ಹರಿತವಾದ ಆಯುಧ ಬಳಸಿ ಪತ್ನಿಯನ್ನು ಕೊಂದಿದ್ದಕ್ಕಾಗಿ 75 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ ತನ್ನ ಪತ್ನಿಯೊಂದಿಗೆ ನಂಬಿಕೆ ಸಮಸ್ಯೆಗಳಿದ್ದು, ಈ ಕಾರಣಕ್ಕೆ ಇಬ್ಬರು ಆಗಾಗ್ಗೆ ಜಗಳವಾಡುತ್ತಿದ್ದರು.
ಉತ್ತರಪ್ರದೇಶ (ಮೇ 27): ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯ ಅಸೋಥರ್ ಪ್ರದೇಶದಲ್ಲಿ ತನ್ನ 66 ವರ್ಷದ ಪತ್ನಿಯನ್ನು ಕೊಂದ 75 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ವ್ಯಕ್ತಿ ತನ್ನ ಪತ್ನಿಯ ಚಾರಿತ್ರ್ಯದ ಬಗ್ಗೆ ಅನುಮಾನಗೊಂಡು ಆಕೆ ಮಲಗಿದ್ದಾಗ ಹರಿತವಾದ ಆಯುಧದಿಂದ ಆಕೆಯನ್ನು ಕೊಂದಿದ್ದಾನೆ. ಕಳೆದ ಕೆಲ ತಿಂಗಳಿಂದ ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಆರೋಪಿಯ ವರಾಂಡಾದಲ್ಲಿ ಗ್ರಾಮಸ್ಥರು ರಕ್ತವನ್ನು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಪರಿಶೀಲಿಸಿದಾಗ ಮಂಚದ ಕೆಳಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂತ್ರಸ್ತೆ ಲಲಿತಾ ದೇವಿ ಶವ ಪತ್ತೆಯಾಗಿದೆ. ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಆರೋಪಿ ಶಿವ ಬರನ್‌ನನ್ನು ಬಂಧಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಪತಿ ತನ್ನ ಅಪರಾಧವನ್ನು (Crime)ಒಪ್ಪಿಕೊಂಡಿದ್ದು, ತನಗೆ ಸ್ವಲ್ಪ ಸಮಯದಿಂದ ದೇವಿ ಬಗ್ಗೆ ಅನುಮಾನವಿತ್ತು, ಹೀಗಾಗಿ ಅವಳು ಹೋದಲ್ಲೆಲ್ಲಾ ಅವಳೊಂದಿಗೆ ಹೋಗುತ್ತಿದ್ದೆ ಎಂದು ಬಹಿರಂಗಪಡಿಸಿದ್ದಾನೆ. ಈ ವಿಷಯದ ಬಗ್ಗೆ ಆಗಾಗ್ಗೆ ಜಗಳಗಳು ಆಗುತ್ತಿದ್ದವು ಮತ್ತು ಗಂಡ-ಹೆಂಡತಿ ಸಂಬಂಧದಲ್ಲಿ ಇದು ಸಾಕಷ್ಟು ಸಂಘರ್ಷವನ್ನು ಉಂಟುಮಾಡಿತ್ತು.
ಇದನ್ನೂ ಓದಿ:ಕುಡಿದ ಮತ್ತಿನಲ್ಲಿ ಪತ್ನಿ, ಅತ್ತೆ ಮೇಲೆ ಮಾರಕಾಸ್ತ್ರಗಳಿಂದ ದಾಳಿ, ಆರೋಪಿ ಅರೆಸ್ಟ್
ಹೆಂಡತಿ ಬಗ್ಗೆ ಇನ್ನೂ ಅನುಮಾನ ಹೊಂದಿದ್ದ ಪತಿ ಬುಧವಾರ ರಾತ್ರಿ ಆಕೆ ವರಾಂಡಾದಲ್ಲಿ ಗಾಢ ನಿದ್ದೆಯಲ್ಲಿದ್ದಾಗ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. “ಶಿವ ಬರನ್ ತನ್ನ ಹೆಂಡತಿಯ ಚಾರಿತ್ರ್ಯದ ಬಗ್ಗೆ ಅನುಮಾನ ಹೊಂದಿದ್ದರಿಂದ ಹರಿತವಾದ ಆಯುಧದಿಂದ ಕೊಂದಿದ್ದಾನೆ. ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದೇವೆ" ಎಂದು ಪೊಲೀಸ್ (Police) ಅಧೀಕ್ಷಕ (ಎಸ್‌ಪಿ), ರಾಜೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
