Shivamogga:ಭದ್ರಾವತಿಯ ಲಾಡ್ಜ್ವೊಂದರಲ್ಲಿ ಪ್ರೇಯಸಿಯಿಂದಲೇ ಪ್ರಿಯಕರನ ಭೀಕರ ಹತ್ಯೆ!
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಹೆರಿಟೇಜ್ ಲಾಡ್ಜ್ ನಲ್ಲಿ ಪ್ರೇಯಸಿಯಿಂದಲೇ ಪ್ರಿಯಕರನ ಹತ್ಯೆಯಾಗಿರುವ ಭೀಕರ ಘಟನೆ ನಡೆದಿದೆ. ಪ್ರಿಯಕರನ ಕುತ್ತಿಗೆ ಕೊಯ್ದು ಕೊಲೆ ಮಾಡಲಾಗಿದೆ.

ಭದ್ರಾವತಿ (ಜ.13): ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಹೆರಿಟೇಜ್ ಲಾಡ್ಜ್ ನಲ್ಲಿ ಪ್ರೇಯಸಿಯಿಂದಲೇ ಪ್ರಿಯಕರನ ಹತ್ಯೆಯಾಗಿರುವ ಭೀಕರ ಘಟನೆ ನಡೆದಿದೆ. ಹಾಸನ ಮೂಲದ ಪರ್ವೇಜ್ ಖಾನ್ ಎಂಬ ವ್ಯಕ್ತಿಯ ಕೊಲೆಯಾಗಿದೆ. ಪ್ರೇಯಸಿಯೇ ಈ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಲಾಗುತಿದ್ದು ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.
ಹಾಸನದ ಚನ್ನರಾಯಪಟ್ಟಣದ ಮೂಲದ ಆಯಿಷಾ ಮತ್ತು ಜಾವಗಲ್ ಮೂಲದ ಪರ್ವೇಜ್ ಖಾನ್ ಇಬ್ಬರು ಕಳೆದ ಮೂರು ನಾಲ್ಕು ವರ್ಷಗಳಿಂದ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇವರಿಬ್ಬರ ಸಂಬಂಧದ ವಿಚಾರಕ್ಕೆ ಮನನೊಂದಿದ್ದ ಆಯಿಷಾಳ ಪತಿ ಇವಳನ್ನು ಬಿಟ್ಟು ದೂರ ಉಳಿದಿದ್ದ ಎನ್ನಲಾಗುತ್ತಿದೆ.
ನಿನ್ನೆಯ ದಿನ ರಾತ್ರಿ ಪರ್ವೇಜ್ ಹಾಗೂ ಆಯಿಷಾ ಭದ್ರಾವತಿಗೆ ಬಂದು ಹೆರಿಟೇಜ್ ಲಾಡ್ಜ್ ನಲ್ಲಿ ರೂಮ್ ಮಾಡಿಕೊಂಡಿದ್ದಾರೆ. ನಿನ್ನೆ ರೂಮ್ನಲ್ಲಿ ಆಯೇಶಾ ಹಾಗೂ ಪರ್ವೇಜ್ ನಡುವೆ ಜಗಳವಾಗಿದೆ.
ಕಡಲ ತಡಿಯಲ್ಲಿ ಗಾಂಜಾ ಘಾಟು: ಇದು ಮಂಗಳೂರು 'ಗಾಂಜಾ' ಕೇಸ್'ನ ಕಂಪ್ಲೀಟ್ ಕಹಾನಿ
ಈ ವೇಳೆ ಪರ್ವೇಜ್ ಕುತ್ತಿಗೆ ಕೊಯ್ದು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಬಳಿಕ ರೂಮಿನಿಂದ ಆಯೇಶಾ ವಾಪಸ್ ತೆರಳಿದ್ದಾಳೆ. ಮೂಲಗಳ ಪ್ರಕಾರ ಪ್ರೇಯಸಿ ಹಾಸನದಲ್ಲಿ ಪೊಲೀಸರಿಗೆ ಶರಣಾಗಿದ್ದಾಳೆ ಎನ್ನಲಾಗುತ್ತಿದೆ. ಸದ್ಯ ಸ್ಥಳಕ್ಕೆ ಓಲ್ಡ್ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿಕೊಟ್ಟಿದ್ದು ಪರಿಶೀಲನೆ ನಡೆಸ್ತಿದ್ದಾರೆ.
ದಿನಕ್ಕೊಂದು ರಾಜ್ಯ, ಗಂಟೆಗೊಂದು ಸಿಮ್, ಸ್ಯಾಂಟ್ರಿ ರವಿ ಬಂಧನ ಮಾಹಿತಿ ಬಿಚ್ಚಿಟ್ಟ ಎಡಿಜಿಪಿ!
ಭದ್ರಾವತಿ ನಗರ ವೃತ್ತದ ಸರ್ಕಲ್ ಇನ್ಸ್ಪೆಕ್ಟರ್ ರಾಘವೇಂದ್ರ ಕಂಡಿಕೆ ಹಾಗೂ ಹಳೆ ನಗರ ಠಾಣೆಯ ಪಿಎಸ್ಐ ಕವಿತಾ ನೇತೃತ್ವದಲ್ಲಿ ಮಹಜರ್ ನಡೆಸಲಾಗುತ್ತಿದೆ. ಬಳಿಕ ಭದ್ರಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಗುತ್ತಿದೆ.