ಶಿವಮೊಗ್ಗ ಗಣಿ ಸ್ಫೋಟ ಕೇಸ್: DNA ಪರೀಕ್ಷೆಯಿಂದ 6ನೇ ಮೃತ ವ್ಯಕ್ತಿ ಗುರುತು ಪತ್ತೆ

* ಶಿವಮೊಗ್ಗ ಗಣಿ ಸ್ಫೋಟ ಪ್ರಕರಣ
* ಸ್ಪೋಟದಲ್ಲಿ ಮೃತಪಟ್ಟಿದ್ದ ಆರನೇ ವ್ಯಕ್ತಿಯ ಗುರುತು ಪತ್ತೆ
* DNA ಪರೀಕ್ಷೆಯಿಂದ 6ನೇ ಮೃತ ವ್ಯಕ್ತಿ ಗುರುತು ಪತ್ತೆ

Man identity found from DNA Who dead in Dynamite Blast at Shivamogga rbj

ಶಿವಮೊಗ್ಗ, (ಸೆ.12): ಜಿಲ್ಲೆಯ ಹುಣಸೋಡು ಗಣಿ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟ 6ನೇ ವ್ಯಕ್ತಿಯ ಗುರುತನ್ನು ಇದೀಗ ಪತ್ತೆ ಹಚ್ಚಲಾಗಿದ್ದು, ಈ ವ್ಯಕ್ತಿ ಭದ್ರಾವತಿಯ ಕೆ. ಹೆಚ್. ನಗರದ ಶಶಿ ಎಂದು ಗುರುತಿಸಲಾಗಿದೆ.

ಮೃತ ಶಶಿ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಎಂದು ತಿಳಿದು ಬಂದಿದೆ.  ಜ. 21 ರಂದು ರಾತ್ರಿ 10.30 ರ ಸುಮಾರಿಗೆ ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದಲ್ಲಿ ಭಾರೀ ಸ್ಫೋಟ ಸಂಭವಿಸಿತ್ತು. ಎಸ್. ಎಸ್. ಕ್ರಷರ್ ಆವರಣದಲ್ಲಿ ನಡೆದ ಈ ಸ್ಫೋಟದಲ್ಲಿ ಹಲವರು ಸಾವಿಗೀಡಾಗಿದ್ದು, ಮೃತ ದೇಹಗಳು ಛಿದ್ರ ಛಿದ್ರಗೊಂಡಿದ್ದವು.  ತನಿಖೆಯಲ್ಲಿ ಐದು ಜನರ ಮೃತ ದೇಹವನ್ನು ಪತ್ತೆ ಮಾಡಿ ವಾರಸುದಾರರಿಗೆ ಒಪ್ಪಿಸಲಾಗಿತ್ತು.

ಶಿವಮೊಗ್ಗ ಸ್ಫೋಟ: ಪೊಲೀಸರ ಮೇಲೆ ಒತ್ತಡ ಹಾಕಿ ಆರೋಪಿಯನ್ನು ಬಿಡಿಸಲಾಯ್ತಾ.?

ಇತರೆ ಮೃತದೇಹಗಳ ಪತ್ತೆಗಾಗಿ ಅಲ್ಲಿ ಬಿದ್ದಿದ್ದ ಮೃತ ದೇಹಗಳ ತುಣುಕನ್ನು ಸಂಗ್ರಹಿಸಿ ಬೆಂಗಳೂರು ಮಡಿವಾಳದ ಎಫ್. ಎಸ್. ಎಲ್. ಗೆ ಡಿಎನ್‌ಎ ಪರೀಕ್ಷೆ ಕಳುಹಿಸಲಾಗಿತ್ತು. 

ಈ ವರದಿ ಸೆ. 10 ರಂದು ಬಂದಿದ್ದು, ಈ ವರದಿಯನ್ನು ಪರಿಶೀಲಿಸಿದಾಗ ಈ ಮೃತದೇಹದ ತುಂಡು ಭದ್ರಾವತಿಯ ಕೆ. ಎಚ್. ನಗರ ವಾಸಿಯಾಗಿರುವ ಬೋರೇಗೌಡರ ಪುತ್ರ 32 ವರ್ಷದ ಆಟೋ ಚಾಲಕ ವೃತ್ತಿಯ ಶಶಿ ಯಾನೆ ದೇವೇಂದ್ರ ಎಂದು ಗುರುತಿಸಲಾಗಿದೆ.  ಇದರೊಂದಿಗೆ ಘಟನೆಯಲ್ಲಿ ಆರು ಜನ ಮೃತಪಟ್ಟಿರುವುದು ದೃಢಪಟ್ಟಿದೆ.
 

Latest Videos
Follow Us:
Download App:
  • android
  • ios