Maharashtra Accident: ಕಮರಿಗೆ ಬಿದ್ದ ಬಸ್‌: 12 ಜನ ದುರ್ಮರಣ, 27 ಕ್ಕೂ ಹೆಚ್ಚು ಮಂದಿಗೆ ಗಾಯ

ಮುಂಬೈನ ಗೋರೆಗಾಂವ್‌ನಿಂದ ಬಾಜಿ ಪ್ರಭು ವಾಡಕ್ ಗ್ರೂಪ್‌ನ ಸದಸ್ಯರನ್ನು ಹೊತ್ತೊಯ್ಯುತ್ತಿದ್ದ ಬಸ್‌ನಲ್ಲಿ ಸಂಗೀತ ತಂಡದ ಸದಸ್ಯರು ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್‌ವಾಡ್ ಪ್ರದೇಶದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಗೋರೆಗಾಂವ್‌ಗೆ ಹಿಂತಿರುಗುತ್ತಿದ್ದರು. ಶನಿವಾರ ನಸುಕಿನ ಜಾವ 1 ಗಂಟೆ ಸುಮಾರಿಗೆ ಬಸ್ ಸ್ಥಳದಿಂದ ನಿರ್ಗಮಿಸಿತ್ತು. ಈ ಅಪಘಾತದಲ್ಲಿ ಕನಿಷ್ಠ 12 ಜನರು ಮೃತಪಟ್ಟಿದ್ದಾರೆ ಮತ್ತು 27 ಜನರು ಗಾಯಗೊಂಡಿದ್ದಾರೆ ಎಂದು ರಾಯಗಢ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸೋಮನಾಥ್ ಘರ್ಗೆ ತಿಳಿಸಿದ್ದಾರೆ.

12 dead several injured as bus from pune to mumbai falls into gorge ash

ಮುಂಬೈ (ಏಪ್ರಿಲ್ 15, 2023): ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು ಕನಿಷ್ಠ 12 ಜನರು ಮೃತಪಟ್ಟಿದ್ದಾರೆ. ಹಳೆಯ ಮುಂಬೈ-ಪುಣೆ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಬಸ್ ಕಮರಿಗೆ ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ. ಶನಿವಾರ ಬೆಳಗಿನ ಜಾವ ಈ ಅಪಘಾತ ನಡೆದಿದ್ದು, 27 ಮಂದಿ ಗಾಯಗೊಂಡಿದ್ದಾರೆ ಎಂದೂ ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ.

ಸಾಂಪ್ರದಾಯಿಕ ಸಂಗೀತ ತಂಡದ ಸದಸ್ಯರನ್ನು ಹೊತ್ತ ಖಾಸಗಿ ಬಸ್ ಪುಣೆಯಿಂದ ಮುಂಬೈಗೆ ಹೋಗುತ್ತಿದ್ದಾಗ ಹೆದ್ದಾರಿಯ ಶಿಂಗ್ರೋಬಾ ದೇವಸ್ಥಾನದ ಬಳಿ ಬೆಳಗ್ಗಿನ ಜಾವ 4:50 ರ ಸುಮಾರಿಗೆ ಕಮರಿಗೆ ಬಿದ್ದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಖೋಪೋಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ಬಾಯ್‌ಫ್ರೆಂಡ್‌ ಜತೆ ಸೆಕ್ಸ್‌ಚಾಟ್‌ ಬಹಿರಂಗ: ಮೊಬೈಲ್‌ ಕಸಿದುಕೊಂಡ ಸಿಟ್ಟಿಗೆ ಅತ್ತೆ - ಮಾವನನ್ನೇ ಹತ್ಯೆಗೈದ ಪಾಪಿ ಸೊಸೆ

ಮುಂಬೈನ ಗೋರೆಗಾಂವ್‌ನಿಂದ ಬಾಜಿ ಪ್ರಭು ವಾಡಕ್ ಗ್ರೂಪ್‌ನ ಸದಸ್ಯರನ್ನು ಹೊತ್ತೊಯ್ಯುತ್ತಿದ್ದ ಬಸ್‌ನಲ್ಲಿ ಸಂಗೀತ ತಂಡದ ಸದಸ್ಯರು ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್‌ವಾಡ್ ಪ್ರದೇಶದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಗೋರೆಗಾಂವ್‌ಗೆ ಹಿಂತಿರುಗುತ್ತಿದ್ದರು. ಶನಿವಾರ ನಸುಕಿನ ಜಾವ 1 ಗಂಟೆ ಸುಮಾರಿಗೆ ಬಸ್ ಸ್ಥಳದಿಂದ ನಿರ್ಗಮಿಸಿತ್ತು. ಈ ಅಪಘಾತದಲ್ಲಿ ಕನಿಷ್ಠ 12 ಜನರು ಮೃತಪಟ್ಟಿದ್ದಾರೆ ಮತ್ತು 27 ಜನರು ಗಾಯಗೊಂಡಿದ್ದಾರೆ ಎಂದು ರಾಯಗಢ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸೋಮನಾಥ್ ಘರ್ಗೆ ತಿಳಿಸಿದ್ದಾರೆ.

ಅಲ್ಲದೆ, ಗಾಯಗೊಂಡವರು ಮತ್ತು ಮೃತಪಟ್ಟರು ಮುಂಬೈನ ಸಿಯಾನ್ ಮತ್ತು ಗೋರೆಗಾಂವ್ ಹಾಗೂ ನೆರೆಯ ಪಾಲ್ಘರ್ ಜಿಲ್ಲೆಯ ವಿರಾರ್‌ಗೆ ಸೇರಿದವರು. ಇನ್ನು,  ಗಾಯಾಳುಗಳನ್ನು ಖೋಪೋಲಿ ಗ್ರಾಮಾಂತರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದೂ ಅವರು ಹೇಳಿದ್ದಾರೆ. ಈ ಮಧ್ಯೆ, ಮೃತರು ಮತ್ತು ಗಾಯಗೊಂಡವರು 18 ರಿಂದ 25 ವರ್ಷ ವಯಸ್ಸಿನವರು ಎಂದು ಹೆಚ್ಚುವರಿ ಎಸ್ಪಿ ಅತುಲ್ ಝೆಂಡೆ ತಿಳಿಸಿದ್ದಾರೆ.

ಇದನ್ನೂ ಓದಿ: ದೇವಸ್ಥಾನದ ಬಳಿ ಬಿರುಗಾಳಿಗೆ ಉರುಳಿದ ಬೃಹತ್‌ ಮರ: 7 ಭಕ್ತರು ಬಲಿ, 20 ಕ್ಕೂ ಹೆಚ್ಚು ಮಂದಿಗೆ ಗಾಯ

ಸ್ಥಳೀಯ ಪೊಲೀಸರ ತಂಡ ಮತ್ತು ಚಾರಣಿಗರ ತಂಡ ಸದ್ಯ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಪಘಾತ ನಡೆದ ಖೋಪೋಲಿ ಪಟ್ಟಣವು ಮಹಾರಾಷ್ಟ್ರ ರಾಜಧಾನಿ ಮುಂಬೈನಿಂದ 70 ಕಿಮೀ ದೂರದಲ್ಲಿದೆ.

ಇದನ್ನೂ ಓದಿ: ಕುಡುಕ ಪತಿ ಕಾಟಕ್ಕೆ ಬೇಸತ್ತು 3 ಮಕ್ಕಳನ್ನು ನದಿಗೆ ತಳ್ಳಿ ತಾನೂ ಆತ್ಮಹತ್ಯೆ ಮಾಡ್ಕೊಂಡ ಮಹಿಳೆ..!

Latest Videos
Follow Us:
Download App:
  • android
  • ios