Bengaluru: ಪ್ರಿಯತಮೆ ಬರ್ತ್‌ಡೇ ಆಚರಿಸಿದ, ಬಳಿಕ ಕೇಕ್ ಕತ್ತರಿಸಿದ ಚೂರಿಯಿಂದಲೇ ಆಕೆಯ ಕತ್ತನ್ನು ಸೀಳಿದ!
ಪ್ರೇಯಸಿಯ ಬರ್ತಡೇ ಆಚರಣೆ ಮಾಡಿ ಬಳಿಕ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಲಗ್ಗೆರೆಯಲ್ಲಿ ನಡೆದಿದೆ.
ಬೆಂಗಳೂರು (ಏ.15): ಪ್ರೇಯಸಿಯ ಬರ್ತಡೇ ಆಚರಣೆ ಮಾಡಿ ಬಳಿಕ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಲಗ್ಗೆರೆಯಲ್ಲಿ ನಡೆದಿದೆ. ಪ್ರಶಾಂತ್ ಎಂಬ ಭಗ್ನ ಪ್ರೇಮಿ ಈ ಕೃತ್ಯ ಎಸಗಿದ್ದು, ನವ್ಯ (24) ಕೊಲೆಯಾದ ಯುವತಿಯಾಗಿದ್ದಾಳೆ. ಕೊಲೆಯಾದ ನವ್ಯ ಪೊಲೀಸ್ ಇಲಾಖೆಗೆ ಆಂತರಿಕ ಭದ್ರತಾ ವಿಭಾಗದಲ್ಲಿ ಕ್ಲರ್ಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಳು. ಕಳೆದ ಆರು ವರ್ಷಗಳಿಂದ ನವ್ಯ ಹಾಗೂ ಪ್ರಶಾಂತ್ ಇಬ್ಬರು ಪ್ರೀತಿಸುತ್ತಿದ್ದರು. ಇವರಿಬ್ಬರೂ ಕನಕಪುರ ಮೂಲದವರಾಗಿದ್ದು ದೂರ ಸಂಬಂಧಿಕರಾಗಿದ್ದರು. ಕೊರಮಂಗಲದಲ್ಲಿ ತಾಯಿ ಜೊತೆ ನವ್ಯ ವಾಸವಿದ್ದಳು.
ತುಮಕೂರಿನಲ್ಲಿ ಭೀಕರ ಅಪಘಾತ, ಬಸ್ ಡಿಕ್ಕಿಯಾಗಿ ನಜ್ಜುಗುಜ್ಜಾದ ಕಾರು: ಮಗು ಸೇರಿ
ಕಳೆದ ಮಂಗಳವಾರ ನವ್ಯ ಬರ್ತಡೇ ಇತ್ತು. ಅಂದು ಬ್ಯುಸಿ ಇದ್ದೇನೆಂದು ಹೇಳಿದ್ದ ಪ್ರಶಾಂತ್ ಶುಕ್ರವಾರ ಬರ್ತಡೇ ಸೆಲೆಬ್ರೇಷನ್ ಗೆ ಯೋಜನೆ ಹಾಕಿದ್ದ. ಅದರಂತೆ ನಿನ್ನೆ ರಾತ್ರಿ ಬರ್ತಡೇ ಸೆಲೆಬ್ರೇಷನ್ ಮಾಡೋದಕ್ಕೆ ಸಿದ್ದತೆ ಮಾಡಿಕೊಂಡಿದ್ದನು. ಬಳಿಕ ರಾತ್ರಿ ಕೇಕ್ ಕತ್ತರಿಸಿ ಪ್ರಿಯತಮೆ ನವ್ಯಗೆ ಕೇಕ್ ತಿನ್ನಿಸಿದ್ದ. ಇದಾದ ಬಳಿಕ ಹರಿತವಾದ ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ.
MAHARASHTRA ACCIDENT: ಕಮರಿಗೆ ಬಿದ್ದ ಬಸ್: 12 ಜನ ದುರ್ಮರಣ, 27 ಕ್ಕೂ ಹೆಚ್ಚು ಮಂದಿಗೆ ಗಾಯ
ಪ್ರೇಯಸಿ ಮೇಲಿನ ಅನುಮಾನದಿಂದ ಪ್ರಶಾಂತ್ ಕೊಲೆ ಮಾಡಿದ್ದ ಎನ್ನಲಾಗಿದೆ. ಇತ್ತೀಚೆಗೆ ಬೇರೆ ಯುವಕನೊಂದಿಗೆ ನವ್ಯ ಚಾಟ್ ಮಾಡುತ್ತಿದ್ದಳು. ಈ ಬಗ್ಗೆ ಪ್ರಶಾಂತ್ ಗಮನಕ್ಕೆ ಬಂದಿತ್ತು. ಕೇಕ್ ಕಟ್ ಮಾಡಿದ ಬಳಿಕ ರೂಂಗೆ ತೆರಳಿದ್ದ ನವ್ಯ ಹೆಚ್ಚು ಸಮಯ ಕಳೆದರು ವಾಪಾಸ್ ಆಗಿರಲಿಲ್ಲ. ಮೊದಲೇ ಆಕೆಯ ಮೇಲೆ ಅನುಮಾನ ಪಡುತ್ತಿದ್ದ ಪ್ರಶಾಂತ್. ಆಕೆ ಹೊರ ಬಂದಾಗ ಗಲಾಟೆ ಮಾಡಿ ಹತ್ಯೆ ಮಾಡಿದ್ದ. ಕೊಲೆಯಾದ ಬಳಿಕ ತಾನೇನು ಮಾಡಬೇಕು ಅನ್ನೊ ಗೊಂದಲದಲ್ಲಿ ಆರೋಪಿ ಪ್ರಶಾಂತ್ 5 ಘಂಟೆ ಶವದ ಜೊತೆ ಕುಳಿತಿದ್ದ. ಬಳಿಕ ತಾನೇ ರಾಜಗೋಪಾಲನಗರ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ. ಸದ್ಯ ಪ್ರಿಯಕರ ಪ್ರಶಾಂತ್ ಬಂಧಿಸಿರೋ ರಾಜಗೋಪಾಲನಗರ ಪೊಲೀಸರು ಕೇಸು ದಾಖಲಿಸಿದ್ದಾರೆ. ಮೃತ ಯುವತಿಯ ಶವ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ತನಿಖೆ ಮುಂದುವರೆದಿದೆ.