Asianet Suvarna News Asianet Suvarna News

ಧೂಮ್ ಚಿತ್ರ ನೋಡಿ ಲೂಟಿಗೆ ಇಳಿದಿದ್ದ ತಂಡ ಅರೆಸ್ಟ್.. ಖತರ್‌ ನಾಕ್ ಗ್ಯಾಂಗ್!

* ಧೂಮ್ ಚಿತ್ರ ನೋಡಿ ಲೂಟಿಗೆ ಇಳಿದಿದ್ದ ತಂಡ ಅರೆಸ್ಟ್.. ಖತರ್‌ ನಾಕ್ ಗ್ಯಾಂಗ್!
*ಬಾಲಿವುಡ್ ಸಿನಿಮಾ ಮಾದರಿಯಲ್ಲಿ ಲೂಟಿ ಮಾಡಿ ಬೈಕ್‌ ನಲ್ಲಿ ಎಸ್ಕೇಪ್ ಆಗ್ತಿದ್ರು 
*ಒಬ್ಬಾತ ಸಿಗ್ನಲ್ ಕೊಡಲು ಹೊರಗೆ ನಿಲ್ಲುತ್ತಿದ್ದ
* ಕಳ್ಳತನ ಮಾಡಿ ಶರವೇಗದಲ್ಲಿ ಪರಾರಿ

Three men take inspiration from Dhoom movie to execute loots on highway held Newdelhi mah
Author
Bengaluru, First Published Jul 31, 2021, 5:55 PM IST
  • Facebook
  • Twitter
  • Whatsapp

ಫರೀದಾಬಾದ್(ಜು. 31) ಖಚಿತ ಮಾಹಿತಿ ಆಧಾರದಲ್ಲಿ ಫರಿದಾಬಾದ್ ಪೊಲೀಸರು ಹತ್ತು ಲೂಟಿ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಗ್ಯಾಂಗ್‌ನ ಮೂವರನ್ನು ಬಂಧಿಸಿದ್ದಾರೆ.  ಇವರ ಬಂಧನದ ನಂತರ ಒಂದಷ್ಟು ರೋಚಕ ಕತೆಗಳು ಹೊರಗೆ ಬಂದಿವೆ.

ಆರೋಪಿಗಳನ್ನು ಫರಿದಾಬಾದ್‌ನ ವಿಶಾಲ್ ಮತ್ತು ಸಾಹಿಲ್ ಮತ್ತು ದೆಹಲಿಯ ರುಬನ್ ಎಂದು ಗುರುತಿಸಲಾಗಿದೆ. ವಿಶಾಲ್ ಮತ್ತು ಸಾಹಿಲ್ ಸಹೋದರರು.  ಲೂಟಿಯೊಂದಕ್ಕೆ ಸಂಚು ರೂಪಿಸುತ್ತಿದ್ದಾಗ ಮೂವರನ್ನು ಬಂಧನ ಮಾಡಲಾಗಿದೆ.

ಧೂಮ್ ಸಿನಿಮಾವೇ ಲೂಟಿಗೆ ಪ್ರೇರಣೆ! ಮೂವರು ಆರೋಪಿಗಳನ್ನು ಆರು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.  ಪೊಲೀಸ್ ಅಧಿಕಾರಿಗಳು ಹೇಳುವಂತೆ ಬಾಲಿವುಡ್ ನ ಧೂಮ್ ಸಿನಿಮಾ ನೋಡಿ ತಂಡ ಕಳ್ಳತನಕ್ಕೆ ಇಳಿದಿತ್ತು. ಲೂಟಿ ಮಾಡಿ ಹೆದ್ದಾರಿಯಲ್ಲಿ ಮಿಂಚಿನ ವೇಗದಲ್ಲಿ ಎಸ್ಕೇಪ್ ಆಗುತ್ತಿದ್ದರು.

ಸೆಲೂನ್ ಗೆ ನುಗ್ಗಿ ಮಹಿಳೆ ಮೇಲೆ ಕೈ ಹಾಕಿದ್ದ

ಎಫ್‌ ಝಡ್ ಬೈಕ್ ನಲ್ಲಿ ಬರುತ್ತಿದ್ದ ಕಳ್ಳರಲ್ಲಿ ಒಬ್ಬಾತ ಸಿಗ್ನಲ್ ಕೊಡಲು ಹೊರಗೆ ನಿಲ್ಲುತ್ತಿದ್ದ. ಒನ್ನೊಬ್ಬ ಕಳ್ಳತನ ಮಾಡಿಕೊಂಡು ಬಂದ ಬನಂತರ ವಸ್ತುಗಳ ಸಮೇತ ಎಸ್ಕೇಪ್ ಆಗುತ್ತಿದ್ದರು.

ಟೈರ್ ಪಂಕ್ಚರ್ ಆದ ರೀತಿ ಮಧ್ಯ ರಸ್ತೆಯಲ್ಲಿ ನಿಲ್ಲುತ್ತಿದ್ದರು. ಸಹಾಯಕ್ಕೆ ಬರುವವರನ್ನು ದರೋಡೆ ಮಾಡಿ ಅಲ್ಲಿಂದ ಎಸ್ಕೇಪ್ ಆಗುತ್ತಿದ್ದರು. ಇದಲ್ಲದೇ  ಹೆದ್ದಾರಿ  ಪಕ್ಕ ಊಟಕ್ಕೆ ಅಂಥ ನಿಲ್ಲಿಸುತ್ತಿದ್ದ ವಾಹನಗಳ ಗಾಜಿನ ಮೇಲೆ ಎಣ್ಣೆ ಎರಚುತ್ತಿದ್ದರು. ಗಾಡಿ ನಿಂತಾಗ ಅವಕಾಶ ಬಳಸಿ ಅವರನ್ನು ದರೋಡೆ ಮಾಡುತ್ತಿದ್ದರು. 

Follow Us:
Download App:
  • android
  • ios