ಕಾನ್ಸರ್ಟ್‌ವೊಂದರಲ್ಲಿ ತಾವು ನೃತ್ಯ ಮಾಡುತ್ತಿರುವಂತೆ ರಚಿಸಲಾದ ಎಐ ವಿಡಿಯೋ ಕುರಿತಾಗಿ ಪ್ರಧಾನಿ ಮೋದಿ ಖುಷಿಯಿಂದಲೇ ರಿಟ್ವೀಟ್‌ ಮಾಡಿ ಸಂಭ್ರಮಿಸಿದ್ದಾರೆ. ಮಮತಾ ಬ್ಯಾನರ್ಜಿ ಕುರಿತಾಗಿ ಇದೇ ರಿತಿಯ ವಿಡಿಯೋ ಮಾಡಿದ್ದಕ್ಕಾಗಿ ಕೋಲ್ಕತ್ತಾ ಪೊಲೀಸ್‌, ಸೋಶಿಯಲ್‌ ಮೀಡಿಯಾ ಹ್ಯಾಂಡ್ಲರ್‌ ವಿರುದ್ಧ ಕೇಸ್‌ ದಾಖಲು ಮಾಡಿದೆ. 

ನವದೆಹಲಿ (ಮೇ.6): ಕಾನ್ಸರ್ಟ್‌ವೊಂದರಲ್ಲಿ ತಾವು ಡಾನ್ಸ್‌ ಮಾಡುವಂತೆ ಚಿತ್ರಿಸಿದ ಎಐ ವಿಡಿಯೋವನ್ನು ಹಂಚಿಕೊಂಡ ವ್ಯಕ್ತಿಗೆ ಪ್ರಧಾನಿ ನರೇಂದ್ರ ಮೋದಿ ಖುಷಿಯಿಂದಲೇ ಪ್ರತಿಕ್ರಿಯೆ ನೀಡಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ತಮಾಷೆಯ ಎಡಿಟಿಂಗ್‌ ಕಾರಣಕ್ಕಾಗಿಯೇ ಸುದ್ದಿಯಲ್ಲಿರುವ ಕೃಷ್ಣ (Atheist_Krishna) ಅವರ ಪೋಸ್ಟ್‌ಗೆ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋ ಈಗ ವೈರಲ್‌ ಮೀಮ್‌ ಟೆಂಪ್ಲಟ್‌ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ ಕೇಸರಿ ಬಣ್ಣದ ಜಾಕೆಟ್‌ ಧರಿಸಿ ಡಾನ್ಸ್‌ ಮಾಡುತ್ತಲೇ ವೇದಿಕೆ ಏರುವ ವಿಷಯ ಹೊಂದಿದೆ. ಅಮೆರಿಕದ ಪ್ರಖ್ಯಾತ ರಾಪರ್‌ ಲಿಲ್ ಯಾಚಿ ಅವರು ಸ್ಟೇಜ್‌ಗೆ ಬರುವ ರೀತಿ ಇದಾಗಿದ್ದು, ಅದನ್ನೇ ಎಐ ಬಳಸಿ ಮೀಮ್‌ ಟ್ಯಾಂಪ್ಲೆಟ್‌ ಮಾಡಲಾಗಿದೆ. ಸೋಮವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕುರಿತಾಗಿಯೂ ಇದೇ ರಿತಿಯ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಲಾಗಿತ್ತು. ಆದರೆ, ಕೋಲ್ಕತ್ತಾ ಪೊಲೀಸ್‌ ಈ ಪೋಸ್ಟ್‌ ಮಾಡಿದ ಎಕ್ಸ್‌ ಹ್ಯಾಂಡಲ್‌ಗೆ ನೋಟಿಸ್‌ ಜಾರಿ ಮಾಡಿ ಅವರ ವಿರುದ್ಧ ಕೇಸ್‌ ದಾಖಲು ಮಾಡಿತ್ತು. ಇದನ್ನು ಸೋಶಿಯಲ್‌ ಮೀಡಿಯಾ ಯೂಸರ್‌ಗಳು ಇದು ಡಿಕ್ಟೇಟರ್‌ಷಿಪ್‌ ಅಂದರೆ ಸರ್ವಾಧಿಕಾರದ ಲಕ್ಷಣ ಎಂದು ಟೀಕಿಸಿದ್ದರು.

'ನಾನು ಈ ವಿಡಿಯೋ ಪೋಸ್ಟ್‌ ಮಾಡುತ್ತಿದ್ದೇನೆ. ನನಗೆ ಗೊತ್ತು ನಮ್ಮ ಡಿಕ್ಟೇಟರ್‌ ಇದ್ದಕ್ಕಾಗಿ ನನ್ನನ್ನು ಯಾವುದೇ ಕಾರಣಕ್ಕೂ ಬಂಧಿಸೋಧಿಲ್ಲ ಅಂತಾ..' ಎಂದು ಕೃಷ್ಣ ಅವರು ಮೋದಿ ಅವರ ಮೀಮ್‌ ವಿಡಿಯೋ ಹಂಚಿಕೊಂಡಿದ್ದಾರೆ. ಇದಕ್ಕೆ ಮೋದಿ ಪ್ರತಿಕ್ರಿಯೆ ನೀಡಿದ್ದು, ನಿಮ್ಮೆಲ್ಲರಂತೆ ನಾನೂ ಕೂಡ 'ನಾನು ಡಾನ್ಸ್‌ ಮಾಡುತ್ತಿರೋದನ್ನ ನೋಡಿ ಎಂಜಾಯ್‌ ಮಾಡುತ್ತಿದ್ದೇನೆ'. ಅತ್ಯಂತ ಪೀಕ್ಅಲ್ಲಿರುವ ಚುನಾವಣಾ ಸಮಯದಲ್ಲಿ ಇಂಥ ಕ್ರಿಯೇಟಿವಿಟಿ ನೋಡೋದನ್ನು ನೋಡೋಕೆ ಖುಷಿಯಾಗುತ್ತಿದೆ' ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪೂಲ್‌ ಹ್ಯೂಮರ್‌ (PollHumour) ಎನ್ನುವ ಹ್ಯಾಶ್‌ಟ್ಯಾಗ್‌ಅನ್ನೂ ಸೇರಿಸಿದ್ದಾರೆ.

ಮಮತಾ ಬ್ಯಾನರ್ಜಿ ಕುರಿತು ಮೀಮ್‌ ಹಂಚಿಕೊಂಡಿದ್ದಕ್ಕೆ ಎಕ್ಸ್‌ ಯೂಸರ್‌ಗೆ ಪೊಲೀಸರ ಎಚ್ಚರಿಕೆ!

ಲೋಕಸಭಾ ಚುನಾವಣೆಯ ಸಮಯದಲ್ಲಿ ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳ ಡೀಪ್‌ಫೇಕ್‌ ಮತ್ತು ನಕಲಿ ವೀಡಿಯೊಗಳ ಬಗ್ಗೆ ವಿವಾದದ ಮಧ್ಯೆ ಮೋದಿಯವರ ಪ್ರತಿಕ್ರಿಯೆ ಬಂದಿದೆ. ಇತ್ತೀಚೆಗೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ನಟರಾದ ಅಮೀರ್ ಖಾನ್ ಮತ್ತು ರಣವೀರ್ ಸಿಂಗ್ ಅವರ ಬಗ್ಗೆ ಸೋಶಿಯಲ್‌ ಮೀಡಿಯಾ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ ಡೀಪ್‌ಫೇಕ್ ವೀಡಿಯೊಗಳನ್ನು ತೆಗೆದುಹಾಕಲಾಗಿದೆ ಮತ್ತು ಕ್ರಿಮಿನಲ್ ದೂರುಗಳನ್ನು ದಾಖಲಿಸಲಾಗಿದೆ.

ಪ್ರಜ್ವಲ್‌ ರೇವಣ್ಣ ಕುರಿತಾಗಿ ಮೊದಲ ಬಾರಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ

ಸೋಮವಾರ, ಚುನಾವಣಾ ಆಯೋಗವು ರಾಜಕೀಯ ಪಕ್ಷಗಳ ಗಮನಕ್ಕೆ ಬಂದ ಮೂರು ಗಂಟೆಗಳ ಒಳಗೆ ತಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಂದ ನಕಲಿ ವಿಷಯವನ್ನು ತೆಗೆದುಹಾಕಲು ಸೂಚಿಸಿದೆ. ಸಾಮಾಜಿಕ ಮಾಧ್ಯಮದ ಜವಾಬ್ದಾರಿಯುತ ಮತ್ತು ನೈತಿಕ ಬಳಕೆಯ ನಿರ್ದೇಶನಗಳಲ್ಲಿ, ಡೀಪ್‌ಫೇಕ್‌ಗಳನ್ನು ರಚಿಸಲು AI ಪರಿಕರಗಳ ದುರುಪಯೋಗದ ವಿರುದ್ಧ ಆಯೋಗವು ಎಚ್ಚರಿಕೆ ನೀಡಿದೆ, ಚುನಾವಣಾ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯನ್ನು ತಿಳಿಸಿದೆ.

Scroll to load tweet…