Asianet Suvarna News Asianet Suvarna News

ಎಣ್ಣೆ ಏಟಲ್ಲಿ ATM ಕದಿಯಲು ಬಂದು ಅಲ್ಲಿಯೇ ತಗಲಾಕ್ಕೊಂಡ ಉಪೇಂದ್ರ!

* ಮದ್ಯಪಾನ ಮಾಡಿ ಎಟಿಎಂ ದೋಚಲು ಹೋದವ ಸಿಕ್ಕಿಬಿದ್ದ
* ಮರದ ತುಂಡು ಮತ್ತು ಎಟಿಎಂ ಯಂತ್ರದ ನಡುವೆ ಒದ್ದಾಟ
* ಪೊಲೀಸರು ಬಂದು ಎತ್ತಾಕಿಕೊಂಡು ಹೋದ್ರು!

Man gets stuck between ATM and wall while trying to steal money in Tamil Nadu Crime News mah
Author
Bengaluru, First Published Aug 7, 2021, 5:41 PM IST
  • Facebook
  • Twitter
  • Whatsapp

ಕೊಯಂಬತ್ತೂರು(ಆ. 07)  ಈ ಪುಣ್ಯಾತ್ಮ ಸರಿಯಾಗಿ ಸಿಕ್ಕಿ ಹಾಕಿಕೊಂಡಿದ್ದಾನೆ. ಕಳ್ಳತನ ಮಾಡಲು ಬಂದಾಗ ಎಟಿಎಂ ಯಂತ್ರವೇ ಈತನನ್ನು ಹಿಡಿದುಕೊಂಡಿದೆ. 

ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ಅನಿಯಪುರಂನ ಘಟನೆ ನಿಜಕ್ಕೂ ವಿಚಿತ್ರ. ಗುರುವಾರದ ಈ ಪ್ರಕರಣ ವೈರಲ್ ಆಗುತ್ತಿದೆ. ಯಂತ್ರದ ಬಳಿಯೇ ಸಿಕ್ಕಿಹಾಕಿಕೊಂಡಿದ್ದ ಕಳ್ಳ ಉಪೇಂದ್ರ ರಾಯ್ (28) ನನ್ನು ಪೊಲೀಸರು  ಬಂಧಿಸಿದ್ದಾರೆ. ಬಿಹಾರ ಮೂಲದ ವ್ಯಕ್ತಿ ಸ್ಥಳೀಯ ಕೋಳಿ ಫಾರಂ ನಲ್ಲಿ ಕೆಲಸ ಮಾಡುತ್ತಿದ್ದ. 

ಧೂಮ್ ಚಿತ್ರ ನೋಡಿ ಲೂಟಿಗೆ ಇಳಿದಿದ್ದ ತಂಡ ಅರೆಸ್ಟ್

ಸರಿಯಾಗಿ ಮದ್ಯಪಾನ ಮಾಡಿದ್ದ ಉಪೇಂದ್ರ ಗುರುವಾರ ಮಧ್ಯರಾತ್ರಿ  12.15 ರ ಸುಮಾರಿಗೆ  ಎಟಿಎಂ ಯಂತ್ರವಿದ್ದ ಜಾಗದ ಹಿಂದಿನ ಫ್ಲೈ ವುಡ್   ಗೋಡೆಯನ್ನು ಸರಿರಿ ಒಳಕ್ಕೆ  ಪ್ರವೇಶ ಮಾಡುವ ಯತ್ನ ಮಾಡಿದ್ದಾನೆ. ಎಟಿಎಂ ಯಂತ್ರವನ್ನು ಹಿಂದಿನಿಂದ ಒಡೆಯಲು ಕಲ್ಲೊಂದನ್ನು ಎತ್ತಿದ್ದಾನೆ. ಈ ವೇಳೆ ಶಬ್ದಕ್ಕೆ ಅಕ್ಕಪಕ್ಕದವರು ಎದ್ದು ಬಂದಿದ್ದಾರೆ.  

ಪೊಲೀಸರಿಗೆ ಮಾಹಿತಿ ನೀಡಿದ್ದು ಅಲ್ಲಿಗೆ ಬಂದು ನೋಡಿದಾಗ ಕಳ್ಳ ಮಧ್ಯೆ ಸಿಕ್ಕಿ ಒದ್ದಾಡುತ್ತಿದ್ದ.  ಅಲ್ಲಿಂದ ಕಳ್ಳನನ್ನು ತಮ್ಮ ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  

Follow Us:
Download App:
  • android
  • ios