ಆರೋಪಿ ಧೂರ್ಪದಾಬಾಯಿ ಗಣಪತ್ ನಿಮಲ್ವಾಡ್ ಮತ್ತು ಆಕೆಯ ತಾಯಿ ಮತ್ತು ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ
ಮುಂಬೈ (ಜೂ. 03): ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಹಳ್ಳಿಯೊಂದರ ಹೊಲವೊಂದರಲ್ಲಿ 30 ವರ್ಷದ ಮಹಿಳೆ ತನ್ನ ಮಗಳು ಮತ್ತು ಎರಡು ವರ್ಷದ ಮಗನನ್ನು ನಿರಂತರವಾಗಿ ಅಳುತ್ತಿದ್ದಕ್ಕಾಗಿ ಕೊಂದು ನಂತರ ಅವರ ದೇಹವನ್ನು ಸುಟ್ಟು ಹಾಕಿದ್ದಾಳೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಆರೋಪಿ ಮಹಿಳೆ ಧುರ್ಪಾದಾಬಾಯಿ ಗಣಪತ್ ನಿಮಲ್ವಾಡ್‌ರನ್ನು ಮತ್ತು ಮಕ್ಕಳ ಶವಗಳನ್ನು ವಿಲೇವಾರಿ ಮಾಡಲು ಸಹಾಯ ಮಾಡಿದ ಆಕೆಯ ತಾಯಿ ಮತ್ತು ಸಹೋದರನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಜಿಲ್ಲೆಯ ಭೋಕರ್ ತಾಲೂಕಿನ ಪಾಂಡುರ್ನಾ ಗ್ರಾಮದಲ್ಲಿ ಸತತ ಎರಡು ದಿನ - ಮೇ 31 ಮತ್ತು ಜೂನ್ 1 ರಂದು ಹತ್ಯೆಗಳು ನಡೆದಿವೆ ಎಂದು ಎಂದು ಭೋಕರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಮೇ 31 ರಂದು ಧುರ್ಪಾದಾಬಾಯಿ ತನ್ನ ನಾಲ್ಕು ತಿಂಗಳ ಮಗಳು ಅನುಸೂಯಾಳ ನಿರಂತರ ಅಳುವಿನಿಂದ ಬೇಸತ್ತು ಕತ್ತು ಹಿಸುಕಿದ್ದಾಳೆ ಎಂದು ಆರೋಪಿಸಲಾಗಿದೆ. ಮರುದಿನ, ಆಹಾರ ಕೇಳಲು ಅಳುತ್ತಿದ್ದತನ್ನ ಮಗ ದತ್ತನನ್ನು ಅದೇ ರೀತಿಯಲ್ಲಿ ಕೊಂದಳು," ಎಂದು ಅಧಿಕಾರಿ ಹೇಳಿದ್ದಾರೆ.
ಆರೋಪಿ ಮಹಿಳೆ ಬುಧವಾರ ಮುಖೇಡ್ ತಾಲೂಕಿನ ನಿವಾಸಿಗಳಾದ ತನ್ನ ತಾಯಿ ಕೊಂಡಬಾಯಿ ರಾಜೇಮೋದ್ ಮತ್ತು ಸಹೋದರ ಮಾಧವ್ ರಾಜೇಮೋದ್ ಅವರ ಸಹಾಯದಿಂದ ಹೊಲದಲ್ಲಿ ಅವರ ದೇಹವನ್ನು ಚಿತೆಗೆ ಸುಟ್ಟು ಹಾಕಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೂವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ:Bengaluru; ಬಿಲ್ ಕೇಳಿದಕ್ಕೆ ಆಸ್ಪತ್ರೆ ಉಡಾಯಿಸುವುದಾಗಿ ಬೆದರಿಕೆ!
