ಉತ್ತರಪ್ರದೇಶದಲ್ಲಿ ವ್ಯಕ್ತಿಯೊಬ್ಬ ಕೋಳಿ ಮಾಂಸದ ತುಂಡುಗಳನ್ನು ಹಿಂದೂ ದೇವತೆಗಳ ಚಿತ್ರವಿದ್ದ ಪೇಪರ್‌ನಲ್ಲಿ ಸುತ್ತಿ ಗ್ರಾಹಕರಿಗೆ ನೀಡಿದ್ದಾನೆ. ಇದು ವಿವಾದಕ್ಕೀಡಾಗಿದ್ದು, ಈ ಸಂಬಂಧ ವಿಚಾರಣೆಗೆ ಬಂದ ಪೊಲೀಸರ ಮೇಲೂ ಆತ ಹಲ್ಲೆ ನಡೆಸಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಈಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 

ಲಕ್ನೋ: ನಿನ್ನೆಯಷ್ಟೇ (ಜೂನ್‌5) ತಮಿಳು ಸಿನಿಮಾ ನಿರ್ದೇಶಕಿಯೊಬ್ಬರು ತಮ್ಮ ಸಾಕ್ಷ್ಯ ಚಿತ್ರದ ಪೋಸ್ಟರ್‌ನಲ್ಲಿ ಹಿಂದೂ ದೇವತೆ ಕಾಳಿ ಕೈಯಲ್ಲಿ ಸಿಗರೇಟು ಹಿಡಿದು ಸೇದುತ್ತಿರುವಂತೆ ಪೋಸ್ಟರ್‌ ರಿಲೀಸ್ ಮಾಡಿದ್ದರು. ಈ ಮೂಲಕ ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದರು. ಈ ಘಟನೆ ಮಾಸುವ ಮುನ್ನವೇ ಈಗ ಉತ್ತರಪ್ರದೇಶದಲ್ಲಿ ವ್ಯಕ್ತಿಯೊಬ್ಬ ಕೋಳಿ ಮಾಂಸದ ತುಂಡುಗಳನ್ನು ಹಿಂದೂ ದೇವತೆಗಳ ಚಿತ್ರವಿದ್ದ ಪೇಪರ್‌ನಲ್ಲಿ ಸುತ್ತಿ ಗ್ರಾಹಕರಿಗೆ ನೀಡಿದ್ದಾನೆ. ಇದು ವಿವಾದಕ್ಕೀಡಾಗಿದ್ದು, ಈ ಸಂಬಂಧ ವಿಚಾರಣೆಗೆ ಬಂದ ಪೊಲೀಸರ ಮೇಲೂ ಆತ ಹಲ್ಲೆ ನಡೆಸಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಈಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 

ಉತ್ತರಪ್ರದೇಶದ (Uttar Pradesh) ಸಂಭಾಲ್‌ನಲ್ಲಿ (Sambhal) ಈ ಘಟನೆ ನಡೆದಿದೆ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ತಾಲೀಬ್ ಹುಸೇನ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಈ ಘಟನೆ ನಡೆದಿದೆ. ಈತ ಮಾಂಸ ಮಾರಾಟ ಮಾಡುತ್ತಿದ್ದು, ಚಿಕನ್‌ ತುಂಡುಗಳನ್ನು ಹಿಂದೂ ದೇವತೆಗಳ ಚಿತ್ರವಿದ್ದ ಪೇಪರ್‌ನಲ್ಲಿ ಸುತ್ತಿ ಗ್ರಾಹಕರಿಗೆ ನೀಡಿದ್ದೇನೆ. ಇದನ್ನು ಗಮನಿಸಿದ ಗ್ರಾಹಕರು ಪೊಲೀಸರಿಗೆ ದೂರು ನೀಡಿದ್ದಾರೆ. ಚಿಕನ್ ತುಂಡುಗಳನ್ನು ಹಿಂದೂ ದೇವತೆಗಳ ಚಿತ್ರವಿರುವ ಪೇಪರ್‌ನಲ್ಲಿ ಮಾರುವ ಮೂಲಕ ಆತ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾನೆ ಎಂದು ಕೆಲವರು ದುರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾಗಿ ಸುದ್ದಿಸಂಸ್ಥೆ ಪಿಟಿಐ ಹೇಳಿದ್ದಾರೆ. 

Scroll to load tweet…

ಹಿಂದೂ ದೇವತೆ, ಅಮಿತ್ ಶಾ ಕುರಿತು ಅವಹೇಳನಕಾರಿ ಟೀಕೆ; ಹಾಸ್ಯ ಕಲಾವಿದ ಸೇರಿ ಐವರು ಅರೆಸ್ಟ್

ಇದಾದ ಬಳಿಕ ಪೊಲೀಸ್‌ ತಂಡ ಆತನ ಮಾಂಸದ ಅಂಗಡಿ ಇರುವ ಸ್ಥಳಕ್ಕೆ ತೆರಳಿದ್ದು, ಈ ವೇಳೆ ಪೊಲೀಸರ ಮೇಲೆಯೇ ಆತ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತಾಲಿಬ್ ಹುಸೇನ್ (Talib Hussain) ವಿರುದ್ಧ ಐಪಿಸಿ ಸೆಕ್ಷನ್ 153-ಎ [ಧರ್ಮ, ಜನಾಂಗ, ಜನ್ಮ ಸ್ಥಳ, ವಾಸಸ್ಥಳದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು], 295-ಎ [ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಅವಮಾನಿಸುವ ಮೂಲಕ ಆಕ್ರೋಶಗೊಳಿಸುವ ಉದ್ದೇಶ,(ಧರ್ಮ ಅಥವಾ ಧಾರ್ಮಿಕ ನಂಬಿಕೆಗಳು] ಮತ್ತು 307 [ಕೊಲೆಯ ಪ್ರಯತ್ನ].ಈ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ. 

ಪೋಸ್ಟರ್‌ ವಿವಾದದ ಮಧ್ಯೆ ಸಂಕಷ್ಟಕ್ಕೆ ಸಿಲುಕಿದ 'ಕಾಳಿ' ಸಿನಿಮಾ, ದೆಹಲಿ ಪೊಲೀಸರಿಂದ FIR!

ಭಾರತೀಯ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರು ತಮ್ಮ ಸಾಕ್ಷ್ಯಚಿತ್ರದ ಪೋಸ್ಟರ್‌ನಲ್ಲಿ ಕಾಳಿ ಮಾತೆ ಕೈಯಲ್ಲಿ ಎಲ್‌ಜಿಬಿಟಿಕ್ಯೂ ಸಮುದಾಯಕ್ಕೆ ಸೇರಿದ ಧ್ವಜವನ್ನು ಹಿಡಿದುಕೊಂಡು ಕೈಯಲ್ಲಿ ಸಿಗರೇಟು ಹಿಡಿದು ಸೇದುತ್ತಿರುವ ಪೋಸ್ಟರ್‌ ಅನ್ನು ಬಿಡುಗಡೆಗೊಳಿಸಿದ್ದರು. ಇದಕ್ಕೆ ದೇಶದೆಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಚಲನಚಿತ್ರ ನಿರ್ಮಾಪಕಿ ಲೀನಾ ಅವರು ತಮ್ಮ ಸಾಕ್ಷ್ಯಚಿತ್ರ ಕಾಳಿಯ ಪೋಸ್ಟರ್ ಅನ್ನು ಜೂನ್ 2, 2022 ರಂದು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. ಕೆನಡಾ ಫಿಲ್ಮ್ ಫೆಸ್ಟಿವಲ್‌ನಲ್ಲಿ (ರಿದಮ್ಸ್ ಆಫ್ ಕೆನಡಾ) ತಮ್ಮ ಸಾಕ್ಷ್ಯಚಿತ್ರ ಕಾಳಿ ಬಿಡುಗಡೆಯಾದ ಕಾರಣ ನಾನು ತುಂಬಾ ಉತ್ಸುಕಳಾಗಿದ್ದೇನೆ ಎಂದು ಅವರು ಹೇಳಿಕೊಂಡಿದ್ದರು. ಲೀನಾ ಅವರ ಸಾಕ್ಷ್ಯಚಿತ್ರದ ಹೆಸರು ಕಾಳಿ. ಈ ಪೋಸ್ಟರ್‌ನಲ್ಲಿ ಮಾ ಕಾಳಿ ಸಿಗರೇಟ್ ಸೇದುತ್ತಿರುವುದನ್ನು ತೋರಿಸಲಾಗಿದ್ದು, ಇದನ್ನು ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದರು.

ಇದಾದ ಬಳಿಕ 'ಕಾಳಿ' ಚಿತ್ರಕ್ಕೆ ಸಂಬಂಧಿಸಿದ ವಿವಾದಾತ್ಮಕ ಪೋಸ್ಟರ್‌ಗೆ ಸಂಬಂಧಿಸಿದಂತೆ ಐಎಫ್‌ಎಸ್‌ಸಿ ಘಟಕವು ಐಪಿಸಿಯ ಸೆಕ್ಷನ್ 153 ಎ ಮತ್ತು 295 ಎ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.