ಆ್ಯಪ್ ಮೂಲಕ ಪರಿಚಯ, 2020ರಲ್ಲಿ ಮದುವೆ ಒಡವೆ, ನಗದು ಸೇರಿ 12 ಲಕ್ಷ ರೂಪಾಯಿ ವಂಚನೆ ಹಲವರಿಗೆ ಹೀಗೆ ವಂಚನೆ ಮಾಡಿದ್ದ ಮಹಿಳೆ ವಿರುದ್ಧ ದೂರು

ನವದೆಹಲಿ(ಮೇ.28): ಸೋನಮ್ ಕಪೂರ್ ಅಭಿಯನದ ಬಾಲಿವುಡ್ ಚಿತ್ರ ಡೋಲಿ ಕಿ ಡೋಲಿ ಚಿತ್ರದ ರೀತಿಯಲ್ಲೆ ಒಂದು ಘಟನೆ ನಡೆದಿದೆ. ಚಿನ್ನ ಹಾಗೂ ನಗದು ಸೇರಿ ಪತಿಗೆ 12 ಲಕ್ಷ ರೂಪಾಯಿ ವಂಚಿಸಿ ಪತ್ನಿ ಪರಾರಿಯಾಗಿದ್ದಾಳೆ. ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಆದರ್ಶನಗರದಲ್ಲಿ.

ಅಜಯ್ ಕುಮಾರ್ ಈ ಕುರಿತು ಆದರ್ಶನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತನಗೆ ನ್ಯಾಯ ಕೊಡಿಸಬೇಕು ಎಂದು ಪೊಲೀಸರ ಬಳಿ ಕಣ್ಣೀರು ಹಾಕಿದ್ದಾನೆ. ಪತ್ನಿಗಾಗಿ ಬರೋಬ್ಬರಿ 12 ಲಕ್ಷ ರೂಪಾಯಿ ಸಾಲ ಮಾಡಿ ಇದೀಗ ದುಡ್ಡೂ ಇಲ್ಲ, ಇತ್ತ ಚಾಲಕಿ ಪತ್ನಿಯೂ ಇಲ್ಲದಂತಾಗಿದೆ.

ಉತ್ತರಪ್ರದೇಶ: ಶೀಲ‌ ಶಂಕಿಸಿ 66 ವರ್ಷದ ಪತ್ನಿ ಕೊಲೆಗೈದ ಪತಿರಾಯ

ಅಜಯ್ ಕುಮಾರ್ 2020ರಲ್ಲಿ ಈ ಚಾಲಕಿ ಮಹಿಳೆಯನ್ನು ಮದುವೆಯಾಗಿದ್ದ. ಆ್ಯಪ್ ಮೂಲಕ ಪರಿಚಯವಾದ ಈಕೆ ಮದುವೆಯಾಗವಂತೆ ಅಜಯ್ ಕುಮಾರ್ ಒತ್ತಾಯಿಸಿದ್ದಳು. ಇತ್ತ ಆಕೆಯ ಒತ್ತಾಯಕ್ಕೆ ಮಣಿದು 2020ರಲ್ಲಿ ಮದುವೆಯಾಗಿದ್ದು. ಆದರೆ ಈಕೆ ಇದೇ ರೀತಿ ಹಲವರನ್ನು ಮದುವೆಯಾಗಿದ್ದಾಳೆ. ಎಲ್ಲರ ಬಳಿಯೂ ಇದೇ ರೀತಿ ಹಣ ವಂಚಿಸಿ ಪರಾರಿಯಾಗುವುದೇ ಖಯಾಲಿಯಾಗಿದೆ.

ತನಹೆ ದೆಹಲಿಯಲ್ಲಿ ಸಣ್ಣ ಕೋಣೆಯಲ್ಲಿ ಜೀವನ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಉತ್ತಮ ಮನೆ ಇರಬೇಕು. ಮನೆಯಲ್ಲಿ ಎಲ್ಲಾ ಸೌಭ್ಯಗಳು ಇರಬೇಕು ಎಂದು ಅಜಯ್ ಕುಮಾರ್‌ಗೆ ಡಿಮ್ಯಾಂಡ್ ಇಟ್ಟಿದ್ದಾಳೆ. ಇದರಂತೆ ತನ್ನಲ್ಲಿದ್ದ ಎಲ್ಲಾ ಹಣವನ್ನು ಪೀಠೋಪಕರಣ ಸೇರಿದಂತೆ ಇತರ ವಸ್ತುಗಳ ಖರೀದಿ ಮಾಡಿದ್ದಾನೆ. ಆಕೆಗೆ ಚಿನ್ನಾಭರಣಗಳನ್ನು ತೆಗೆದುಕೊಟ್ಟಿದ್ದಾನೆ.

ಹಣ, ಒಡವೆ ಕೈಗೆ ಬರುತ್ತಿದ್ದಂತೆ ಪತ್ನಿ ಪರಾರಿಯಾಗಿದ್ದಾಳೆ. ಇತ್ತ ಕಂಗಾಲಾದ ಪತಿ ದೂರು ನೀಡಿದ್ದಾನೆ. ಬಳಿಕ ಆಕೆಯ ಇತಿಹಾಸ ಕೆದಕುವ ಪ್ರಯತ್ನ ಮಾಡಿದ್ದಾನೆ. ಈ ವೇಳೆ ಹಲವರಿಗೆ ಈ ರೀತಿ ಮದುವೆಯಾಗಿ ವಂಚಿಸಿರುವುದು ಬೆಳಕಿಗೆ ಬಂದಿದೆ.

ಪಾಲಿಕೆ ವಾಹನ, ಕಚೇರಿ ಮೇಲೆ ಕಲ್ಲು ತೂರಾಟ: ಹಳೇ ಹುಬ್ಬಳ್ಳಿ ಗಲಭೆಯಿಂದ ಪ್ರಚೋದನೆ?

ಮದುವೆಯಾಗುವುದಾಗಿ ನಂಬಿಸಿ ವಂಚನೆ
ಮಂಗಳೂರು ನಗರದಲ್ಲಿ ಅಪಾರ್ಚ್‌ಮೆಂಟ್‌ವೊಂದರಲ್ಲಿ ವಾಸ್ತವ್ಯವಿದ್ದ ಮಹಿಳೆಯೊಬ್ಬರ ವಿಶ್ವಾಸಗಳಿಸಿ, ಬಳಿಕ ಅವರನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರಗೈದು 1.5 ಕೋಟಿ ರು. ವಂಚನೆಗೈದಿರುವ ಬಗ್ಗೆ ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತಃ ವಿಟ್ಲ ಬೈರಿಕಟ್ಟೆಯ ನಿವಾಸಿ ಫಯಾಝ್‌ (30) ಬಂಧಿತ ಆರೋಪಿ.

ಮಹಿಳೆಯ ಕುಟುಂಬ 2012ರಲ್ಲಿ ಸುರತ್ಕಲ್‌ನಲ್ಲಿದ್ದು, ಆಗಲೇ ಇವರಿಬ್ಬರಿಗೆ ಪರಿಚಯವಾಗಿತ್ತು. ಈ ಪರಿಚಯ ಆತ್ಮೀಯತೆಗೆ ತಿರುಗಿತು. ಮಹಿಳೆಯ ಗಂಡ ಉದ್ಯಮಿಯಾಗಿದ್ದು, ಆರ್ಥಿಕವಾಗಿ ಸದೃಢರಾಗಿದ್ದರು. ಇದರ ಮೇಲೆ ಕಣ್ಣಿಟ್ಟಆರೋಪಿ ಮಹಿಳೆಯನ್ನು ವಿಶ್ವಾಸದಿಂದ ಬಲೆಗೆ ಬೀಳಿಸಿಕೊಂಡು, ಆಕೆಯ ಜತೆ ಸಲುಗೆಯಿಂದ ವರ್ತಿಸಲು ಆರಂಭಿಸಿದ. ಕಳೆದ 4 ವರ್ಷದ ಹಿಂದೆ ಮಹಿಳೆ ಕುಟುಂಬ ಸುರತ್ಕಲ್‌ನಿಂದ ನಗರದ ಅಪಾಟ್ರ್ಮೆಂಟ್‌ನಲ್ಲಿ ಬಂದು ವಾಸ್ತವ್ಯ ಹೂಡಿದ್ದು, ಇದು ಆರೋಪಿಗೆ ಮತ್ತಷ್ಟುಅನುಕೂಲವಾಯಿತು. ಮಹಿಳೆಯ ಜತೆ ನಂಟು ಬೆಳೆಸಿಕೊಂಡ ಆರೋಪಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ.

ಮದುವೆಗೆ ಪ್ಲ್ಯಾನ್‌: ಮಹಿಳೆಯಿಂದ ಕೋಟ್ಯಂತರ ರು. ಪಡೆದ ಆರೋಪಿ ಫಯಾಜ್‌, ಇತ್ತೀಚೆಗೆ ಬೇರೊಂದು ಯುವತಿಯ ಜತೆ ಮದುವೆಗೆ ಪ್ಲ್ಯಾನ್‌ ಮಾಡಿದ್ದ. ಇದು ಮಹಿಳೆಯ ಗಮನಕ್ಕೆ ಬರುತ್ತಿದ್ದಂತೆ ಕೂಡಲೇ ನಗರ ಪೊಲೀಸ್‌ ಕಮಿಷನರ್‌ಗೆ ದೂರು ನೀಡಿದ್ದು, ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೂಡಲೇ ಕಾರ್ಯಾಚರಣೆ ನಡೆಸಿದ ಮಹಿಳಾ ಠಾಣಾ ಇನ್‌ಸ್ಪೆಕ್ಟರ್‌ ಲೋಕೇಶ್‌ ನೇತೃತ್ವದ ತಂಡ ಮಂಗಳವಾರ ಆರೋಪಿಯನ್ನು ಬಂಧಿಸಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.