ಪ್ರಾಚೀನ ಕಾಲದ ವಿಷ್ಣು ವಿಗ್ರಹ ವಿದೇಶಕ್ಕೆ ರಫ್ತು ಮಾಡಲು ಯತ್ನ: ಆರೋಪಿ ಬಂಧನ
ಬೆಂಗಳೂರಿನಿಂದ ಮಲೇಷ್ಯಾಗೆ ರಫ್ತು ಮಾಡಲು ಯತ್ನಿಸಿದ ಪ್ರಾಚೀನ ಕಾಲದ ವಿಷ್ಣುವಿನ ಮೂರ್ತಿಯನ್ನು ಬೆಂಗಳೂರಿನ ಏರ್ ಕಾರ್ಗೋ ಕಸ್ಟಮ್ಸ್ ಗುಪ್ತಚರ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಬೆಂಗಳೂರು (ಮಾ.21): ಬೆಂಗಳೂರಿನಿಂದ (Bengaluru) ಮಲೇಷ್ಯಾಗೆ (Malaysia) ರಫ್ತು ಮಾಡಲು ಯತ್ನಿಸಿದ ಪ್ರಾಚೀನ ಕಾಲದ ವಿಷ್ಣುವಿನ ಮೂರ್ತಿಯನ್ನು (Vishnu Idol) ಬೆಂಗಳೂರಿನ ಏರ್ ಕಾರ್ಗೋ ಕಸ್ಟಮ್ಸ್ ಗುಪ್ತಚರ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. 22.5 ಕೆಜಿಯ ಪ್ರಾಚೀನ ಕಾಲದ ವಿಷ್ಣಮೂರ್ತಿ ಕಂಚಿನ ವಿಗ್ರಹವನ್ನು ವಶಕ್ಕೆ ಪಡೆದಿದ್ದಾರೆ. ಅಲದೇ ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪುರಾತನ ವಸ್ತುಗಳು ಮತ್ತು ಕಲಾನಿಧಿ ಆಕ್ಟ್ - 1972 ಕಾಯಿದೆ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ. ಭಾರತದಲ್ಲಿ ಪ್ರಾಚೀನ ಕಾಲದ ಕಂಚಿನ ಮೂರ್ತಿಗಳನ್ನು ಮಾರಾಟ ನಿಷೇಧದ ನಡುವೆಯೂ ಸಾಗಾಟ ಮಾಡಲು ಯತ್ನಿಸಿದ್ದವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.
ಅಡುಗೆ ಪಾತ್ರೆಗಳಲ್ಲಿ ಸಿಕ್ತು ಡ್ರಗ್ಸ್: ಅಡುಗೆಗೆ ಬಳಸೋ ಪಾತ್ರೆ ಸಾಮಾನುಗಳಲ್ಲಿ ಮರೆ ಮಾಚಿ ಆಸ್ಟ್ರೇಲಿಯಾಗೆ ಎಫೆಡ್ರಿನ್ ಡ್ರಗ್ಸ್ (Drugs) ಸಾಗಾಟ ಮಾಡುವ ವೇಳೆ ಸಿಕ್ಕಿಬಿದ್ದಿದ್ದಾರೆ. ಹೌದು ಕೇಂಪೇಗೌಡ ಏರ್ಫೋರ್ಟ್‌ನಲ್ಲಿ ಏರ್ ಕಾರ್ಗೋ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ವೇಳೆ ವಶಕ್ಕೆ ಪಡೆದಿದ್ದಾರೆ. 9.23 ಕೋಟಿ ಮೌಲ್ಯದ 46.7 ಕೆಜಿ ಎಫೆಡ್ರಿನ್ ಡ್ರಗ್ಸ್‌ನ್ನು ಸೀಜ್ ಮಾಡಿದ್ದಾರೆ. ಇನ್ನೂ ಡ್ರಗ್ಸ್ ಸಾಗಾಟ ಮಾಡುತ್ತಿದ್ದವರ ಮೇಲೆ ಎನ್ ಡಿಪಿಎಸ್ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮಾಡುತ್ತಿದ್ದಾರೆ.
ಸ್ಟೀಲ್ ಪಾತ್ರೆಗಳಲ್ಲಿ ಡ್ರಗ್ಸ್: ಬೆಂಗಳೂರಿನಿಂದ ಆಸ್ಟ್ರೇಲಿಯಾಗೆ ಎಫೆಡ್ರಿಯನ್ ಡ್ರಗ್ಸ್‌ನ್ನು ಸಿಲ್ವರ್ ಪಾತ್ರೆಗಳಲ್ಲಿ ಮರೆಮಾಚಿ ಸಾಗಾಟ ಮಾಡಲಾಗುತಿತ್ತು, ಖಚಿತ ಮಾಹಿತಿ ಮೆರೆಗೆ ಏರ್ ಕಾರ್ಗೋ ಕಸ್ಟಮ್ಸ್ ಅಧಿಕಾರಿಗಳು ಈ ಸ್ಟೀಲ್ ಪಾತ್ರೆಗಳನ್ನು ತಪಾಸಣೆ ವೇಳೆ ಪಾತ್ರೆಯ ತಳಭಾಗದಲ್ಲಿ ಡ್ರಗ್ಸ್ ಕವರ್ ಗಳನ್ನು ಇಟ್ಟಿರೋದು ಪತ್ತೆಯಾಗಿದೆ. ಕೂಡಲೇ ಈ ಡ್ರಗ್ಸ್ ವಶಪಡಿಸಿಕೊಂಡ ಕಸ್ಟಮ್ಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
Drugs Racket in Karnataka: 'ಡ್ರಗ್ಸ್ ಪೆಡ್ಲರ್‌ಗಳ ಎನ್‌ಕೌಂಟರ್ ಮಾಡಿ'
'ಡ್ರಗ್ಸ್ ಪೆಡ್ಲರ್‌ಗಳ ಎನ್‌ಕೌಂಟರ್ ಮಾಡಿ: ಮಾದಕ ವ್ಯಸನಿಗಳ ವಿರುದ್ಧ ಗೂಂಡಾ ಕಾಯ್ದೆ ಅಡಿ ಕ್ರಮ ಕೈಗೊಳ್ಳಬೇಕು, ಡ್ರಗ್ಸ್ ಪೆಡ್ಲರ್‌ಗಳನ್ನು (Drugs Peddlers) ಎನ್‌ಕೌಂಟರ್ (Encounter) ಮಾಡುವ ನಿರ್ಧಾರ ತೆಗೆದುಕೊಳ್ಳಬೇಕು, ಶಾಲೆಗಳಲ್ಲಿ ನೈತಿಕ ಶಿಕ್ಷಣ ಕಡ್ಡಾಯಗೊಳಿಸಬೇಕು ಎಂದು ಪಕ್ಷಾತೀತವಾಗಿ ಸಲಹೆ ನೀಡಿದ ಸದಸ್ಯರು, ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಮಾರಾಟದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ, ಕಠಿಣ ಕ್ರಮದ ಮೂಲಕ ತಡೆಗಟ್ಟಬೇಕು ಎಂದು ಆಗ್ರಹಿಸಿದರು.
ಮಹಿಳೆಯ ಗುಪ್ತಾಂಗದಲ್ಲಿ ಸಿಕ್ತು 88 ಪ್ಯಾಕೇಟ್ ಡ್ರಗ್ಸ್, ಹೊರತೆಗೆಯಲು 11 ದಿನ ಬೇಕಾಯ್ತು!
ನಿಯಮ 330ರ ಅಡಿ ರಾಜ್ಯಾದ್ಯಂತ ಅದರಲ್ಲೂ, ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಗಾಂಜಾ ಮತ್ತು ಡ್ರಗ್ಸ್ ಮಾರಾಟದಿಂದ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಮಾದಕ ವ್ಯಸನಿಗಳಾಗುತ್ತಿರುವ ಕುರಿತು ಸುಮಾರು ಎರಡು ಗಂಟೆ ಕಾಲ ಸದನದಲ್ಲಿ ಚರ್ಚೆ ನಡೆಯಿತು. ಬಿಜೆಪಿಯ(BJP) ಶಶೀಲ್ ಜಿ.ನಮೋಶಿ ಮಾತನಾಡಿ, ಪಂಜಾಬ್(Punjab) ಬಿಟ್ಟರೆ ಅತ್ಯಂತ ಹೆಚ್ಚು ಡ್ರಗ್ಸ್ ಪ್ರಕರಣಗಳು ಬೆಂಗಳೂರಿನಲ್ಲಿ ಪತ್ತೆಯಾಗುತ್ತಿವೆ.
ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪಿಡಿಒ ನೇತೃತ್ವದಲ್ಲಿ ತಂಡ ಹಾಗೂ ಬೆಂಗಳೂರಿನ ಶಾಲೆ, ಕಾಲೇಜುಗಳಲ್ಲಿ ತನಿಖಾ ತಂಡಗಳನ್ನು ರಚಿಸಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್‌ನ(Congress) ಎಸ್.ರವಿ ಮಾತನಾಡಿ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಗಾಂಜಾ, ಡ್ರಗ್ಸ್ ಹೆಚ್ಚುತ್ತಿದೆ. ಕೇಂದ್ರದ ಎನ್‌ಸಿಬಿ(Drug Control Agency) ಮಾದರಿಯಲ್ಲಿ ರಾಜ್ಯದಲ್ಲಿ ಎಸ್‌ಸಿಬಿಯನ್ನು ರಚಿಸಬೇಕು. ಪ್ರಮುಖವಾಗಿ ಡ್ರಗ್ ಮಾರಾಟ ಮಾಡುವವರ ವಿರುದ್ಧ ಕಾನೂನು ಅತ್ಯಂತ ಸರಳವಾಗಿದೆ, ಹಾಗಾಗಿ ಅಂತಹವರ ವಿರುದ್ಧ ಗೂಂಡಾ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.