ರಾಜಸ್ಥಾನ(ನ.  29)   ಇದಕ್ಕಿಂತ ಕ್ರೂರ ಘಟನೆ ಇನ್ನೊಂದು ಇರಲಿಕ್ಕೆ ಸಾಧ್ಯವಿಲ್ಲ. ಸಿನಿಮಾದಲ್ಲಿ  ಇಂಥ ದೃಶ್ಯಗಳನ್ನು ಕಂಡಿದ್ದು ಇರಬಹುದು.  ರಾಜಸ್ಥಾನದ ಯುವಕನೊಬ್ಬನನ್ನು ಕ್ರೂರವಾಗಿ ಥಳಿಸಿ ಮಾನವನ ಮಲ ಸೇವನೆ ಮಾಡಲು ಒತ್ತಾಯ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಕ್ರೂರ ಘಟನೆಯ ವಿಡಿಯೋ ಸಹ ಲಭ್ಯವಾಗಿದ್ದು ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.  ಬಾಲಕಿಯೊಬ್ಬಳಿಗೆ ಯುವಕ ಕಿರುಕುಳ ನೀಡಿದ್ದ ಎಂಬ ಆರೋಪ ಕೇಳಿಬಂದಿತ್ತು. ಯುವಕನನ್ನು ಹಿಡಿದ ಗ್ರಾಮಸ್ಥರು ಥಳಿಸಿದ್ದು ಅಲ್ಲದೆ ಮಲ ತಿನ್ನು ಎಂದು ದಬಾಯಿಸಿದ್ದಾರೆ.

ಸೊಸೆ ಮೇಲೆ ಮಾವನಿಂದ ಅತ್ಯಾಚಾರ ಪ್ರಶ್ನೆ ಮಾಡಿದ್ದಕ್ಕೆ ಮಗನನ್ನೇ ಕೊಂದ

ಹಲ್ಲೆಗೊಳಗಾದ ಯುವಕನನ್ನು  ದೀಪಕ್ ಕುಮಾರ್ ಎಂದು ಗುರುತಿಸಲಾಗಿದೆ.  ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಯುವಕನ ರಕ್ಷಣೆ ಮಾಡಿದ್ದಾರೆ. ಅನೇಕರ ಮೇಲೆ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭಿಸಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿಯೂ ಈ ಪ್ರಕರಣ ತುಂಬಾ ಚರ್ಚೆಯಾಗುತ್ತಿದೆ. ಮಾನವ ಹಕ್ಕುಗಳ ಉಲ್ಲಂಘನೆ ಆಗಿದೆ ಎಂಬ ಆರೋಪವೂ  ಕೇಳಿಬಂದಿದ್ದು ತನಿಖೆ ಯಾವ ರೀತಿ ನಡೆಯಲಿದೆ ಎಂಬುದನ್ನು ನೋಡಬೇಕಿದೆ.