ಇಂದೋರ್(ಜ.02): ಹಾಸ್ಯ ಕಾರ್ಯಕ್ರಮ, ವ್ಯಂಗ್ಯ ಚಿತ್ರ ಸೇರಿದಂತೆ ಹಲವೆಡೆ ಹಿಂದೂ ದೇವತೆಗಳನ್ನು ಅವಾಮಾನಿಸುವ ಪದ್ಧತಿ ಹೆಚ್ಚಾಗುತ್ತಿದೆ.  ಹೀಗೆ ಕಾರ್ಯಕ್ರಮವೊಂದರಲ್ಲಿ ಹಿಂದೂ ದೇವತೆ, ಗೃಹ ಸಚಿವ ಅಮಿತ್ ಶಾ ವಿರುದ್ಧ ಅವಹೇಳನಕಾರಿ ಟೀಕೆ ಮಾಡಿದ ಹಾಸ್ಯ ಕಲಾವದಿ ಮುನಾವರ್ ಫಾರೂಖಿ, ಕಾರ್ಯಕ್ರಮ ಆಯೋಜಕ ಸೇರಿದಂತೆ ಐವರು ಅರೆಸ್ಟ್ ಆಗಿದ್ದಾರೆ.

UP,MP ಬಳಿಕ ಇದೀಗ ಗುಜರಾತ್; ಲವ್ ಜಿಹಾದ್ ವಿರುದ್ಧ ಮತ್ತಷ್ಟು ಕಠಿಣ ಕಾನೂನು !...

ಇಂದೋರ್‌ನ ಹೊಟೆಲ್‌ ಒಂದರಲ್ಲಿ ಹೊಸ ವರ್ಷ ಪ್ರಯುಕ್ತ ಹಾಸ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಂಬೈ ಹಾಸ್ಯ ಕಲಾವದಿ ಮುನಾವರ್ ಫಾರೂಖಿಯನ್ನು ಆಹ್ವಾನಿಸಲಾಗಿತ್ತು. ಕಾರ್ಯಕ್ರಮದಲ್ಲಿ ಫಾರೂಖಿ, ಆರಂಭದಲ್ಲಿ ಗೃಹ ಸಚಿವ ಅಮಿತ್ ಶಾ ವಿರುದ್ಧ ಅವಹೇಳನಕಾರಿ ಟೀಕೆ ಮಾಡಿದ್ದಾನೆ. ಬಳಿಕ ಹಿಂದೂ ದೇವತೆಗಳನ್ನು ಅವಹೇಳನ ಮಾಡಿದ್ದಾನೆ. 

ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದ ಹಿಂದೂ ರಕ್ಷಕ್ ಸಂಘಟನೆ ವಕ್ಕಾರ, ಸ್ಥಳೀಯ ಬಿಜೆಪಿ ಶಾಸಕಿ ಮಾಲಿನ ಗೌರ್ ಪುತ್ರ ಎಕಲವ್ಯ ಗೌರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಗೌರ್ ಸ್ನೇಹಿತರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಬಳಿಕ ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ.

ಘಟನೆ ಬಳಿಕ ಪೊಲೀಸ್ ಠಾಣೆಯಲ್ಲಿ ಗೌರ್ ದೂರು ದಾಖಲಿಸಿದ್ದಾರೆ. ಇದೇ ವೇಳೆ ವಿಡಿಯೋ ಕೂಡ ನೀಡಿದ್ದಾರೆ. ಇತ್ತ ಪೊಲೀಸರು ಹಾಸ್ಯ ಕಲಾವಿದ ಮುನಾವರ್ ಫಾರೂಖಿ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಇವರ ವಿರುದ್ಧ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಿರುವ, ಕೊರೋನಾ ವೈರಸ್ ಮಾರ್ಗಸೂಚಿ ಪಾಲಿಸಿದ ಸೇರಿದಂತೆ ಐಪಿಎಸ್ ಸೆಕ್ಷನ್ 188, 269, 34 ಮತ್ತು 295A ಅಡಿಯಲ್ಲಿ ಪ್ರಕರಣ ದಾಖಲಾಗಿದೆ.