ದಾರೆ. ಇವರನ್ನು ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತ ಬಳಿಯ ಬರುಯಿಪುರದಲ್ಲಿ ಮಗನೇ ಹತ್ಯೆ ಮಾಡಿದ್ದಾನೆ. ನಂತರ ದೇಹವನ್ನು ಕನಿಷ್ಠ 6 ತುಂಡುಗಳನ್ನು ಮಾಡಿ ಹಲವು ಸ್ಥಳಗಳಲ್ಲಿ ಅದನ್ನು ಎಸೆದಿದ್ದಾರೆ. ಈ ಪ್ರಕರಣ ಸಂಬಂಧ ತಾಯಿ ಹಾಗೂ ಮಗ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. 

ಇದನ್ನು ಓದಿ: ಮಾಜಿ ಪ್ರೇಮಿಯನ್ನು 6 ಪೀಸ್‌ ಮಾಡಿ ಕೊಂದ ಪಾತಕಿ: ಯುಪಿ ಪೊಲೀಸರಿಂದ ಆರೋಪಿಗೆ ಗುಂಡೇಟು..!

ಪರೀಕ್ಷೆಯೊಂದಕ್ಕೆ ಶುಲ್ಕ ಕಟ್ಟುವ ವಿಚಾರವಾಗಿ ಮೃತ ವ್ಯಕ್ತಿ ತನ್ನ ಕುಟುಂಬ ಸದಸ್ಯರೊಂದಿಗೆ ಜಗಳವಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮಗ ತಂದೆಯ ಕತ್ತು ಹಿಸುಕಿ ಕೊಂದ ಎಂದೂ ಪೊಲೀಸರು ತಿಳಿಸಿದ್ದಾರೆ. ನಿವೃತ್ತ ಯೋಧ ಮದ್ಯಪಾನಿಯಾಗಿದ್ದು, ಅವರ ಕುಟುಂಬದಲ್ಲಿ ಸಮಸ್ಯೆಗಳಿತ್ತು ಎಂದು ಅವರ ನೆರೆಹೊರೆಯವರು ಸಹ ತಿಳಿಸಿದ್ದಾರೆ. ಆದರೆ, ಈ ರೀತಿ ಆಗುತ್ತೆಂದು ಯಾರೂ ನಿರೀಕ್ಷಿಸಿರಲಿಲ್ಲ ಎಂದೂ ಹೇಳಲಾಗಿದೆ. 

ನೌಕಾ ದಳದ ಮಾಜಿ ಅಧಿಕಾರಿಯ ಮೃತದೇಹದ ಭಾಗಗಳನ್ನು ಮೊದಲು ಕೊಳದಲ್ಲಿ ಪತ್ತೆಹಚ್ಚಲಾಗಿದ್ದು, ನಂತರ ಕೊಳದ ಬಳಿಯ ಕಸದ ತೊಟ್ಟಿಯಲ್ಲೂ ಇತರೆ ಭಾಗವನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ಘಟನೆ ಬಗ್ಗೆ ವಿವರಿಸಿದ್ದಾರೆ. ಬರುಯಿಪುರದ ಕೊಳದಲ್ಲಿ ಪ್ಲಾಸ್ಟಿಕ್‌ ಕವರ್‌ನಲ್ಲಿ ಪ್ಯಾಕ್‌ ಮಾಡಿ ಮೃತದೇಹವನ್ನು ಬಿಸಾಡಲಾಗಿತ್ತು. ನವೆಂಬರ್ 15 ರಂದು ಅವರ ಕುಟುಂಬ ಸದಸ್ಯರು ವ್ಯಕ್ತಿ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು ಎಂದೂ ಪಶ್ಚಿಮ ಬಂಗಾಳದ ಸ್ಥಳೀಯ ಎಸ್‌ಪಿ ಪುಷ್ಪಾ ಹೇಳಿದ್ದಾರೆ. 

ಇದನ್ನೂ ಓದಿ: Shraddha Murder Case: ಕತ್ತರಿಸಿಟ್ಟಿದ್ದ ರುಂಡದ ಮೇಲೂ ಹಲ್ಲೆ..! ಶ್ರದ್ಧಾ ರುಂಡದ ಜತೆ ಮಾತುಕತೆ ನಡೆಸುತ್ತಿದ್ದ ಅಫ್ತಾಬ್‌

ಬಂಗಾಳ ಮಾನಿಟರ್‌ ಹಲ್ಲಿಯೊಂದು ದೇಹವನ್ನು ಎಳೆದಾಡುತ್ತಿತ್ತು. ನಂತರ, ಹಲವರಿಗೆ ಅನುಮಾನ ಬಂತು. ನಂತರ ಹತ್ತಿರ ಹೋದಾಗ ಕೆಂಪು ಟಿ - ಶರ್ಟ್‌ ಧರಿಸಿದ್ದ ವ್ಯಕ್ತಿಯೊಬ್ಬರ ಕೊಳೆತ ಮೃತದೇಹ ಅದಾಗಿತ್ತು ಎಂಬುದು ನಮಗೆ ಗೊತ್ತಾಯಿತು ಎಂದು ಸ್ಥಳೀಯ ನಿವಾಸಿಯೊಬ್ಬರು ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

ಈ ಘಟನೆ ಬಗ್ಗೆ ಪೊಲೀಸರಿಗೆ ಸಾಕ್ಷಿ ಹೇಳಿರುವ ಇನ್ನೊಬ್ಬ ವ್ಯಕ್ತಿ ಸಹ ಮಾನಿಟರ್‌ ಹಲ್ಲಿ ಮೃತದೇಹವನ್ನು ಎಳೆದಾಡುತ್ತಿತ್ತು ಹಾಗೂ ತಿನ್ನಲು ನೋಡುತ್ತಿತ್ತು. ಕೊಳೆತ ವಾಸನೆ ಬರುತ್ತಿತ್ತು. ಹತ್ತಿರದ ಕಸದ ತೊಟ್ಟಿಯಲ್ಲೂ ಮೃತದೇಹದ ಭಾಗಗಳು ದೊರೆಯಿತು ಎಂದು ಆ ಗ್ರಾಮದ ನಿವಾಸಿ ಹೇಳಿದ್ದಾರೆ. 

ಇದನ್ನೂ ಓದಿ: ಗರ್ಲ್‌ ಫ್ರೆಂಡ್‌ ಮೋಸ ಮಾಡಿದ್ಳೆಂದು ಗಂಟಲು ಸೀಳಿ, ಮೃತದೇಹದೊಂದಿಗೆ ವಿಡಿಯೋ ಪೋಸ್ಟ್‌ ಮಾಡಿದ..!

ಇನ್ನು, ಮೃತದೇಹದ ಕೆಲ ಭಾಗಗಳಿಗೆ ಹುಡುಕಾಟ ನಡೆಸುತ್ತಿದ್ದೇವೆ ಹಾಗೂ ದೇಹ ತುಂಡಾಗಿಸಲು ಬಳಸಿದ ಆಯುಧಕ್ಕಾಗಿಯೂ ಶೋಧ ಕಾರ್ಯ ಮುಂದುವರಿದಿದೆ ಎಂದು ಸಹ ಪಶ್ಚಿಮ ಬಂಗಾಳ ಪೊಲೀಸರು ಮಾದ್ಯಮಕ್ಕೆ ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: Nidhi Gupta Murder Case: ಇಸ್ಲಾಂ ಸೇರದ್ದಕ್ಕೆ ನಾಲ್ಕನೇ ಅಂತಸ್ತಿಂದ ನೂಕಿ ಕೊಂದ..!

Follow Us:
Download App:
  • android
  • ios