Asianet Suvarna News Asianet Suvarna News

Brutal Murder: ನಡುರಸ್ತೆಯಲ್ಲೇ ರಿಯಲ್‌ ಎಸ್ಟೇಟ್‌ ಏಜೆಂಟ್‌ ಬರ್ಬರ ಹತ್ಯೆ

*   ಕಾರನ್ನು ಅಡ್ಡಗಟ್ಟಿ ಕೊಲೆ
*   ಆನೇಕಲ್‌ಕಲ್ಲಿ ನಡೆದ ಘಟನೆ
*   ಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ
 

Real Estate Agent Murder in Anekal grg
Author
Bengaluru, First Published Jan 6, 2022, 5:02 AM IST
  • Facebook
  • Twitter
  • Whatsapp

ಆನೇಕಲ್‌(ಜ.06):  ರಿಯಲ್‌ ಎಸ್ಟೇಟ್‌ ಏಜೆಂಟ್‌ವೊಬ್ಬರನ್ನು(Real Estate Agent) ನಡುರಸ್ತೆಯಲ್ಲಿ ಅಡ್ಡಗಟ್ಟಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ(Murder) ಮಾಡಿರುವ ಘಟನೆ ಆನೇಕಲ್‌ ಪಟ್ಟಣದಲ್ಲಿ ಬುಧವಾರ ರಾತ್ರಿ 8.30ರ ವೇಳೆಗೆ ನಡೆದಿದೆ. ಆಂಧ್ರಪ್ರದೇಶದ(Andhra Pradesh) ನೆಲ್ಲೂರು ಮೂಲದ ರಾಜಶೇಖರ್‌(38) ಕೊಲೆಯಾದವರು. ಆಂಧ್ರ ಮೂಲದವರಾದ ರಾಜಶೇಖರ್‌ ಬಿಟಿಎಂಎ ಲೇಔಟ್‌ನಲ್ಲಿ ವಾಸವಿದ್ದರು.

ಜಮೀನು ಮಾರಾಟ ಸಂಬಂಧ ದಾಖಲಾಗಿದ್ದ ಚೆಕ್‌ ಬೌನ್ಸ್‌(Check Bounce) ಕೇಸ್‌ವೊಂದರ ಸಂಬಂಧ ರಾಜಶೇಖರ್‌ ಆನೇಕಲ್‌ನಲ್ಲಿ(Anekal) ನ್ಯಾಯಾಲಯಕ್ಕೆ(Court) ಹಾಜರಾಗಿ, ಬಳಿಕ ವಕೀಲರ ಕಚೇರಿ ಮಾತುಕತೆ ನಡೆಸಿ ಮನೆಗೆ ಕಾರಿನಲ್ಲಿ ವಾಪಸ್‌ ತೆರಳುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಆನೇಕಲ್‌ ಪಟ್ಟಣದ ಶಿವಾಜಿ ಸರ್ಕಲ್‌ನ ಮೋರ್‌ ಮಾರುಕಟ್ಟೆ ಬಳಿ ಕಾರನ್ನು ಅಡ್ಡಗಟ್ಟಿ ಏಕಾಏಕಿ ದಾಳಿ(Attack) ನಡೆಸಿದ್ದಾರೆ. ಕಾರಿನ ಗಾಜು ಒಡೆದು, ಮಾರಕಾಸ್ತ್ರಗಳಿಂದ ರಾಜಶೇಖರ್‌ ಮೇಲೆ ಹಲ್ಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದು ಪರಾರಿ ಆಗಿದ್ದಾರೆ ಎಂದು ಪೊಲೀಸರು(Police) ಹೇಳಿದ್ದಾರೆ.

Woman Murder: ಕಿಟಕಿಯಲ್ಲಿ ಇಣುಕಿದ ಕಿರಾತಕರು, ಪ್ರಶ್ನೆ ಮಾಡಿದ್ದಕ್ಕೆ 3 ಮಕ್ಕಳ ತಾಯಿ ಕೊಂದೇ ಬಿಟ್ಟರು!

ಕಾರಿನಲ್ಲಿ ಹಲವು ದಾಖಲೆಗಳು ಪತ್ತೆಯಾಗಿದ್ದು, ಹತ್ಯೆಗೆ ಕಾರಣ ತಿಳಿದುಬಂದಿಲ್ಲ. ತನಿಖೆ(Investigation) ಚುರುಕುಗೊಳಿಸಲಾಗಿದೆ ಎಂದು ಡಿವೈಎಸ್ಪಿ ಮಲ್ಲೇಶ್‌ ತಿಳಿಸಿದ್ದಾರೆ. ರಾಜಶೇಖರ್‌ ಮೇಲೆ ಗುಂಡಿನ ದಾಳಿ ಸಹ ನಡೆದಿದೆ ಎನ್ನಲಾಗಿದ್ದು, ಈ ಬಗ್ಗೆ ಪೊಲೀಸರು ಖಚಿತ ಮಾಹಿತಿ ನೀಡಿಲ್ಲ.

1500 ರೂ. ಗಾಗಿ ಕೊಲೆಯೇ ನಡೆದು ಹೋಯ್ತು!

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಕೊಲೆ ನಡೆಯುವ ಪ್ರಕರಣಕ್ಕೆ ಇಲ್ಲಿ  ಮತ್ತೊಂದು ಸೇರ್ಪಡೆ.  1500 ರೂಪಾಯಿಗೆ ಬರ್ಬರ ಕೊಲೆ (Murder) ಆಗಿಹೋಗಿದೆ. ಈ ಬಗ್ಗೆ ಬೆಂಗಳೂರಿನ(Bengaluru) ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೆಹಬೂಬ್(19) ಕೊಲೆಯಾದ ಯುವಕ. ಲಾಂಗು-ಮಚ್ಚಿನಿಂದ ಕೊಚ್ಚಿ ಮೆಹಬೂಬ್ ಕೊಲೆ ಮಾಡಲಾಗಿದೆ. ಲಲಿತ್ ಹಾಗೂ ಮಣಿಕಂಠ ಎಂಬವರ ನಡುವೆ ಹಣದ (Money) ವಿಚಾರಕ್ಕೆ ಗಲಾಟೆ ನಡೆದಿತ್ತು. ಈ ವೇಳೆ ಮೆಹಬೂಬ್ ಲಲಿತ್ ಬಣದಲ್ಲಿ ಕಾಣಿಸಿಕೊಂಡಿದ್ದ. ಗಲಾಟೆ ಅತಿರೇಕಕ್ಕೆ ಹೋಗಿ ಮೆಹಬೂಬ್ ನನ್ನ ಕೊಚ್ಚಿ  ಕೊಲೆ ಮಾಡಲಾಗಿದೆ.

ಒಟ್ಟು 13 ಆರೋಪಿಗಳು ಸೇರಿ  ಹತ್ಯೆ ಮಾಡಿದ್ದಾರೆ.  ಮಂಗಳವಾರ ತಡರಾತ್ರಿ ಎಕೆ ಕಾಲೋನಿ ಬಳಿ ಹತ್ಯೆ ಮಾಡಲಾಗಿದೆ.  ಸದ್ಯ ಕೊಲೆ ಆರೋಪಿಗಳಾದ ಮಣಿಕಂಠ, ಪವನ್,ಕಿರಣ್, ಕಾರ್ತಿಕ್ ಸೇರಿದಂತೆ 13 ಆರೋಪಿಗಳಿಗಾಗಿ ಪೊಲೀಸರ ಶೋಧಕಾರ್ಯ ಮುಂದುವರಿದಿದೆ.

ನೂರು ರೂ. ಕೇಳಿದ ಗೆಳೆಯನ ಹತ್ಯೆ:  

ಮದ್ಯಪಾನ (Liquor)ಮಾಡಲು 100 ಕೇಳಿದವನಿಗೆ ತೂಕ ಮಾಡುವ ಬಟ್‌ನಿಂದ ತಲೆಗೆ ಹೊಡೆದು ಕೊಂದು (Murder) ಬಳಿಕ ಅಪಘಾತವಾಗಿದೆ ಎಂದು ಸುಳ್ಳಿನ ಕತೆ ಹೇಳಿ ತಪ್ಪಿಸಿಕೊಂಡಿದ್ದ ಮಾಂಸದಂಗಡಿ ಕೆಲಸಗಾರನೊಬ್ಬ ಕೊಡಿಗೇಹಳ್ಳಿ ಠಾಣೆ ಪೊಲೀಸರಿಗೆ(Bengaluru Police) ಸಿಕ್ಕಿಬಿದ್ದಿದ್ದ.

Sexual Harassment : ಮದುವೆಗೆ ಅಡ್ಡಿ ಎಂದು ಮಗುವಿನ ಮೇಲೆ ಎರಗಿದ ಅಜ್ಜಿಯ ಬಾಯ್ ಫ್ರೆಂಡ್!

ಮತ್ತಿಕೆರೆ ನಿವಾಸಿ ಪ್ರತೀಕ್‌.ಎಸ್‌.ಯಾದವ್‌ (28) ಕೊಲೆಯಾಗಿದ್ದ. ಈ ಹತ್ಯೆ ಸಂಬಂಧ ಕೇರಳ (Kerala) ಮೂಲದ ಸಮೀಶ್‌ನನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದರು.  ಕೊಡಿಗೇಹಳ್ಳಿ ತಿಂಡ್ಲು ಸರ್ಕಲ್‌ನ ಕರ್ನಾಟಕ ಫೋರ್ಕ್ ಮಟನ್‌ ಸ್ಟಾಲ್‌ನಲ್ಲಿ ಈ ಕೃತ್ಯ ನಡೆದಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಐದಾರು ತಿಂಗಳಿಂದ ಸುರೇಶ್‌ ಎಂಬುವರಿಗೆ ಸೇರಿದ ಕೊಡಿಗೇಹಳ್ಳಿ ತಿಂಡ್ಲು ಸರ್ಕಲ್‌ನಲ್ಲಿದ್ದ ಕರ್ನಾಟಕ ಫೋರ್ಕ್ ಮಟನ್‌ ಸ್ಟಾಲ್‌ನಲ್ಲಿ ಕೇರಳ ಮೂಲದ ಸಮೀಶ್‌ ಮಾಂಸ ಕತ್ತರಿಸುವ ಕೆಲಸ ಮಾಡುತ್ತಿದ್ದ. ಆ ಅಂಗಡಿಗೆ ತನ್ನ ಮಾಲೀಕನ ಜತೆ ಆಗಾಗ್ಗೆ ಬರುತ್ತಿದ್ದ ಪ್ರತೀಕ್‌ ಜತೆ ಸಮೀಶ್‌ಗೆ ಸ್ನೇಹವಾಗಿತ್ತು. ಇದೇ ಗೆಳತನದಲ್ಲಿ ಅ.17ರಂದು ಸುರೇಶ್‌ ಜತೆ ಅಂಗಡಿಗೆ ಬಂದ ಪ್ರತೀಕ್‌, ಮದ್ಯ ಸೇವನೆಗೆ .100 ಕೊಡುವಂತೆ ಸಮೀಶ್‌ಗೆ ಕೇಳಿದ್ದಾನೆ. ಆಗ ತನ್ನ ಬಳಿ ಹಣವಿಲ್ಲವೆಂದು ಹೇಳಿದಾಗ ಗೆಳೆಯನಿಗೆ ಪ್ರತೀಕ್‌ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇದರಿಂದ ಕೆರಳಿದ ಆರೋಪಿ, ಪ್ರತೀಕ್‌ ತಲೆಗೆ 1 ಕೆ.ಜಿ. ತೂಕದ ಬಟ್‌ನಿಂದ ಹೊಡೆದಿದ್ದಾನೆ. ಆಗ ಕೆಳಗೆ ಬಿದ್ದ ಗಾಯಾಳುವನ್ನು ತನ್ನ ಸೋದರನ ಸುಬ್ರಮಣಿ ಮೂಲಕ ಆಸ್ಪತ್ರೆಗೆ ಮಾಲೀಕ ಸುರೇಶ್‌ ದಾಖಲಿಸಿದ್ದರು. ಘಟನೆ ಬಳಿಕ ಬಂಧನ ಭೀತಿಯಿಂದ ಕೆಲಸ ತೊರೆದ ಆರೋಪಿ, ಆನೇಕಲ್‌ ತಾಲೂಕಿಗೆ ಹೋಗಿ ಗಾರೆ ಕೆಲಸ ಮಾಡುತ್ತಿದ್ದ.

Follow Us:
Download App:
  • android
  • ios