ಲಕ್ನೋ(ನ.  29)  ಸೊಸೆಯ ಮೇಲೆ ಮಾವನೇ ಅತ್ಯಾಚಾರವೆಸಗಿದ್ದಾನೆ, ಪ್ರಶ್ನಿಸಲು ಬಂದ ಮಗನನ್ನೇ ಹತ್ಯೆ ಮಾಡಿದ್ದಾನೆ. ಉತ್ತರ ಪ್ರದೇಶದ ಮೊರಾದಾಬಾದ್ ಹನುಮಾನ್ ನಗರದಿಂದ ನಿಂದ ಇಂಥದ್ದೊಂದು ಪ್ರಕರಣ ವರದಿಯಾಗಿದೆ.

ಮಾವ ಮತ್ತು ಸೊಸೆ ಮನೆಯಲ್ಲಿ ಇದ್ದರು. ಕುಟುಂಬದ ಉಳಿದವರೆಲ್ಲ ಮದುವೆಗೆ ಹೋಗಿದ್ದರು. ಈ ವೇಳೆ ಮಾವ ಸೊಸೆಯ ಮೇಲೆ ಬಲಾತ್ಕಾರ ಮಾಡಿದ್ದಾನೆ.

ಮದುವೆಯಾಗುತ್ತೇನೆ ಎಂದು ನಂಬಿಸಿ ಗರ್ಭಿಣಿ ಮಾಡಿದ ಪಾಕ್ ಕ್ರಿಕೆಟಿಗ

ಆಘಾತಕ್ಕೆ ಒಳಗಾದ ಸೊಸೆ ವಿಚಾರವನ್ನು ಗಂಡನಿಗೆ ತಿಳಿಸಿದ್ದಾರೆ.  ಅಪ್ಪ ಮತ್ತು ಮಗನ ನಡುವೆ ಗಲಾಟೆ ಆರಂಭವಾಗಿದೆ. ಕಿರಿಯ ಮಗ ಅಲ್ಲಿಗೆ ಬಂದಿದ್ದು ತಂದೆ ಬೆಂಬಲಕ್ಕೆ ನಿಂತಿದ್ದಾನೆ.

ಪರವಾನಗಿ ಇರುವ ರಿವಾಲ್ವರ್ ನಿಂದ ಮಗನನ್ನು ತಂಡೆ ಹತ್ಯೆ ಮಾಡಿದ್ದಾನೆ. ಮಜೋಲಾದ ಹನುಮಾನ್ ನಗರದಲ್ಲಿ ಆರೋಪಿ ವಾಸಿಸುತ್ತಿದ್ದು, ಹತ್ಯೆ, ಅತ್ಯಾಚಾರದ ಆರೋಪದಲ್ಲಿ 56 ವರ್ಷದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.  ತಂದೆ ನೆರವಿಗೆ ನಿಂತ ಕಿರಿಯ ಪುತ್ರನ ಮೇಲೂ ಪ್ರಕರಣ ದಾಖಲಾಗಿದೆ.