₹500 ಸಾಲ ಕೊಡಲು ನಕಾರ: ತಲೆ ಕಡಿದು ರುಂಡದೊಂದಿಗೆ ಪೊಲೀಸ್ ಠಾಣೆಗೆ ಬಂದ ಸ್ನೇಹಿತ
Crime News: 40 ವರ್ಷದ ವ್ಯಕ್ತಿಯೊಬ್ಬ ಕತ್ತರಿಸಿದ ತಲೆಯೊಂದಿಗೆ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಆಘಾತಕಾರಿ ಘಟನೆ ನಡೆದಿದೆ
ಅಸ್ಸಾಂ (ಆ. 16): ಅಸ್ಸಾಂನಲ್ಲಿ 40 ವರ್ಷದ ವ್ಯಕ್ತಿಯೊಬ್ಬ ಕತ್ತರಿಸಿದ ತಲೆಯೊಂದಿಗೆ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಆಘಾತಕಾರಿ ಘಟನೆ ನಡೆದಿದೆ. ಮಂಗಳವಾರ ಬೆಳಗಿನ ಜಾವ 1:30ರ ಸುಮಾರಿಗೆ ಸೋನಿತ್‌ಪುರ ಜಿಲ್ಲೆಯ ರಂಗಪರದ ದಯಾಲ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತುನಿರಾಮ್ ಮಾದ್ರಿ ಎಂದು ಗುರುತಿಸಲಾದ ವ್ಯಕ್ತಿ ಮಂಗಳವಾರ ಬೆಳಗ್ಗೆ ತುಂಡರಿಸಿದ ತಲೆ ಮತ್ತು ಮಚ್ಚಿನೊಂದಿಗೆ ರಂಗಪಾರ ಪೊಲೀಸ್ ಠಾಣೆಗೆ ತೆರಳಿದ್ದಾನೆ. ತುನಿರಾಮ್ ಮಾದ್ರಿ ಮತ್ತು ಬ್ರೈಲರ್ ಹೆಮ್ರೋನ್ ಎಂದು ಗುರುತಿಸಲಾಗಿದ ಮೃತ ವ್ಯಕ್ತಿ ಇಬ್ಬರೂ ದಯಾಲ್‌ಪುರ ಗ್ರಾಮದ ನಿವಾಸಿಗಳು.
ಪೋಲೀಸರ ಪ್ರಕಾರ, ಹೆಮ್ರೋನ್ ಮಾದ್ರಿಯಿಂದ 500 ರೂ ಸಾಲವನ್ನು ಕೇಳಿದ್ದ. ಆದರೆ ಮಾದ್ರಿ ಸಾಲ ನೀಡಲು ನಿರಾಕರಿಸಿದ್ದ. ಹೀಗಾಗಿ ಇಬ್ಬರ ನಡುವೆ ಜಗಳವಾಗಿದೆ. ಮಾದ್ರಿ ಕೋಪದ ಭರದಲ್ಲಿ ಹೆಮ್ರೊನ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.
“ನಿನ್ನೆ ರಾತ್ರಿ, ತುನಿರಾಮ್ ಮಾದ್ರಿ ಬಂದು ತನ್ನ ಸ್ವಂತ ಹಳ್ಳಿಯವನೇ ಆದ ಬ್ರೈಲರ್ ಹೆಮ್ರೋನ್ ತಲೆಯನ್ನು ಕತ್ತರಿಸಿದ ಎಂದು ಹೇಳಿದ. ಆಯುಧವನ್ನು ವಶಪಡಿಸಿಕೊಂಡು ಆತನನ್ನು ವಶಕ್ಕೆ ತೆಗೆದುಕೊಂಡಿದ್ದೇವೆ" ಎಂದು ಪೊಲೀಸರು ತಿಳಿಸಿದ್ದಾರೆ.
ಇವಳನ್ನ ಮನೆಗ್ ಕರ್ಕೊಂಡ್ ಹೋಗಿ: 8 ತಿಂಗಳ ಗರ್ಭಿಣಿ ಕೊಂದು ಅತ್ತೆಗೆ ಪತಿ ಫೋನ್
"ಆರೋಪಿ ಪ್ರಕಾರ ಫುಟ್ಬಾಲ್ ಪಂದ್ಯವಿದ್ದು, ಹೆಮ್ರಾನ್ ಮಾದ್ರಿಯಿಂದ 500 ರೂ ಗಾಗಿ ಬೇಡಿಕೆ ಇಟ್ಟಿದ್ದ. ಹೆಮ್ರಾನ್ ನಂತರ ಮಾದ್ರಿಗೆ ಬೆದರಿಕೆ ಹಾಕಿದ್ದು ಜಗಳಕ್ಕೆ ಕಾರಣವಾಗಿದೆ. ನಂತರ ಗ್ರಾಮದಲ್ಲಿ ಆಯೋಜಿಸಿದ್ದ ಔತಣಕೂಟಕ್ಕೆ ಮೇಕೆಗಳನ್ನು ಕಡಿಯಲು ಹೋಗುತ್ತಿದ್ದಾಗ ಮಾದ್ರಿ ಹೆಮ್ರೋಮ್‌ನ ಶಿರಚ್ಛೇದ ಮಾಡಿದ್ದಾನೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಗ್ರಾಮದಲ್ಲಿ ಸ್ಥಳೀಯ ಫುಟ್‌ಬಾಲ್ ಪಂದ್ಯಾವಳಿಯ ಫೈನಲ್ ವೀಕ್ಷಿಸಲು ಹೆಮ್ರೋಮ್ ಮಾದ್ರಿಯಿಂದ 500 ರೂ ಕೇಳಿದ್ದ. ಹಣವನ್ನು ನಿರಾಕರಿಸಿದ ನಂತರ, ಹೆಮ್ರಾನ್ ಮಾದ್ರಿಗೆ ಬೆದರಿಕೆ ಹಾಕಿದ್ದಾನೆ. ನಂತರ ರಾತ್ರಿ ಗ್ರಾಮದ ಊಟಕ್ಕೆ ಮೇಕೆಗಳನ್ನು ಕಡಿಯುವ ನೆಪದಲ್ಲಿ ಮದ್ರಿ ರಾತ್ರಿ ಈ ಕೃತ್ಯ ಎಸಗಿದ್ದಾನೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ ಆರೋಪಿಯನ್ನು ಬಂಧಿಸಲಾಗಿದೆ.
ಮಡಿಕೇರಿ: ಪತ್ನಿಯನ್ನು ಗುಂಡಿಕ್ಕಿ ಕೊಂದ ಪತಿ: ಹಲವು ವರ್ಷಗಳಿಂದ ಪತ್ನಿಯ ಮೇಲೆ ಸಂಶಯಗೊಂಡ ಪತಿಯೊಬ್ಬ ಮಂಗಳವಾರ ರಾತ್ರಿ ಒಂಟಿ ನಳಿಕೆ ಕೋವಿಯಿಂದ ಹತ್ಯೆ ಮಾಡಿರುವ ಭೀಕರ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಚೆಟ್ಟಳ್ಳಿಯಲ್ಲಿ ನಡೆದಿದೆ.ಚೆಟ್ಟಳ್ಳಿಯ ಬಟ್ಟೀರ ಗೋಪಾಲ ಅಲಿಯಾಸ್ ಕಿಶನ್(53) ಪತ್ನಿಯನ್ನು ಕೊಂದ ಆರೋಪಿ. ಪತ್ನಿ ಶಶ್ಮಾ (34) ಮೃತರು.
ಗಂಡ ಹೆಂಡತಿ ಜಗಳವಾಡುತ್ತಿದ್ದ ವೇಳೆ ಕೋಪೋದ್ರಿಕ್ತನಾದ ಗೋಪಾಲ ಅಲಿಯಾಸ್ ಕಿಶನ್ ಒಂಟಿನಳಿಕೆ ಕೋವಿಯಿಂದ ಶಶ್ಮಾ ಅವರ ಎದೆಯ ಭಾಗಕ್ಕೆ ಗುಂಡಿಕ್ಕಿ ಕೊಂದಿದ್ದಾನೆ. ಬಳಿಕ ಶಶ್ಮಾ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಥೆ ಕಟ್ಟಿದ ಗೋಪಾಲ, ಬೆಂಗಳೂರಿನಲ್ಲಿರುವ ತನ್ನ ಮಗ ನಿಧಿ ಹಾಗೂ ಪತ್ನಿಯ ತಂಗಿ ಶುಭಾ ಹಾಗೂ ಪತ್ನಿಯ ಕುಟುಂಬಸ್ಥರಿಗೆ ಕರೆ ಮಾಡಿ ತಿಳಿಸಿದ್ದಾನೆ.
ಅತ್ತೆಗೆ ಗುಂಡು ಹಾರಿಸಲು ಹೋಗಿ ಜೈಲು ಕಂಬಿ ಎಣಿಸುತ್ತಿರುವ ಭೂಪ..!
ಶಶ್ಮಾ ಸಾವಿನ ಬಗ್ಗೆ ಅನುಮಾನಗೊಂಡ ಗ್ರಾಮಸ್ಥರು ಚೆಟ್ಟಳ್ಳಿ ಪೊಲೀಸ್ ಉಪಠಾಣೆಗೆ ದೂರು ನೀಡಿದ್ದಾರೆ. ನಂತರ ಮೇಲಧಿಕಾರಿಗಳ ಆದೇಶದ ಮೇರೆಗೆ ಎಎಸ್‌ಐ ಪಿ.ಟಿ. ಶ್ರೀನಿವಾಸ್ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆರೋಪಿ ಗೋಪಾಲ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.