ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ; ದೇವರಾಜೇಗೌಡ ಆರೋಪ ಸುಳ್ಳಿನ ಕಂತೆ -ಡಿಕೆ ಶಿವಕುಮಾರ
ಬಿಜೆಪಿ ಮುಖಂಡ ದೇವರಾಜೇಗೌಡ ನನ್ನ ವಿರುದ್ಧ ಅಪ್ಪಟ ಸುಳ್ಳಿನ ಹೇಳಿಕೆ ನೀಡಿದ್ದಾರೆ. ನಾನು ಬೆಂಗಳೂರಲ್ಲಿಲ್ಲ ಇದ್ದಿದ್ರೆ ಮಾಧ್ಯಮಗಳ ಮುಂದೆ ಮಾತನಾಡುತ್ತಿದ್ದೆ. ಈಗ ಮಾಡಿರುವ ಆರೋಪ ಎಲ್ಲವೂ ಸುಳ್ಳಿನ ಕಂತೆಯಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು (ಮೇ.6): ಬಿಜೆಪಿ ಮುಖಂಡ ದೇವರಾಜೇಗೌಡ ನನ್ನ ವಿರುದ್ಧ ಅಪ್ಪಟ ಸುಳ್ಳಿನ ಹೇಳಿಕೆ ನೀಡಿದ್ದಾರೆ. ನಾನು ಬೆಂಗಳೂರಲ್ಲಿಲ್ಲ ಇದ್ದಿದ್ರೆ ಮಾಧ್ಯಮಗಳ ಮುಂದೆ ಮಾತನಾಡುತ್ತಿದ್ದೆ. ಈಗ ಮಾಡಿರುವ ಆರೋಪ ಎಲ್ಲವೂ ಸುಳ್ಳಿನ ಕಂತೆಯಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಪ್ರತಿಕ್ರಿಯಿಸಿದ್ದಾರೆ.
ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಪೆನ್‌ಡ್ರೈವ್ ಬಿಡುಗಡೆ ಮಾಡಿದ್ದ ಡಿಕೆ ಶಿವಕುಮಾರ ಎಂಬ ದೇವರಾಜೇಗೌಡ ಮಾಡಿರುವ ಗಂಭೀರ ಆರೋಪಕ್ಕೆ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ ಡಿಸಿಎಂ, ಬಿಜೆಪಿಯ ಅಂತರಿಕ ವಿಚಾರವನ್ನು ನನ್ನ ಬಳಿ ತಿಳಿಸುತ್ತೇನೆ ಎಂದು ದೇವರಾಜೇಗೌಡ ಪ್ರಯತ್ನ ಮಾಡಿದ್ದರು. ಆದರೆ ನನಗೆ ಸಮಯ ಸಿಗಲಿಲ್ಲ. ನನ್ನ ಬಳಿ ದೇವರಾಜೇಗೌಡ ಏನೇನು ಚರ್ಚೆ ಮಾಡಿದ್ದಾರೆಂಬುದನ್ನು ನಾಳೆ ವಿವರವಾಗಿ ತಿಳಿಸುತ್ತೇನೆ ಎಂದಿದ್ದಾರೆ.
ದೇವರಾಜೇಗೌಡ ಬಿಜೆಪಿ ಕಾರ್ಯಕರ್ತ ಮೈತ್ರಿ ನಾಯಕರ ಅಣತಿಯಂತೆ ನನ್ನ ವಿರುದ್ಧ ಸುಳ್ಳು ಅಪಾದನೆ: ಡಿಕೆ ಶಿವಕುಮಾರ
ನನಗೂ ಬಿಜೆಪಿ ಮುಖಂಡ ದೇವರಾಜೇಗೌಡನಿಗೂ ಯಾವುದೇ ಸಂಬಂಧ ಇಲ್ಲ. ನನ್ನ ವಿರುದ್ಧ ಆತ ಮಾತನಾಡಿರೋದು ಸತ್ಯಕ್ಕೆ ದೂರವಾದುದ್ದು. ಬಿಜೆಪಿ ಮತ್ತು ಜೆಡಿಎಸ್‌ನವರು ರಾಜಕೀಯ ಷಡ್ಯಂತ್ರ ಮಾಡುತ್ತಿದ್ದಾರೆ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ . ಹಿಂದೆ ದೇವರಾಜ ಗೌಡ ಏನೇನು ಮಾತನಾಡಿದ್ದ ಎಂದು ನಿಮಗೆಲ್ಲಾ ಅರಿವಿದೆ ಅಂದುಕೊಳ್ತೇನೆ. ಯಾವ್ಯಾವ ವಿಚಾರಗಳನ್ನ ತಿಳಿಸಿದ್ದ ಎಂಬುದು ಎಲ್ಲಾ ಮಾಧ್ಯಮಗಳಿಗೂ ಗೊತ್ತಿದೆ ಎಂದರು
ಬಿಜೆಪಿ ಜೆಡಿಎಸ್ ಅವರು ಪಾಪ ಅವನನ್ನ ಬಳಸಿಕೊಂಡು ಏನೇನು ಬೇಕು ಮಾಡಿಸಿಕೊಳ್ತಾ ಇದ್ದಾರೆ. ಇದು ಹಾಸನ ಜಿಲ್ಲೆಗಷ್ಟೇಕ ಅಲ್ಲ, ಇಡೀ ರಾಜ್ಯಕ್ಕೆ ಗೊತ್ತಿರುವ ವಿಚಾರ. ಈ ಪ್ರಕರಣದಿಂದ ಅವರಿಗೆ ಅವಮಾನ ಆಗಿದೆ. ಹೀಗಾಗಿ ಹಿಟ್ ಅಂಡ್ ರನ್ ಮಾಡ್ತಿದ್ದಾರೆ. ಹೇಗಾದ್ರೂ ಮಾಡಿ ಈ ವಿಚಾರ ಡೈವರ್ಟ್ ಮಾಡಬೇಕು, ಮಡ್ತಾವ್ರೆ. ಅವನು ಮಾಡಲಿ ಅವನಿಗೆ ಹೇಳಿ ಕಳಿಸುತ್ತಿದ್ದವನೂ ಮಾಡಲಿ. ಅವನು ಹೇಳಿದ ಕೂಡಲೇ ಟಿವಿ ಚಾನಲ್ ಅವರಿಗೆ ಯಾರು ಕಾಲ್ ಮಾಡಿ ಮಾತನಾಡಿದ್ದಾರೆ ಅನ್ನೋದು ಎಲ್ಲವೂ ನನಗೆ ಗೊತ್ತಿದೆ. ಈ ಬ್ಲಾಕ್ ಮೇಲ್‌ಗೆಲ್ಲ ನಾವು ತಲೆಕೆಡಿಸಿಕೊಳ್ಳಲ್ಲ. ಅಮಿತ್ ಷಾ, ಕುಮಾರಸ್ವಾಮಿಕ ಒಪ್ಪಿಕೊಂಡ ಮೇಲೆ ಯಾಕೆ ಹರ್ಕೋತಾರೆ ಇವರೆಲ್ಲ? ಎಂದು ಕಿಡಿಕಾರಿದರು.
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ರಾಜ್ಯ ಸರ್ಕಾರ ಸೂಜಿ ಮೊನೆಯಷ್ಟೂ ಮಧ್ಯೆಪ್ರವೇಶ ಮಾಡೊಲ್ಲ: ಸಿಎಂ
ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ, ಹಿನ್ನಲೆ ಗಾಯಕರು ಯಾರಿದ್ದಾರೆ ಮ್ಯೂಜಿಕ್ ಯಾರು ಮಾಡ್ತಾರೆ ಅನ್ನೋದು ಗೊತ್ತಿದೆ. ಕುಮಾರಸ್ವಾಮಿ ಹೇಳಿದ್ರು ನಮಗೂ ಅವರಿಗೂ ಸಂಬಂಧ ಇಲ್ಲ ಅಂತಾ, ಮತ್ಯಾಕೆ ಇದೆಲ್ಲ? ಯಾರು ಮಾಡಿಸುತ್ತಿದ್ದಾರೋ ಅವರು ದೈರ್ಯ ಇದ್ದರೆ ಹೊರಗಡೆ ಬಂದು ಹೇಳಲಿ. ನನ್ನ ಮತ್ತು ಸಿಎಂ ಹೆಸರು ಹೇಳಿದ್ರೆ ಮಾತ್ರ ನೀವು ಸುದ್ದಿ ಮಾಡೋದು ಹಾಗಾಗಿ ಅವರು ನಮ್ಮ ಹೆಸರು ಹೇಳ್ತಾರೆ ಹೇಳಲಿಬಿಡಿ. ಸತ್ಯ ಏನೆಂಬುದು ತನಿಖೆ ಬಳಿಕ ಹೊರಗೆ ಬರುತ್ತೆ ಎಂದಿದ್ದಾರೆ.