ಬಾರ್ ಸಿಂಗರ್ ಹಣೆಗೆ ರಿವಾಲ್ವರ್ ಇಟ್ಟ ವೇಳೆ ಅಚಾನಕ್ಕಾಗಿ ಸಿಡಿದ ಗುಂಡು, ಪಾಗಲ್ ಪ್ರೇಮಿಗೆ ಗಾಯ!
ಬಾರಿನಲ್ಲಿ ಆಯೋಜಿಸುವ ಆರ್ಕೆಸ್ಟ್ರಾದಲ್ಲಿ ಗಾಯಕಿ ವಿರುದ್ದ ರೊಚ್ಚಿಗೆದ್ದ ಪಾಗಲ್ ಪ್ರೇಮಿ, ಆಕೆ ಮೇಲೆ ಗುಂಡು ಹಾರಿಸಲು ಮುಂದಾಗಿದ್ದಾನೆ. ಆದರೆ ಅಚಾನಕ್ಕಾಗಿ ಸಿಡಿದ ಗುಂಡು ಪಾಗಲ್ ಪ್ರೇಮಿಯನ್ನೇ ತೀವ್ರವಾಗಿ ಗಾಯಗೊಳಿಸಿದ ಘಟನೆ ನಡೆದಿದೆ.

ಮುಂಬೈ(ನ.01) ಹಾಡು ಕೇಳುತ್ತಾ ಬಾರಿನಲ್ಲಿ ಗುಟುಕು ನಶೆ ಏರಿಸುವವರ ಸಂಖ್ಯೆ ದೊಡ್ಡದಿದೆ. ಮುಂಬೈ ಮಹಾನಗರಿಯಲ್ಲಿನ ಬಹುತೇಕ ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಆರ್ಕೆಸ್ಟ್ರಾ ಕೂಡ ಇದ್ದೇ ಇರುತ್ತೆ. ಹೀಗೆ ಹಾಡು ಹಾಡುತ್ತಾ ಬಾರಿನಲ್ಲಿದ್ದವರನ್ನು ರಂಜಿಸುತ್ತಿದ್ದ ಗಾಯಕಿ ಮೇಲೆ ಗುಂಡು ಹಾರಿಸಲು ಬಂದ ಪಾಗಲ್ ಪ್ರೇಮಿಯೇ ಗಾಯಗೊಂಡ ಘಟನೆ ನಡೆದಿದೆ. ಮಹಾರಾಷ್ಟ್ರದ ಬದ್ಲಾಪುರ ವಲಯದಲ್ಲಿ ಈ ಘಟನೆ ನಡೆದಿದ್ದು, ತೀವ್ರ ಗಾಯಗೊಂಡ ಪಾಗಲ್ ಪ್ರೇಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇತ್ತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಪೋಟಕ ಮಾಹಿತಿ ಕಲೆ ಹಾಕಿದ್ದಾರೆ.
34 ವರ್ಷದ ವ್ಯಕ್ತಿ ಹಾಗೂ 23 ವರ್ಷದ ಯುವತಿ ಕಳೆದೆರಡು ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ ಕಳೆದೆರಡು ತಿಂಗಳಿನಿಂದ ಇವರಿಬ್ಬರ ನಡುವೆ ಮನಸ್ತಾಪವಾಗಿದೆ. ಹೀಗಾಗಿ ಈತನಿನಿಂದ ದೂರವಾಗಿದ್ದಳು. ವೃತ್ತಿಯಲ್ಲಿ ಗಾಯಕಿಯಾಗಿರುವ ಈಕೆ, ಬಾರ್‌ನಲ್ಲಿ ಆರ್ಕೆಸ್ಟ್ರಾ ನಡೆಸಿಕೊಡುತ್ತಾಳೆ. ಮನಸ್ತಾಪದ ಬಳಿಕ ಗೆಳೆಯನಿಂದ ದೂರವಾಗಿದ್ದ ಈಕೆ, ಫೋನ್ ಕರೆ ಕೂಡ ಸ್ವೀಕರಿಸುತ್ತಿರಲಿಲ್ಲ. ಇದು ಗೆಳೆಯನ ಪಿತ್ತ ನೆತ್ತಿಗೇರಿಸಿತ್ತು.
ದರ್ಶನ್ ಮನೆಮುಂದೆ ಕಾರು ನಿಲ್ಸಿದ್ದೇ ತಪ್ಪಾಯ್ತು: ಮಹಿಳೆಯೆಂದೂ ನೋಡದೆ ಅಮಾನವೀಯ ಕೃತ್ಯವೆಸಗಿದರು
ಪನ್ವೇಲ್ ಬಳಿ ಇರುವ ಬಾರ್‌ನಲ್ಲಿ ರಾತ್ರಿ 1.30ರ ವೇಳೆಗೆ ಹಾಡುತ್ತಿದ್ದ ಸಿಂಗರ್‌ಗೆ ಆಘಾತವಾಗಿದೆ. ಕಾರಣ ಫೋನ ಕರೆ ಸ್ವೀಕರಿಸದ ಕಾರಣ ಈತ ನೇರವಾಗಿ ಬಾರ್‌ಗೆ ಆಗಮಿಸಿದ್ದಾನೆ. ಬಳಿಕ ಹಾಡುತ್ತಿದ್ದ ತನ್ನ ಮಾಜಿ ಗೆಳೆತಿ ಹಣೆಗೆ ಗುಂಡಿಕ್ಕಲು ಮುಂದಾಗಿದ್ದಾನೆ. ಆದರೆ ರಿವಾಲ್ವರ್ ತೆಗೆಯುವ ವೇಳೆ ಅಚಾನಕ್ಕಾಗಿ ಗುಂಡು ಸಿಡಿದಿದೆ. ಮಾಜಿ ಗೆಳೆತಿಯ ಹತ್ಯೆಗೆ ಸ್ಕೆಚ್ ಹಾಕಿ ಬಂದವನೇ ಗಂಭೀರವಾಗಿ ಗಾಯಗೊಂಡಿದ್ದಾನೆ.
ಬುಲೆಟ್ ಲೋಡ್ ಮಾಡಿ ಎಲ್ಲಾ ತಯಾರಿಯೊಂದಿಗೆ ಬಾರ್‌ಗೆ ನುಗ್ಗಿದ ಪಾಗಲ್ ಪ್ರೇಮಿ, ಕರೆ ಸ್ವೀಕರಿಸದೇ ದೂರ ಸರಿಯುತ್ತಿರುವ ಕುರಿತು ಸ್ಪಷ್ಟನೆ ಕೇಳುತ್ತಾ ರಿವಾಲ್ವರ್ ತೆಗೆದಿದ್ದಾನೆ. ಆದರೆ ರಿವಾಲ್ವರ್ ತೆಗೆಯುವ ವೇಳೆ ಗುಂಡು ಸಿಡಿದಿದೆ. ಗುಂಡು ನೇರವಾಗಿ ಆತನ ಹೊಟ್ಟೆಯ ಕೆಳಭಾಗಕಕ್ಕೆ ಹೊಕ್ಕಿದೆ. ಪರಿಣಾಮ ಪಾಗಲ್ ಪ್ರೇಮಿ ಕುಸಿದು ಬಿದ್ದಿದ್ದಾನೆ.
ತುಮಕೂರು: ಮಹಿಳಾ ಪೊಲೀಸ್ ಅಧಿಕಾರಿ ಎದುರು ಡ್ರ್ಯಾಗನ್ ಹಿಡಿದು ಪುಡಿರೌಡಿಯ ಹುಚ್ಚಾಟ
ಬಾರ್‌ನಲ್ಲಿದ್ದ ಎಲ್ಲರೂ ದಿಕ್ಕುಪಾಲಾಗಿ ಓಡಿದ್ದಾರೆ. ಇತ್ತ ಗಂಭೀರವಾಗಿ ಗಾಯಗೊಂಡ ಪಾಗಲ್ ಪ್ರೇಮಿಯನ್ನು ಆಸ್ಪತ್ರೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ಪಾಗಲ್ ಪ್ರೇಮಿ ವಿರುದ್ದ ಐಪಿಎಸ್ ಸೆಕ್ಷನ್ 338 , 323 ಸೇರಿದಂತೆ ಕೆಲ ಪ್ರಕರಣ ದಾಖಲಿಸಿದ್ದಾರೆ.