ಮೊಬೈಲ್ ಕೊಡಿಸಿಲ್ಲ ಎಂಬ ಕಾರಣಕ್ಕಾಗಿ ಹೆತ್ತ ತಾಯಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೊಲೆಗಾರ ಮಗನನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಜೂ.3): ಮೊಬೈಲ್ (mobile) ಕೊಡಿಸಿಲ್ಲ ಎಂಬ ಕಾರಣಕ್ಕಾಗಿ ಹೆತ್ತ ತಾಯಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಆರೋಪದಡಿ ಮಗನನ್ನು ಬೇಗೂರು ಪೊಲೀಸರು (Beguru Police) ಬಂಧಿಸಿದ್ದಾರೆ. ಬೇಗೂರಿನ ಮೈಲಸಂದ್ರ ಗ್ರಾಮದ ಫಾತಿಮಾ ಮೇರಿ ಕೊಲೆಯಾಗಿದ್ದು ಕೃತ್ಯವೆಸಗಿದ ಆರೋಪದಡಿ ಮಗ ದೀಪಕ್ ನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಕೊಲೆಯಾದ ಫಾತಿಮಾ ಮೇರಿ- ಗಂಡ ಆರೋಗ್ಯ ಸ್ವಾಮಿ ದಂಪತಿಗೆ ಓರ್ವ ಹೆಣ್ಣು, ಓರ್ವ ಗಂಡು ಮಕ್ಳಳಿದ್ದಾರೆ. ಈ ಪೈಕಿ ಮೊದಲನೆಯವಾದ 24 ವರ್ಷದ ದೀಪಕ್ 8 ನೇ ತರಗತಿವರೆಗೂ ವ್ಯಾಸಂಗ ಮಾಡಿದ್ದ. ತಂದೆ-ತಾಯಿ ಜೊತೆಗೆ ಸೊಪ್ಪಿನ ವ್ಯಾಪಾರ ಮಾಡಿಕೊಂಡಿದ್ದ. ಈ ವ್ಯಾಪಾರವೇ ಕುಟುಂಬಕ್ಕೆ ಆಧಾರವಾಗಿತ್ತು.
Ballari; ಆಪ್ತಾಪ್ತೆಯನ್ನು ಪ್ರೀತಿಸಿದ ಯುವಕನ ದುರಂತ ಅಂತ್ಯ!
ಕೆಲದಿನಗಳ ಹಿಂದೆ ದೀಪಕ್, ತಾಯಿಗೆ ಹೊಸ ಮೊಬೈಲ್ ಕೊಡಿಸುವಂತೆ ದುಂಬಾಲು ಬಿದ್ದಿದ್ದ. ತಮ್ಮ ಬಳಿ ಹಣವಿಲ್ಲ ಮುಂದೊಂದು ದಿನ ಕೊಡಿಸುವೆ ಎಂದ ಫಾತಿಮಾ ಆಶ್ವಾಸನೆ ನೀಡಿದ್ದರು. ಇದರಿಂದ ಸಮಾಧಾನಗೊಳ್ಳದ ದೀಪಕ್ ದಿನೇ ದಿನೇ ಮೊಬೈಲ್ ಕೊಡಿಸುವಂತೆ ಒತ್ತಡ ಹಾಕುತ್ತಿದ್ದ. ಹೊಸ ಮೊಬೈಲ್ ಕೊಡಿಸುವಷ್ಟು ತಮ್ಮ ಬಳಿ ಹಣವಿಲ್ಲ ಎಂದು ಪುನರುಚ್ಚಿಸಿದರೂ ಮಾತು ಕೇಳದ ಮಗ ನಿನ್ನೆ ಮನೆ ಬಳಿ ಸೊಪ್ಪು ಕುಯ್ಯುವಾಗ ಸೀರೆಯಿಂದ ಆಕೆಯ ಕತ್ತು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಬಳಿಕ ಆಕೆ ಬಳಿಯಿದ್ದ 700 ಹಣವನ್ನು ಕಸಿದುಕೊಂಡು ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ದೀಪಕ್ ನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
Hijab Row; ಎರಡು ದಿನ ಗಡುವು, ಸಮನ್ವಯ ಸಮಿತಿ ಹೆಸರಲ್ಲಿ ಫೀಲ್ಡಿಗಿಳಿತಾ ಸಿಎಫ್ ಐ?
ಜೈಲಿಂದ ರಿಲೀಸ್ ಆಗಿ ಮತ್ತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ: ಜೈಲಿಗೆ ಹೋಗಿಬಂದರೂ ಪದೇ ಪದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದ ಕುಖ್ಯಾತ ರೌಡಿಶೀಟರ್ ನನ್ನು ಬಾಗಲಗುಂಟೆ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಿದ್ದಾರೆ.
ಸೋಲದೇವನಹಳ್ಳಿ ಹಾಗೂ ಬಾಗಲಗುಂಟೆ ಪೊಲೀಸ್ ಠಾಣೆಗಳ ರೌಡಿಶೀಟರ್ ಆಗಿರುವ ಚೇತನ್ ಕುಮಾರ್ ಆಲಿಯಾಸ್ ಚಿಕ್ಕ ಚೇತು ವಿರುದ್ಧ ಗೂಂಡಾ ಕಾಯ್ದೆಯಡಿ ಜೈಲಿಗಟ್ಟಿದ್ದಾರೆ. ಅನ್ನಪೂರ್ಣೆಶ್ವರಿ ನಗರ, ಮಾದನಾಯಕಹಳ್ಳಿ, ಸೋಲದೇವನಹಳ್ಳಿ ಹಾಗೂ ಚಂದ್ರಾಲೇಔಟ್ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಕೊಲೆ ಕೊಲೆಯತ್ನ, ಸುಲಿಗೆ ಹಾಗೂ ದರೋಡೆ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ.
2012ರಿಂದ 2022ರವರೆಗೆ 10ಕ್ಕೂ ಹೆಚ್ಚು ಕೇಸ್ ದಾಖಲಾಗಿದೆ. ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿಬಂದು ಮತ್ತೆ ಕ್ರೈಂ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ. ಹಲವು ಬಾರಿ ನ್ಯಾಯಾಲಯ ವಿಚಾರಣೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದರೂ ಕೋರ್ಟ್ ಗೆ ಗೈರು ಹಾಜರಾಗಿದ್ದ. ರೌಡಿ ಆ್ಯಕ್ಟಿವಿಟಿಯಲ್ಲಿ ಸಕ್ರಿಯನಾಗಿದ್ದ ಚೇತು ಇತ್ತೀಚೆಗೆ ಸೋಲದೇವನಹಳ್ಳಿ ಪೊಲೀಸರು ಕೊಲೆಯತ್ನ ಪ್ರಕರಣ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
IIT Delhiಯ ಕೈಲಾಶ್ ಗುಪ್ತಾಗೆ ವಿಶ್ವದ ಅತ್ಯುತ್ತಮ ಕೋಡರ್ ಪ್ರಶಸ್ತಿ
ಸ್ಪೈಡರ್‌ಮ್ಯಾನ್ ಸ್ಟೈಲಲ್ಲಿ ಕಳ್ಳತನ: ದೃಶ್ಯ ಸಿಸಿಟಿವಿಯಲ್ಲಿ ಸೆರೆಸ್ಪೈಡರ್ ಮ್ಯಾನ್ (Spider man) ಗೋಡೆ ಏರಿ ಕಟ್ಟಡದಿಂದ ಕಟ್ಟಡಕ್ಕೆ ಹಾರಿ ಸಾಹಸ ಮಾಡುವ ಸ್ಪೈಡರ್ ಮ್ಯಾನ್ ಸಿನಿಮಾವನ್ನು ನೀವು ನೋಡಿರಬಹುದು. ಅದೇ ಸಿನಿಮಾ ಶೈಲಿಯಲ್ಲಿ ಕಳ್ಳನೋರ್ವ ಕಳ್ಳತನಕ್ಕೆ ಇಳಿದಿದ್ದು, ಅದರ ದೃಶ್ಯಗಳು ಸ್ಥಳೀಯ ಸಿಸಿಟಿವಿಯಲ್ಲಿ (cctv) ಸೆರೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಘಟನೆ ಇದಾಗಿದೆ. ದೆಹಲಿಯ (delhi) ಈಶಾನ್ಯ ಭಾಗದ ಜಿಲ್ಲೆಯ ಭದ್ರತಾ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಸ್ಪೈಡರ್ ಮ್ಯಾನ್ ಸ್ಟೈಲ್ ಅಲ್ಲಿ ಮನೆ ದರೋಡೆಗೆ ಇಳಿದ ಖದೀಮ (thieves) ಮನೆಯಿಂದ ಅತ್ಯಮೂಲ್ಯ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾನೆ.
ಮೇ 31 ಹಾಗೂ ಜೂನ್ 1 ಸಿಸಿಟಿವಿ ದೃಶ್ಯಾವಳಿಯಲ್ಲಿ ಕಳ್ಳನೋರ್ವ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಏರುತ್ತಾನೆ. ನಂತರ ಇಲೆಕ್ಟ್ರಿಸಿಟಿ ವೈರ್‌ನ್ನು (Electricity wire) ಹಿಡಿದು ನೇತಾಡುವ ಈತ ಅದರಲ್ಲಿ ನೇತಾಡುತ್ತಲೇ ಮನೆಯೊಂದರ ಮಹಡಿ ಮೇಲೆ ಬಂದು ತಲುಪುತ್ತಾನೆ. ಇನ್ನು ಕಳ್ಳ ತನ್ನ ಕೃತ್ಯವೆಸಗುವ ವೇಳೆ ಮನೆಯಲ್ಲಿ ಏಳರಿಂದ ಎಂಟು ಜನ ಇದ್ದರೆಂದು ವರದಿಯಾಗಿದೆ.
