Hassan: ದಂತಕ್ಕಾಗಿ ಕಾಡಾನೆ ಹತ್ಯೆ: ಮೂವರ ಬಂಧನ
ಹೊಡೆದ್ರೆ ಆನೇನೆ ಹೊಡಿಬೇಕು ಅನ್ನೋ ಗಾದೆ ಇದೆ. ಈ ಗಾದೇನ ಯತವತ್ತಾಗಿ ಪಾಲನೆ ಮಾಡಲು ಮುಂದಾಗಿರೋ ಕಿರಾತಕರ ತಂಡ ಕಾಡಾನೆಯನ್ನೇ ಕೊಂದು ಕೋಟಿ ಗಟ್ಟಲೆ ದುಡಿಮೆ ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾರೆ.
ಕೆ.ಎಂ.ಹರೀಶ್, ಏಷ್ಯಾ ನೆಟ್ ಸುವರ್ಣ ನ್ಯೂಸ್.
ಹಾಸನ (ಮಾರ್ಚ್ 21): ಹೊಡೆದ್ರೆ ಆನೇನೆ ಹೊಡಿಬೇಕು ಅನ್ನೋ ಗಾದೆ ಇದೆ. ಈ ಗಾದೇನ ಯತವತ್ತಾಗಿ ಪಾಲನೆ ಮಾಡಲು ಮುಂದಾಗಿರೋ ಕಿರಾತಕರ ತಂಡ ಕಾಡಾನೆಯನ್ನೇ (Elephant) ಕೊಂದು ಕೋಟಿ ಗಟ್ಟಲೆ ದುಡಿಮೆ ಮಾಡಲು ಹೋಗಿ ಪೊಲೀಸರ (Police) ಅತಿಥಿಯಾಗಿದ್ದಾರೆ. ಅವರು ಬೆಚ್ಚಿ ದಂತಕ್ಕಾಗಿ (Ivory) ಮಾಡಿರೋ ಕೆಲಸ ನೋಡಿದ್ರೆ ಎಂತಹವರನ್ನೂ ಹುಬ್ಬೇರಿಸುವಂತದ್ದೇ. ದಂತಚೋರರು ಪೊಲೀಸರ ಅತಿಥಿಯಾಗಿದ್ದು ಹಾಸನದಲ್ಲಿ (Hassan). ದುಡ್ಡಿನ ಆಸೆಗಾಗಿ ಕಾಡಾನೆ ಕೊಂದ ದುರುಳರು. ಕಾಡಾನೆ ಕೊಂದು ತಮ್ಮ ಜಮೀನಿನಲ್ಲೇ ಹೂತ ಕಿರಾತಕರು. ಕೋಟಿ ಆಸೆ ಕಂಡವರು ಸೇರಿದ್ದು ಮಾತ್ರ ಜೈಲನ್ನ.
ಕೋಟಿ ಆಸೆ ನಿರಾಸೆ ಮಾಡಿ ಅಂದರ್ ಕೆಡ್ಡಾಕ್ಕೆ ಕೆಡವಿದ ಬೆಂಗಳೂರು ಪೊಲೀಸರು. ಹೌದು! ದುಡ್ಡು ಮಾಡಬೇಕು ಅಂತಾ ಕೆಲವರು ನಾನಾ ದಾರಿ ಹಿಡಿತಾರೆ. ಆದರೆ ಹಾಸನ ತಾ. ಸೀಗೆ ವೀರಾಪುರ ಗ್ರಾಮದ ಗುಂಪೊಂದು ಮಾಡಿರೋ ಕೆಲಸ ಮಾತ್ರ ಎಂತಹವರನ್ನೂ ಹುಬ್ಬೇರಿಸುತ್ತಿದೆ. ತನ್ನ ಜಮೀನಿನ ಪಕ್ಕದಲ್ಲೇ ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗಿದ್ದ ಒಂಟಿ ಸಲಗವೊಂದರ ದಂತಮಾರಿ ಕೋಟಿ ಸಂಪಾದಿಸಲು ಆಸೆಪಟ್ಟಿದ್ದಾರೆ. ಸತ್ತ ಕಾಡಾನೆಯ ದಂತವನ್ನು ತಕ್ಷಣವೇ ತರಗೆಯಲು ಸಾಧ್ಯವಾಗದೇ ಯಾರಿಗೂ ಗೊತ್ತಿಲ್ಲದಂತೆ ಜೆಸಿಬಿ ಮೂಲಕ ತಮ್ಮ ಜಮೀನಿನಲ್ಲೇ ಗುಂಡಿ ತೆಗೆದು ಹೂತಿದ್ದಾರೆ.
Elephant: ಮೈಸೂರಿನ ಗಜ‘ರಾಜಾ’ ಶ್ರೀಲಂಕಾದಲ್ಲಿ ನಿಧನ
ಕೆಲ ತಿಂಗಳ ನಂತರ ಮತ್ತೆ ಗುಂಡಿಯನ್ನು ಜೆಸಿಬಿ ಇಂದ ತೆಗೆಸಿ ಕೊಳೆತುಹೋಗಿದ್ದ ಸಲಗದ ದಂತವನ್ನು ಕದ್ದು ಮಾರಲು ಹೊತ್ತೊಯ್ದಿದ್ದಾರೆ. ಇನ್ನು ಭಾಗಿಯಾಗಿದ್ದ ಚಂದ್ರೇಗೌಡ ತಿಲಕ್ ಮತ್ತು ನಾಂಗೇದ್ರ ದಂತ ಮಾರಿ ಕೋಟಿ ಸಂಪಾದಿಸಲು ಬೆಂಗಳೂರು ಸೇರಿದ್ದಾರೆ. ಆದ್ರೆ ಈ ಗುಂಪನ್ನು ಬೆಂಗಳೂರಿನ ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶ ಪೊಲೀಸರು ಖೆಡ್ಡಾ ತೋಡಿ ಅಂದರ್ ಅತಿಥಿಗಳನ್ನಾಗಿ ಮಡಿಕೊಂಡಿದ್ದಾರೆ. ಈ ಸಂಬಂಧ ಇಂದು ಸ್ಥಳ ಪರಿಶೀಲನೆ ನಡೆಸಲು ಆರೋಪಿ ಚಂದ್ರೇಗೌಡನನ್ನ ಕಾಡಾನೆ ಹೂತಿಟ್ಟ ಸ್ಥಳಕ್ಕೆ ಕರೆದುಕೊಂಡು ಬಂದು ಭೂಮಿ ಒಳಗೆ ಮುಚ್ಚಿದ್ದ ಕಾಡಾನೆ ಕಳೆಬರವನ್ನು ಆಚೆ ತೆಗೆದು ಅರಣ್ಯ ಮತ್ತು ಪೊಲೀಸ್ ಇಲಾಖೆ ಜಂಟಿ ಪರಿಶೀಲನೆ ನಡೆಸಿದರು. ಈ ಭಾಗದಲ್ಲಿ ಕೆಲ ದಿನಗಳಿಂದ ಕಾಡಾನೆಗಳು ಓಡಾಡುತ್ತಿದ್ದವು.
ಈ ಪ್ರಕರಣದಲ್ಲಿ ಭಾಗಿಯಾಗಿರೋ ನಾಗರಾಜ ಎಂಬಾತ ವಿದ್ಯುತ್ ಹರಿಸಿ ಕಾಡಾನೆ ಕೊಂದು ತನ್ನ ಗೆಳೆಯ ಚಂದ್ರೇಗೌಡ ಮತ್ತಿತರೊಂದಿಗೆ ದಂತ ಮಾರಲು ಮುಂದಾಗಿ ಸಿಕ್ಕಿಬಿದ್ದಿದ್ದಾನೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಸಾವನ್ನಪ್ಪಿರೋ ಮಧ್ಯ ವಯಸ್ಕ ಕಾಡಾನೆಯಾಗಿದ್ದು, ಅರಣ್ಯ ಇಲಾಖೆ ಹಲವಾರು ದಿನಗಳಿಂದ ಈ ಆನೆಗಾಗಿ ಹುಡುಕಾಟ ನಡೆಸಿತ್ತಂತೆ. ಒಟ್ಟಿನಲ್ಲಿ ಕಾಡು ಪ್ರಾಣಿಗಳನ್ನ ಕೊಂದ್ರೆ ಕಾನೂನಿಲ್ಲಿ ಕಠಿಣ ಶಿಕ್ಷೆ ಎಂಬ ನಿಯಮವಿದ್ರೂ ಈ ಗುಂಪೊಂದು ಕೋಟಿ ಗಟ್ಟಲೆ ಹಣ ಮಾಡಲು ಹೊಂಚು ಹಾಕಿ ಪಾಪದ ಪ್ರಾಣಿಯೊಂದರ ಜೀವ ತೆಗೆದು ಈಗ ತಾವೂ ಪೊಲೀಸರ ಅತಿಥಿಯಾಗಿದ್ದಾರೆ.
ರಾಷ್ಟ್ರೀಯ ಆನೆ ದಿನ : ಹಣ್ಣು ತರಕಾರಿಗಳ ಬಪೆ ಆಯೋಜಿಸಿ ಗಜಪಡೆಗೆ ಸನ್ಮಾನ
ಆನೆ ಕಾರಿಡಾರ್ ಉಳಿಸಿ: ವಿಶ್ವ ವನ್ಯಜೀವಿ ದಿನ ಮಾನವ ಕುಲಕ್ಕೆ ಬಹಳ ಪ್ರಾಮುಖ್ಯವಾದುದ್ದು. ವನ್ಯಜೀವಿಗಳ ಹಕ್ಕು ಮತ್ತು ಸಂರಕ್ಷಣೆ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ನಮ್ಮ ಬೆಂಗಳೂರು ಫೌಂಡೇಶನ್ ಬನ್ನೇರುಘಟ್ಟ ಜೈವಿಕ ಆವಾಸ ಸ್ಥಾನದ ಸಂರಕ್ಷಣೆಯಲ್ಲಿಯೂ ಹೋರಾಟ ಮಾಡಿಕೊಂಡು ಬಂದಿದೆ. ನಮ್ಮ ಬೆಂಗಳೂರು ಫೌಂಡೇಶನ್ ಹಾಗೂ ವೃಕ್ಷ ಫೌಂಡೇಶನ್ ಬೆಂಗಳೂರು (Bengaluru) ನಗರ ಜಿಲ್ಲಾಧಿಕಾರಿ. ಜೆ.ಮಂಜುನಾಥ್ ಅವರಿಗೆ ವಿಶೇಷ ಮನವಿ ಒಂದನ್ನು ಸಲ್ಲಿಕೆ ಮಾಡಿದೆ. ಎಲಿಫೆಂಟ್ ಕಾರಿಡಾರ್ 1000 ಎಕರೆ ಸರ್ವೆ ಕಾರ್ಯವನ್ನು ತ್ವರಿತಗೊಳಿಸಬೇಕು ಜತೆಗೆ 232 ಎಕರೆ ಜಮೀನಿನ ಮಾಲೀಕತ್ವವನ್ನು ಅರಣ್ಯ ಇಲಾಖೆ ವ್ಯಾಪ್ತಿಗೆ ಬರಬೇಕು ಎಂದು ಒತ್ತಾಯ ಮಾಡಿದೆ.