ಊಟದ ತಟ್ಟೆತೊಳೆಯುವ ವಿಚಾರದಲ್ಲಿ ಸ್ನೇಹಿತನ ಮೇಲೆ ನಡೆದ ಹಲ್ಲೆ ಸಾವಿನಲ್ಲಿ ಅಂತ್ಯವಾದ ಘಟನೆ ಮಂಗಳೂರಿನ ಮರವೂರಿನಲ್ಲಿ ಸಂಭವಿಸಿದೆ.
ಮಂಗಳೂರು (ಮಾ.7) : ಊಟದ ತಟ್ಟೆತೊಳೆಯುವ ವಿಚಾರದಲ್ಲಿ ಸ್ನೇಹಿತನ ಮೇಲೆ ನಡೆದ ಹಲ್ಲೆ ಸಾವಿನಲ್ಲಿ ಅಂತ್ಯವಾದ ಘಟನೆ ಮಂಗಳೂರಿನ ಮರವೂರಿನಲ್ಲಿ ಸಂಭವಿಸಿದೆ. ಸಂಜಯ್ ಸಾವಿಗೀಡಾದ ನತತೃಷ್ಟ. ಸುಹಾನ್ ಈತನನ್ನು ಕೊಲೆ ಮಾಡಿದ ಸ್ನೇಹಿತ.
ಸ್ನೇಹಿತರಾದ ರಾಜನ್, ಸಂಜಯ್ ಮತ್ತು ಸುಹಾನ್ ಮರವೂರು ಗ್ರಾಮದಲ್ಲಿರುವ ಕೊಸ್ಟಲ್‌ಗಾರ್ಡ್ ಸೈಟ್(Coastguard site)ನಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದು, ಈ ಸೈಟ್‌ನ ಶೆಡ್ ಗಳಲ್ಲಿಯೇ ವಾಸಮಾಡಿಕೊಂಡಿದ್ದರು. ಭಾನುವಾರ ರಾತ್ರಿ ಊಟದ ತಟ್ಟೆತೊಳೆಯುವ ವಿಚಾರದಲ್ಲಿ ಸ್ನೇಹಿತರಾದ ಸಂಜಯ್ ಮತ್ತು ಸುಹಾನ್ ಯಾದವ್ ಗಲಾಟೆ ಪ್ರಾರಂಭಿಸಿದ್ದರು. ನಂತರ ಸುಹಾನ್, ಸಂಜಯ್‌ನನ್ನು ಉದ್ದೇಶಿಸಿ, ನಾನು ನಿನ್ನ ಮನೆಯ ಕೆಲಸದವನಲ್ಲ, ನನಗೆ ತಟ್ಟೆತೊಳೆಯಲು ಹೇಳುತ್ತಿಯಾ ಎಂದು ಕೆಟ್ಟದಾಗಿ ಬೈಯುತ್ತಾ ಕೈಯಿಂದ ಹಲ್ಲೆ ಮಾಡಿದ್ದನು. ಆಗ ರೂಮಿನಲ್ಲಿದ್ದ ಇತರೆ ಸ್ನೇಹಿತರು ಗಲಾಟೆಯನ್ನು ಬಿಡಿಸಿ ನಂತರ ತಟ್ಟೆಗಳಿಗೆ ಅನ್ನ ಬಡಿಸುತ್ತಿದ್ದಾಗ ಸುಹಾನ್ ಏಕಾಏಕಿ ಸಂಜಯ್ ಬಳಿ ಹೋಗಿ ನಿನ್ನನ್ನು ಸಾಯಿಸುತ್ತೇನೆ ಎಂದು ಹೇಳುತ್ತಾ ಬಲವಾಗಿ ಹಿಂದಕ್ಕೆ ದೂಡಿದ್ದನು. ಪರಿಣಾಮ ಸಂಜಯ್ ಹಿಮ್ಮುಖವಾಗಿ ಕೆಳಗಿ ಬಿದ್ದು ತಲೆಗೆ ಗಂಭೀರ ಸ್ವರೂಪದ ಗಾಯಗೊಂಡಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದರು.
ಆಟೋ ಹತ್ತಿದ್ದ ಅಸ್ಸಾಂ ಯುವಕರ ಬೆದರಿಸಿ ಹಣ ಸುಲಿಗೆ: ಇಬ್ಬರ ಸೆರೆ
ಆಟ ಆಡುವಾಗ ಮಾತಿಗೆ ಮಾತು ಬೆಳೆದು ಭೀಕರ ಕೊಲೆ:
ಆನೇಕಲ್: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿದ ಘಟನೆ ಬನ್ನೇರುಘಟ್ಟಠಾಣಾ ವ್ಯಾಪ್ತಿಯ ಹಕ್ಕಿ ಪಿಕ್ಕಿ ಕಾಲೋನಿಯಲ್ಲಿ ನಡೆದಿದೆ.
ದೊಡ್ಡ ಮಾದಯ್ಯ ಕೊಲೆಯಾದ ವ್ಯಕ್ತಿ, ಹಳ್ಳಿಯ ಮುಂದಿನ ಅಶ್ವತ್ಥಕಟ್ಟೆಯಲ್ಲಿ ಹುಣಿಸೆ ಬೀಜ ಚೆಲ್ಲಿ ಆಡುವ ಪಚ್ಚಿ ಆಟದಲ್ಲಿ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಕುಡಿದ ಅಮಲಿನಲ್ಲಿದ್ದ ದೊಡ್ಡಮಾದಯ್ಯ ಆಟಗಾರರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇದರಿಂದ ಪರಿಸ್ಥಿತಿ ಕೋಪಕ್ಕೆ ಹೋಗಿ ಕೆಳಗೆ ಬಿದ್ದ ಮಾದಯ್ಯನ ತಲೆ ಮೇಲೆ ಕಲ್ಲು ಎತ್ತಿಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ. ವಿಷಯ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಬಂದು ವಿಚಾರಣೆ ನಡೆಸಿ ಶಂಕೆ ಬಂದ 6 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಪ್ರಿಂಟಿಂಗ್ ಪ್ರೆಸ್ ಮಾಲಿಕ ಲಿಯಾಕತ್ ಹತ್ಯೆಗೆ ಕಾರಣವಾಗಿದ್ದು ಸಲಿಂಗಕಾಮ!
