Asianet Suvarna News Asianet Suvarna News

ಒಂದೇ ಕಾಲೇಜಿನ ಇಬ್ಬರು ಉಪನ್ಯಾಸಕರು ಆತ್ಮಹತ್ಯೆ

ಮಾಹಾಮಾರಿ ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಲಾಕ್‌ಡೌನ್ ಮಾಡಲಾಗಿತ್ತು. ಈ ಲಾಕ್‌ಡೌನ್‌ನಿಂದ ಜನರಿಗೆ ಒಂದಲ್ಲ ಒಂದು ತೊಂದರೆಯಾಗಿದೆ. ಮತ್ತೊಂದೆಡೆ ಈ ಲಾಕ್‌ಡೌನ್‌ನಿಂದಾಗಿಯೇ ಇಬ್ಬರ ಉಪನ್ಯಾಸಕರು ಪ್ರಾಣ ಕಳೆದುಕೊಳ್ಳಬೇಕಾಗಿದೆ.  

malavalli college Two guest lecturers Commits suicide in mandya
Author
Benalmádena, First Published Jun 12, 2020, 6:26 PM IST

ಮಂಡ್ಯ, (ಜೂನ್.12):  ಒಂದೇ ಕಾಲೇಜಿನ ಇಬ್ಬರು ಅತಿಥಿ ಉಪನ್ಯಾಸಕರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಲಾಕ್‌ಡೌನ್‌ ಅವಧಿಯ ಮಾನಸಿಕ ಖಿನ್ನತೆಯೇ ಕಾರಣ ಎಂದು ತಿಳಿದುಬಂದಿದೆ.

ಮಳವಳ್ಳಿ ಸರ್ಕಾರಿ ಪದವಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಅತಿಥಿ ಉಪನ್ಯಾಸಕಿಯಾಗಿದ್ದ ಕೋಕಿಲಾ (35) ಮೇ 11ರಂದು ನೇಣಿಗೆ ಶರಣಾಗಿದ್ದರೆ, ಇತಿಹಾಸ ಉಪನ್ಯಾಸಕ ಸುರೇಶ್‌ (29) ಜೂನ್‌ 4ರಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಟಿ ಚಂದನಾ ಆತ್ಮಹತ್ಯೆ: ಮದ್ವೆಯಾಗುವುದಾಗಿ ಹೇಳಿ ತೀಟೆ ತೀರಿಸಿಕೊಂಡಿದ್ದ ಪ್ರಿಯಕರ ಅರೆಸ್ಟ್

'ಸಾಕಷ್ಟು ಅರ್ಹತೆ ಇದ್ದರೂ ಸರ್ಕಾರಿ ಉದ್ಯೋಗ ಸಿಕ್ಕಿಲ್ಲ ಎಂಬ ನೋವು ಅವರನ್ನು ಕಾಡುತಿತ್ತು. ಸರ್ಕಾರವು ವೇತನ ಬಿಡುಗಡೆ ಮಾಡದ ಕಾರಣ ಅವರು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದರು. ಇದರಿಂದ ಅವರು ಆತ್ಮಹತ್ಯೆ ಮಾಡಿದ್ದಾರೆ ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ.

ಸದಾ ಸರ್ಕಾರಿ ಕೆಲಸದ ಗುಂಗಿನಲ್ಲಿ ಇರುತ್ತಿದ್ದ ಸುರೇಶ್‌, ಮೊದಲಿನಿಂದಲೂ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಈ ಬಗ್ಗೆ ಕಾಲೇಜಿನ ಪ್ರಾಚಾರ್ಯ ಕೆ.ಟಿ.ವೆಂಕಟೇಶ್‌, ಇಬ್ಬರೂ ಮೂರು ವರ್ಷಗಳಿಂದ ನಮ್ಮ ಕಾಲೇಜಿನ ಭಾಗವೇ ಆಗಿದ್ದರು. ಲಾಕ್‌ಡೌನ್‌ ಅವಧಿಯಲ್ಲಿ ಆನ್‌ಲೈನ್‌ ಪಾಠ ಮಾಡುತ್ತಿದ್ದರು ಎಂದಿದ್ದಾರೆ.

ಇನ್ನು ಖಿನ್ನತೆಯಿಂದ ಕೋಕಿಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಅಕ್ಕ ಭಾರತೀನಗರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಸುರೇಶ್‌ ಅಸಹಜ ಸಾವಿನ ಕುರಿತ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios