Asianet Suvarna News Asianet Suvarna News

Shraddha Murder Case: ಕತ್ತರಿಸಿಟ್ಟಿದ್ದ ರುಂಡದ ಮೇಲೂ ಹಲ್ಲೆ..! ಶ್ರದ್ಧಾ ರುಂಡದ ಜತೆ ಮಾತುಕತೆ ನಡೆಸುತ್ತಿದ್ದ ಅಫ್ತಾಬ್‌

ಅಫ್ತಾಬ್‌ನ ಮೇಲೆ ಸಣ್ಣ ಅನುಮಾನ ಹೊಂದಿದ್ದ ಪೊಲೀಸರು, ಶ್ರದ್ಧಾಳ ಮೊಬೈಲ್‌ ಕರೆ ಮತ್ತು ಇತರೆ ವ್ಯವಹಾರಗಳ ಮಾಹಿತಿಯನ್ನು ಕಲೆ ಹಾಕತೊಡಗಿದರು. ಈ ವೇಳೆ ಮೇ 22- 26ರ ಅವಧಿಯಲ್ಲಿ ಶ್ರದ್ಧಾಳ ಬ್ಯಾಂಕ್‌ ಖಾತೆಯಿಂದ ಅಫ್ತಾಬ್‌ನ ಖಾತೆಗೆ 54,000 ರೂ. ಹಣ ವರ್ಗಾವಣೆಯಾಗಿದ್ದು ಕಂಡುಬಂದಿತ್ತು.

shraddha walkar murder case aftab used to talk with her head ash
Author
First Published Nov 17, 2022, 8:50 AM IST

ನವದೆಹಲಿ: ದೆಹಲಿಯ (New Delhi) 35 ಪೀಸ್‌ ಮರ್ಡರ್‌ ಕೇಸ್‌ (Murder Case) ಎಂದೇ ಕುಖ್ಯಾತಿ ಹೊಂದಿರುವ ಪ್ರಕರಣದಲ್ಲಿ ಇನ್ನೂ ಆಘಾತಕಾರಿ ವಿಷಯಗಳು ಬೆಳಕಿಗೆ ಬರುತ್ತಿವೆ. ಕೊಲೆಗಾರ ಅಫ್ತಾಬ್‌ (Aftab), ತಾನು ಕತ್ತರಿಸಿ ಫ್ರಿಜ್‌ನಲ್ಲಿಟ್ಟಿದ್ದ ಶ್ರದ್ಧಾಳ ರುಂಡದೊಂದಿಗೆ ಮಾತನಾಡುತ್ತಿದ್ದ ಹಾಗೂ ಕೋಪಗೊಂಡಾಗ ಕಪಾಳಕ್ಕೆ ಹೊಡೆಯುತ್ತಿದ್ದ ಎಂಬ ವಿಷಯ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಹತ್ಯೆ ಬಗ್ಗೆ ಪಶ್ಚಾತಾಪ ತೋರದ ಹಂತಕ
ಶ್ರದ್ಧಾಳನ್ನು (Shraddha Walkar) ಭೀಕರವಾಗಿ ಹತ್ಯೆಗೈದ ಅಫ್ತಾಬ್‌ನನ್ನು ಈ ಹಿಂದೆ ವಿಚಾರಣೆಗಾಗಿ ಕರೆಸಿದ್ದಾಗ ಆತ ಪೂರ್ಣ ಆತ್ಮವಿಶ್ವಾಸದಿಂದ ಮಾತನಾಡಿದ್ದ. ಜೊತೆಗೆ ಶ್ರದ್ಧಾಳನ್ನು ಹತ್ಯೆ ಮಾಡಿದ್ದರೂ ಆ ಬಗ್ಗೆ ಆತನಿಗೆ ಪಶ್ಚಾತಾಪ ಆಗಿದ್ದ ಯಾವುದೇ ಸುಳಿವೂ ಕಂಡುಬಂದಿರಲಿಲ್ಲ ಎಂದು ಮಹಾರಾಷ್ಟ್ರ ಪೊಲೀಸರು ಹೇಳಿದ್ದಾರೆ. ಶ್ರದ್ಧಾ ನಾಪತ್ತೆ ಬಗ್ಗೆ ತಂದೆ ದೂರು ನೀಡಿದ್ದ ಬಳಿಕ ಅಫ್ತಾಬ್‌ನನ್ನು ಮಹಾರಾಷ್ಟ್ರ ಪೊಲೀಸರು ಎರಡು ಬಾರಿ ವಿಚಾರಣೆಗೆ ಕರೆಸಿದ್ದರು. 2 ಬಾರಿಯೂ ಆತ ಅಳುಕಿಲ್ಲದೇ ಶ್ರದ್ದಾ ತನ್ನೊಂದಿಗೆ ವಾಸಿಸುತ್ತಿಲ್ಲ. ಆಕೆ ಬೇರೆಡೆ ಸ್ಥಳಾಂತರಗೊಂಡಿದ್ದಾಳೆ ಎಂದೇ ಹೇಳಿದ್ದ.

ಇದನ್ನು ಓದಿ: Shraddha Murder Case: ಗೆಳತಿ ಹೆಣ ಇಟ್ಕೊಂಡೇ ಬೇರೆ ಹುಡ್ಗೀರ ಜತೆ ಅಫ್ತಾಬ್‌ ರಾಸಲೀಲೆ..!

ಕಣ್ಣೀರಿಟ್ಟು ಬಚಾವ್‌ ಆಗಿದ್ದಳು ಶ್ರದ್ಧಾ
ಶ್ರದ್ಧಾ ಹತ್ಯೆಯಾದ 10 ದಿನಗಳ ಮುನ್ನ ಆಕೆ ಹಾಗೂ ಅಫ್ತಾಬ್‌ ನಡುವೆ ಭಾರಿ ಜಗಳ ನಡೆದಿತ್ತು. ಅದೇ ವೇಳೆ ಅಫ್ತಾಬ್‌ ಆಕೆಯನ್ನು ಕೊಲ್ಲಬಹುದಾಗಿತ್ತು. ಅದರೆ ಅಚಾನಕ್ಕಾಗಿ ಶ್ರದ್ಧಾ ಭಾವುಕಳಾಗಿ ಕಣ್ಣೀರು ಹಾಕಿದ್ದಕ್ಕೆ ಅಫ್ತಾಬ್‌ ಆಕೆಯನ್ನು ಕೊಲ್ಲಲು ಹಿಂಜರೆದ ಎಂದು ಪೊಲೀಸರು ಹೇಳಿದ್ದಾರೆ. ಆದರೆ ನಂತರ ಮತ್ತೆ ಅದೇ ರೀತಿಯ ಘಟನೆ ನಡೆದು ಅಫ್ತಾಬ್‌ ಶ್ರದ್ಧಾಳನ್ನು ಹತೈಗೈದ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರದ್ಧಾ ಬಿಟ್ಟು ಹೋದಳೆಂದು ಸುಳ್ಳು ಹೇಳಿ ಸಿಕ್ಕಿಬಿದ್ದ ಪಾಪಿ
ಪ್ರೇಯಸಿ ಶ್ರದ್ಧಾಳ ಕತ್ತುಹಿಸುಕಿ ಕೊಂದು 35 ಪೀಸುಗಳಾಗಿ ಮಾಡಿದ್ದ ಅಫ್ತಾಬ್‌ ಪೂನಾವಾಲಾ ತಾನು ಅಮಾಯಕ ಎಂದು ಪೊಲೀಸರನ್ನು ದಿಕ್ಕು ತಪ್ಪಿಸಲು ಯತ್ನಿಸಿದ್ದನಾದರೂ, ತಾನೇ ಮಾಡಿದ ಆನ್‌ಲೈನ್‌ ಹಣ ವರ್ಗಾವಣೆ, ಇನ್‌ಸ್ಟಾಗ್ರಾಂ ಚಾಟ್‌ನಿಂದಾಗಿ ಅಂತಿಮವಾಗಿ ಸಿಕ್ಕಿಬಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Shraddha Murder Case: ಮೃತದೇಹ ಪೀಸ್‌ ಮಾಡಿದ ಬಳಿಕ ಆಕೆಯ ತಲೆಯನ್ನು ಫ್ರಿಡ್ಜ್‌ನಲ್ಲಿಟ್ಟು ಶ್ರದ್ಧಾ ಮುಖ ನೋಡ್ತಿದ್ದ ಪಾತಕಿ..!

ಹೀಗಾಗಿ ಮೊದಲಿಗೆ ಶ್ರದ್ಧಾ ನಾಪತ್ತೆಯಾಗಿರುವ ವಿಷಯದಲ್ಲಿ ತನ್ನದೇನೂ ತಪ್ಪಿಲ್ಲ, ನನ್ನ ಬಿಟ್ಟು ಹೋಗಿದ್ದಾಳೆ ಎಂದು ಧೈರ್ಯವಾಗಿ ಮಹಾರಾಷ್ಟ್ರ ಮತ್ತು ದೆಹಲಿ ಪೊಲೀಸರ ಮುಂದೆ ವಾದಿಸಿದ್ದ ಅಫ್ತಾಬ್‌, ಇನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅರಿವಾಗುತ್ತಲೇ ಬಿಕ್ಕಿಬಿಕ್ಕಿ ಅತ್ತು ತನ್ನ ತಪ್ಪನ್ನು ಒಪ್ಪಿಕೊಂಡ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ.

ಏನೂ ಗೊತ್ತಿಲ್ಲ:
ತಮ್ಮ ಪುತ್ರಿ ಶ್ರದ್ಧಾ ಕಾಣೆಯಾಗಿದ್ದಾಳೆ ಎಂದು ಆಕೆಯ ತಂದೆ ದೂರು ನೀಡಿದ ಬಳಿಕ ಮಹಾರಾಷ್ಟ್ರ ಪೊಲೀಸರು ಅ.28 ಮತ್ತು ನ.3ರಂದು ಅಫ್ತಾಬ್‌ನನ್ನು ರಾಜ್ಯಕ್ಕೆ ಕರೆಸಿ ವಿಚಾರಣೆ ನಡೆಸಿದ್ದರು. ಈ ವೇಳೆ ‘ಮೇ 22ರಂದು ನಮ್ಮಿಬ್ಬರ ನಡುವೆ ಜಗಳವಾಗಿತ್ತು. ಅಂದೇ ಆಕೆ ತನ್ನ ಮೊಬೈಲ್‌ ತೆಗೆದುಕೊಂಡು, ಬಟ್ಟೆಯನ್ನು ಇಲ್ಲೇ ಇಟ್ಟು ಮನೆ ಬಿಟ್ಟು ಹೋಗಿದ್ದಳು. ಬಳಿಕ ಆಕೆಯ ವಿಷಯ ತನಗೆ ಗೊತ್ತಿಲ್ಲ’ ಎಂದು ಪೊಲೀಸರೂ ನಂಬುವಂತೆ ವಾದಿಸಿದ್ದ.

ಇದನ್ನೂ ಓದಿ: ಗರ್ಲ್‌ ಫ್ರೆಂಡ್‌ ಮೋಸ ಮಾಡಿದ್ಳೆಂದು ಗಂಟಲು ಸೀಳಿ, ಮೃತದೇಹದೊಂದಿಗೆ ವಿಡಿಯೋ ಪೋಸ್ಟ್‌ ಮಾಡಿದ..!

ಡಿಜಿಟಲ್‌ ತನಿಖೆ:
ಆದರೆ ಅಫ್ತಾಬ್‌ನ ಮೇಲೆ ಸಣ್ಣ ಅನುಮಾನ ಹೊಂದಿದ್ದ ಪೊಲೀಸರು, ಶ್ರದ್ಧಾಳ ಮೊಬೈಲ್‌ ಕರೆ ಮತ್ತು ಇತರೆ ವ್ಯವಹಾರಗಳ ಮಾಹಿತಿಯನ್ನು ಕಲೆ ಹಾಕತೊಡಗಿದರು. ಈ ವೇಳೆ ಮೇ 22- 26ರ ಅವಧಿಯಲ್ಲಿ ಶ್ರದ್ಧಾಳ ಬ್ಯಾಂಕ್‌ ಖಾತೆಯಿಂದ ಅಫ್ತಾಬ್‌ನ ಖಾತೆಗೆ 54,000 ರೂ. ಹಣ ವರ್ಗಾವಣೆಯಾಗಿದ್ದು ಕಂಡುಬಂದಿತ್ತು. ಅದು ಕೂಡಾ ಮೆಹ್ರೌಲಿಯಿಂದಲೇ. ಆಕೆಯ ಮೊಬೈಲ್‌ ಆ್ಯಪ್‌ ಬಳಸಿಯೇ ವರ್ಗ ಮಾಡಲಾಗಿತ್ತು. ಅಫ್ತಾಬ್‌ ಹೇಳಿದಂತೆ ಶ್ರದ್ಧಾ ಮೇ 22ರಂದೇ ಮನೆ ಬಿಟ್ಟು ಹೋಗಿದ್ದರೆ ಆಕೆಯ ಮೊಬೈಲ್‌ನಿಂದ ಹಣ ವರ್ಗ ಹೇಗೆ ಸಾಧ್ಯ ಎಂಬ ಪ್ರಶ್ನೆ ಮುಂದಿಟ್ಟು ಪೊಲೀಸರು ಅಫ್ತಾಬ್‌ನನ್ನು ಪ್ರಶ್ನಿಸಿದ್ದರು.

ಇದಲ್ಲದೇ ಶ್ರದ್ಧಾ ಜೀವಂತವಾಗಿದ್ದಾಳೆ ಎಂಬುದನ್ನು ನಂಬಿಸಲು ಅಫ್ತಾಬ್‌ ಆಕೆಯ ಇನ್‌ಸ್ಟಾಗ್ರಾಂ ಖಾತೆಯಿಂದ ಮೇ 31ರಂದು ಆಕೆಯ ಸ್ನೇಹಿತರಿಗೆ ಸಂದೇಶ ಕಳಿಸಿದ್ದ. ಮೇ 22 ರಂದೇ ಶ್ರದ್ಧಾ ಮೊಬೈಲ್‌ ಜತೆ ಮನೆ ಬಿಟ್ಟು ಹೋದ ಬಳಿಕವೂ ಹೇಗೆ ಆಕೆಯ ಮೊಬೈಲ್‌ ಮೆಹ್ರೌಲಿಯಲ್ಲಿತ್ತು. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗ ತನ್ನ ಕಟ್ಟು ಕತೆಯನ್ನು ಸಮರ್ಥಿಸಿಕೊಳ್ಳಲಾರದೇ ಅಫ್ತಾಬ್‌ ಕೊನೆಯಲ್ಲಿ ತಾನೇ ಶ್ರದ್ಧಾಳನ್ನು ಹತ್ಯೆಗೈದಿದ್ದಾಗಿ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Nidhi Gupta Murder Case: ಇಸ್ಲಾಂ ಸೇರದ್ದಕ್ಕೆ ನಾಲ್ಕನೇ ಅಂತಸ್ತಿಂದ ನೂಕಿ ಕೊಂದ..!

Follow Us:
Download App:
  • android
  • ios