*   ಮತ್ತೊಬ್ಬನೊಂದಿಗೆ ಪ್ರೇಯಸಿಗೆ ಸ್ನೇಹ*   ಹೊಡೆದು ಕೊಂದು ಆಸ್ಪತ್ರೆಗೆ ದಾಖಲಿಸಿ ಪರಾರಿ ಆಗಿದ್ದವನ ಸೆರೆ*   ಗಂಡ, ಮಕ್ಕಳಿಂದ ದೂರವಾಗಿದ್ದ ಮಹಿಳೆ ಜತೆ ಗೆಳೆತನ 

ಬೆಂಗಳೂರು(ಜ.14): ತಾನು ಚೆನ್ನಾಗಿ ನೋಡಿಕೊಂಡರೂ ಮತ್ತೊಬ್ಬನೊಂದಿಗೆ ಅಕ್ರಮ ಸಂಬಂಧ(Illicit Relationship) ಹೊಂದಿದ್ದಾಳೆ ಎಂದು ಕೋಪಗೊಂಡು ತನ್ನ ಗೆಳತಿಗೆ ಸುತ್ತಿಗೆಯಿಂದ ಹೊಡೆದು ಕೊಲೆ(Murder) ಮಾಡಿ ಪರಾರಿಯಾಗಿದ್ದ ಕೂಲಿ ಕಾರ್ಮಿಕನೊಬ್ಬನನ್ನು ಕೋಣನಕುಂಟೆ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.

ಬೀರೇಶ್ವರ ನಗರದ ನಿವಾಸಿ ಮಂಜು ಬಂಧಿತನಾಗಿದ್ದು(Arrest), ಇತ್ತೀಚೆಗೆ ತನ್ನ ಸ್ನೇಹಿತೆ ಮಂಜುಳಾ (35) ಮೇಲೆ ಹಲ್ಲೆ ನಡೆಸಿ ಬಳಿಕ ಆಕೆಯನ್ನು ಮನೆ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಆರೋಪಿ ಪರಾರಿಯಾಗಿದ್ದ. ಕೊನೆಗೆ ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ಆರೋಪಿಯನ್ನು(Accused) ಪತ್ತೆ ಹಚ್ಚಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಕೊಲೆ ಅಪರಾಧಿಗೆ ಮುತ್ತಿಕ್ಕಿದ ಮಹಿಳಾ ನ್ಯಾಯಾಧೀಶೆ... ವಿಡಿಯೋ ವೈರಲ್

ಲವ್‌, ಸೆಕ್ಸ್‌, ದೋಖಾ: 

ಆನೇಕಲ್‌ ತಾಲೂಕು ಮರಸೂರು ಸಮೀಪದ ಮಡಿವಾಳ ಗ್ರಾಮದ ಮಂಜುಳಾ, ಏಳು ವರ್ಷಗಳ ಹಿಂದೆ ಪತಿ ಮತ್ತು ಮಕ್ಕಳದಿಂದ ಪ್ರತ್ಯೇಕವಾಗಿದ್ದಳು. ಬಳಿಕ ನಗರದಲ್ಲಿ ಹೌಸ್‌ ಕೀಪಿಂಗ್‌ ಕೆಲಸ ಮಾಡುತ್ತಿದ್ದ ಆಕೆಗೆ ಮಳವಳ್ಳಿ ತಾಲೂಕಿನ ಬಾರ್‌ ಬೆಂಡಿಂಗ್‌ ಕೆಲಸಗಾರ ಮಂಜು ಪರಿಚಯವಾಗಿದೆ. ಈ ಸ್ನೇಹದ ಬಳಿಕ ಬೀರೇಶ್ವರ ನಗರದಲ್ಲಿ ಒಟ್ಟಿಗೆ ಅವರು ನೆಲೆಸಿದ್ದರು.

ಆದರೆ ಇತ್ತೀಚೆಗೆ ಬೇರೊಬ್ಬ ವ್ಯಕ್ತಿ ಜತೆ ಮಂಜುಳಾ ಸ್ನೇಹ ಹೊಂದಿರುವ ಸಂಗತಿ ಆತನಿಗೆ ಗೊತ್ತಾಗಿದೆ. ಈ ವಿಚಾರ ತಿಳಿದ ಬಳಿಕ ಗೆಳತಿ ಜತೆ ಮಂಜು ಜಗಳವಾಡಿದ್ದ. ‘ನಾನೇ ಚೆನ್ನಾಗಿ ನೋಡಿಕೊಳ್ಳುತ್ತೇನೆ. ಹೀಗಿದ್ದರೂ ನಿನಗೆ ಮತ್ತೊಬ್ಬ ವ್ಯಕ್ತಿ ಸಾಂಗತ್ಯ ಬೇಕೆ’ ಎಂದು ಮಂಜುಳಾ ಮೇಲೆ ಆತ ಜಗಳ ಮಾಡಿದ್ದ. ಈ ಅವರ ಮಧ್ಯೆ ಮನಸ್ತಾಪ ಮುಂದುವರೆದಿತ್ತು.

ಜನವರಿ 7ರಂದು ರಾತ್ರಿ ಮನೆಯಲ್ಲಿ ಮಂಜು ಮತ್ತು ಮಂಜುಳಾ ಒಟ್ಟಿಗೆ ಮದ್ಯ ಸೇವಿಸಿದ್ದಾರೆ. ಆಗ ತನಗೆ ಮತ್ತಷ್ಟುಮದ್ಯ ಬೇಕು ಎಂದು ಆಕೆ ಹಠ ಮಾಡಿದ್ದಾಳೆ. ಆ ವೇಳೆ ಅಕ್ರಮ ಸಂಬಂಧ ವಿಚಾರ ತೆಗೆದು ಮಂಜು ಕೂಗಾಡಿದ್ದಾನೆ. ಈ ಹಂತದಲ್ಲಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಆಗ ಕೆರಳಿದ ಮಂಜು, ಸುತ್ತಿಗೆಯಿಂದ ಆಕೆಯ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ತೊಡೆಯ ಮೂಳೆಗಳನ್ನು ಮುರಿದು ಹಾಕಿದ ಆತ, ಬಳಿಕ ಮರು ದಿನ ಬೆಳಗ್ಗೆ ಮನೆ ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾನೆ. ವೈದ್ಯರು ಗಾಯಾಳುವನ್ನು ಪರೀಕ್ಷಿಸುವ ವೇಳೆ ಆಸ್ಪತ್ರೆಯಿಂದ ಆರೋಪಿ ತಪ್ಪಿಸಿಕೊಂಡಿದ್ದ. ಎರಡು ದಿನಗಳು ಮೃತಳ ಗುರುತು ಪತ್ತೆಯಾಲಿಲ್ಲ. ಕೊನೆಗೆ ಆಕೆಯ ಮೊಬೈಲ್‌ ಸಂಖ್ಯೆ ಪರಿಶೀಲಿಸಿದಾಗ ಮೃತಳ ಸೋದರನ ಸಂಪರ್ಕ ಸಿಕ್ಕಿದೆ. ಬಳಿಕ ಆತನಿಗೆ ಘಟನೆ ಕುರಿತು ಮಾಹಿತಿ ಠಾಣೆಗೆ ಕರೆಸಿಕೊಳ್ಳಲಾಯಿತು. ಮೃತಳ ಸೋದರ ನೀಡಿದ ಮಾಹಿತಿ ಮೇರೆಗೆ ಆರೋಪಿಗೆ ಹುಡುಕಾಟ ನಡೆಸಲಾಯಿತು. ತನ್ನೂರಿಗೆ ಪರಾರಿಯಾಗಲು ಆತ ಹೊರಟಿದ್ದಾಗ ಬಂಧಿಸಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Brutal Murder: ನಡುರಸ್ತೆಯಲ್ಲೇ ರಿಯಲ್‌ ಎಸ್ಟೇಟ್‌ ಏಜೆಂಟ್‌ ಬರ್ಬರ ಹತ್ಯೆ

ರೂ. 1200 ಸಾಲಕ್ಕಾಗಿ ಕೊಲೆ ಕೇಸ್‌: 9 ಮಂದಿ ಸೆರೆ

ಕೇವಲ 1200 ರು. ಸಾಲದ ವಿಚಾರವಾಗಿ ನಡೆದ ಜಗಳದ ವೇಳೆ ನಡೆದ ಕೊಲೆ ಪ್ರಕರಣ (Murder Case) ಸಂಬಂಧ ಕೋಣನಕುಂಟೆ ಠಾಣೆ ಪೊಲೀಸರು 9 ಮಂದಿ ಆರೋಪಿಗಳನ್ನು (Accused) ಬಂಧಿಸಿದ್ದು, ಮೂವರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದಿದ್ದಾರೆ.

ಹರಿನಗರ ನಿವಾಸಿ ಕಿರಣ್‌(19), ಪವನ್‌(19), ಕಾರ್ತಿಕ್‌(19), ಮಣಿಕಂಠ(19), ಪವನ್‌ ಕುಮಾರ್‌(20), ಅಭಿಷೇಕ್‌(19), ಅನಿಲ್‌ ಕುಮಾರ್‌(20), ಮುನೇಶ್‌ ಕುಮಾರ್‌(19), ಶಶಾಂಕ್‌(18) ಬಂಧಿತರು. ಆರೋಪಿಗಳು ಜ.4ರಂದು ಮೆಹಬೂಬ್‌(25) ಎಂಬಾತನ ಹತ್ಯೆಗೈದು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.