Asianet Suvarna News Asianet Suvarna News

ಬಿರಿಯಾನಿ ನೀಡಲು ವಿಳಂಬ: ಕ್ಯಾಶಿಯರ್‌ಗೆ ಹಿಗ್ಗಾಮುಗ್ಗಾ ಥಳಿಸಿದ ದುರುಳ

ಹಸಿವಾದಾಗ ಬಹುತೇಕರಿಗೆ ತಡೆದುಕೊಳ್ಳಲಾಗದವುದಿಲ್ಲ. ಹಸಿವು ಹೆಚ್ಚುತ್ತಾ ಹೋದಂತೆ ಇದ್ದಬದ್ದ ತಾಳ್ಮೆಯೆಲ್ಲಾ ಕೆಟ್ಟು ಹೋಗುತ್ತದೆ. ಹೀಗೆ ತಾಳ್ಮೆ ಕೆಟ್ಟು ಸಿಟ್ಟಿನ ಕೈಗೆ ಬುದ್ದಿಕೊಟ್ಟ ಪರಿಣಾಮ ಈಗ ಮೂವರು ಯುವಕರು ಕಂಬಿ ಎಣಿಸುತ್ತಿದ್ದಾರೆ.

Man assults on Restorent cashier for not giving Biriyani in Grater Noida akb
Author
First Published Nov 11, 2022, 11:22 AM IST

ನೋಯ್ಡಾ: ಹಸಿವಾದಾಗ ಬಹುತೇಕರಿಗೆ ತಡೆದುಕೊಳ್ಳಲಾಗದವುದಿಲ್ಲ. ಹಸಿವು ಹೆಚ್ಚುತ್ತಾ ಹೋದಂತೆ ಇದ್ದಬದ್ದ ತಾಳ್ಮೆಯೆಲ್ಲಾ ಕೆಟ್ಟು ಹೋಗುತ್ತದೆ. ಹೀಗೆ ತಾಳ್ಮೆ ಕೆಟ್ಟು ಸಿಟ್ಟಿನ ಕೈಗೆ ಬುದ್ದಿಕೊಟ್ಟ ಪರಿಣಾಮ ಈಗ ಮೂವರು ಯುವಕರು ಕಂಬಿ ಎಣಿಸುತ್ತಿದ್ದಾರೆ. ಆರ್ಡರ್ ಮಾಡಿದ ಬಿರಿಯಾನಿ ಪೂರೈಸಲು ವಿಳಂಬ ಮಾಡಿದರು ಎಂದು ಹೊಟೇಲ್ ಕ್ಯಾಶಿಯರ್ ಮೇಲೆ ವ್ಯಕ್ತಿಯೊಬ್ಬ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಉತ್ತರಪ್ರದೇಶದ ಗ್ರೇಟರ್ ನೋಯ್ಡಾದ (Greater Noida) ಹೊಟೇಲೊಂದರಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಲ್ಲೆಯ ದೃಶ್ಯ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ದೃಶ್ಯಾವಳಿಯನ್ನು ಆಧರಿಸಿ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.  ಈ ಸಂಬಂಧ ರೆಸ್ಟೋರೆಂಟ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. 

ಬುಧವಾರ ರಾತ್ರಿ  10.30ರ ಸುಮಾರಿಗೆ ಮೂವರು ಯುವಕರು ರಾತ್ರಿಯ ಊಟಕ್ಕಾಗಿ ನಗರದ ರೆಸ್ಟೋರೆಂಟ್ ಒಂದಕ್ಕೆ ಆಗಮಿಸಿದ್ದರು. ಆದರೆ ತುಂಬಾ ಹೊತ್ತಾದರೂ ರೆಸ್ಟೋರೆಂಟ್ ಸಿಬ್ಬಂದಿ ಬಿರಿಯಾನಿ ಪೂರೈಕೆ ಮಾಡದ ಹಿನ್ನೆಲೆಯಲ್ಲಿ ಅವರು ಕ್ಯಾಷಿಯರ್‌ಗೆ ಹೊಡೆದಿದ್ದಾಗಿ ಹೇಳಿದ್ದಾರೆ. ಗ್ರೇಟರ್ ನೋಯ್ಡಾದ ಅನ್ಸಲ್ ಪ್ಲಾಜಾ ಮಾಲ್‌ನಲ್ಲಿರುವ (Ansal Plaza mall)  ಝೌಕ್ ರೆಸ್ಟೋರೆಂಟ್‌ನಲ್ಲಿ (Zauk restaurant) ಈ ಆಘಾತಕಾರಿ ಘಟನೆ ನಡೆದಿದೆ. ಬಂಧಿತರನ್ನು ಮನೋಜ್ (Manoj), ರವೇಶ್ (Rravesh), ಕ್ರಿಶ್ (Kris) ಎಂದು ಗುರುತಿಸಲಾಗಿದ್ದು, ಅವರೆಲ್ಲರೂ ದಾದ್ರಿ ನಿವಾಸಿಗಳಾಗಿದ್ದಾರೆ. 

Mahalaksmi-Ravinder: ಮಧ್ಯರಾತ್ರಿ ಬಿರಿಯಾನಿ, ಹೊಸ ಕಾರು, ಫಾರಿನ್‌ ಟ್ರಿಪ್: ಟ್ರೋಲ್ ಅಗುತ್ತಿದ್ದರೂ ಮಹಾಲಕ್ಷ್ಮಿ ಡೋಂಟ್‌ ಕೇರ್

ವಿಡಿಯೋದಲ್ಲಿ ಕಾಣಿಸುವಂತೆ ರೆಸ್ಟೋರೆಂಟ್‌ ಒಳಗೆ ಟೇಬಲ್ ಮೇಲೆ ಮೂವರು ಕುಳಿತಿದ್ದು, ಮೂವರಲ್ಲಿ ಒಬ್ಬ ಇದ್ದಕ್ಕಿದ್ದಂತೆ ಎದ್ದು ಹೋಗಿ ರೆಸ್ಟೋರೆಂಟ್‌ನ ಕ್ಯಾಶ್ ಕೌಂಟರ್‌ನಲ್ಲಿ ಕುಳಿತಿದ್ದ ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಕ್ಯಾಷಿಯರ್ ಕತ್ತು ಪಟ್ಟಿಗೆ ಕೈ ಹಾಕಿ ಹಿಡಿದುಕೊಂಡು ಅಲ್ಲಿಂದ ಎಳೆದುಕೊಂಡು ಬಂದು ಆತನಿಗೆ ಸರಿಯಾಗಿ ಥಳಿಸಿದ್ದಾನೆ. 

 

ಬುಧವಾರ ರಾತ್ರಿ ಈ ಮೂವರು ಆರೋಪಿಗಳು ಊಟಕ್ಕೆಂದು ರೆಸ್ಟೋರೆಂಟ್‌ಗೆ ತೆರಳಿ ಚಿಕನ್ ಬಿರಿಯಾನಿ (chicken biryani) ಆರ್ಡರ್ ಮಾಡಿದ್ದರು. ಆದರೆ ಸ್ವಲ್ಪ ಸಮಯದ ನಂತರ, ಅಲ್ತಾಫ್ ಎಂಬ ಮಾಣಿ ಬಿರಿಯಾನಿ ಮುಗಿದಿದೆ ಎಂದು ಹೇಳಿದ್ದಾನೆ. ಮೊದಲೇ ಹಸಿದಿದ್ದು, ಬಿರಿಯಾನಿ ಇಲ್ಲ ಎನ್ನುತ್ತಿದ್ದಂತೆ ಇವರ ಪಿತ್ತ ನೆತ್ತಿಗೇರಿದ್ದು, ಹೊಟೇಲ್ ಸಿಬ್ಬಂದಿಯ ಕಾಲರ್ ಪಟ್ಟಿ ಹಿಡಿದಿದ್ದಾನೆ ಎಂದು ನೋಯ್ಡಾ ಎಸಿಪಿ ಮಹೇಂದ್ರ ದೇವ್ ಹೇಳಿಕೆ ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಘಟನೆಗೆ ಸಂಬಂಧಿಸಿದಂತೆ ನಾಲೆಜ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ (Knowledge Park police station) ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡಿದ್ದಕ್ಕಾಗಿ ಶಿಕ್ಷೆ) ಮತ್ತು 147 (ಗಲಭೆಗೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಿರಿಯಾನಿಯಲ್ಲಿ ಪಾಲು ಕೇಳಿದ್ದಕ್ಕೆ ಬೆಂಕಿ ಹಚ್ಚಿದ ಪತಿ: ಪತ್ನಿ ಜತೆ ಗಂಡನೂ ಬಲಿ..!

Follow Us:
Download App:
  • android
  • ios