ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಒಂದೇ ಕುಟುಂಬದ 9 ಜನರು ತಮ್ಮ ಮನೆಯಲ್ಲೇ ಮೃತಪಟ್ಟ ಘಟನೆಯು ಸೋಮವಾರ ವರದಿಯಾಗಿದ್ದು, ಕುಟುಂಬದವರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಸಾಂಗ್ಲಿ (ಜೂ.21): ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಒಂದೇ ಕುಟುಂಬದ 9 ಜನರು ತಮ್ಮ ಮನೆಯಲ್ಲೇ ಮೃತಪಟ್ಟ ಘಟನೆಯು ಸೋಮವಾರ ವರದಿಯಾಗಿದ್ದು, ಕುಟುಂಬದವರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರಲ್ಲಿ ಪೋಪಟ್ ವಣ್ಮೋರೆ ಹಾಗೂ ಡಾ ಮಾಣಿಕ್ ವಣ್ಮೋರೆ ಎಂಬ ಅಣ್ಣ ತಮ್ಮಂದಿರಿಬ್ಬರು ಸೇರಿದ್ದು, ಇವರು ಭಾರಿ ಪ್ರಮಾಣದ ಸಾಲ ಮಾಡಿಕೊಂಡಿದ್ದರು. ಇದೇ ಆತ್ಮಹತ್ಯೆಗೆ ಕಾರಣ ಇರಬಹುದು’ ಎಂದು ಶಂಕಿಸಲಾಗಿದೆ.
ಸಾಂಗ್ಲಿ ಜಿಲ್ಲೆಯ ಮ್ಹೈಸಲ್‌ನ ಮನೆಯೊಂದರಲ್ಲಿ 9 ಮೃತ ದೇಹಗಳು ಪತ್ತೆಯಾಗಿವೆ. ಮೃತಪಟ್ಟವರಲ್ಲಿ 5 ಮಹಿಳೆಯರು, 4 ಪುರುಷರು ಸೇರಿದ್ದಾರೆ. 3 ಮೃತ ದೇಹಗಳು ಒಂದೆಡೆ ಹಾಗೂ 6 ಮೃತ ದೇಹಗಳು ಮನೆಯ ಇನ್ನೊಂದು ಭಾಗದಲ್ಲಿ ಪತ್ತೆಯಾಗಿವೆ. 2018ರಲ್ಲಿ ಬುರಾರಿಯಲ್ಲಿ ಕುಟುಂಬದ 11 ಸದಸ್ಯರು ಸಾಮೂಹಿಕ ಆತ್ಮಹತ್ಯೆಗೆ ಶರಣಾದ ಭೀಕರ ಘಟನೆಯನ್ನು ಇದು ನೆನಪಿಸುವಂತಿದೆ. ‘ಕುಟುಂಬದವರು ಸಾಮೂಹಿಕವಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವಂತೆ ಕಂಡು ಬರುತ್ತದೆ. ಮರಣೋತ್ತರ ಪರೀಕ್ಷೆಯ ಬಳಿಕ ಸಾವಿನ ನೈಜ ಕಾರಣವು ತಿಳಿಯಲಿದೆ’ ಎಂದು ಪೊಲೀಸರು ಹೇಳಿದ್ದಾರೆ.
ನೀರಿಲ್ಲದ ಬಾವಿಗೆ ಹಾರಿದ ಮಹಿಳೆಯ ರಕ್ಷಿಸಿದ ಪೊಲೀಸರು
ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ: ಆನ್‌ಲೈನ್ ಟ್ರೇಡಿಂಗ್ ಬ್ಯುಸಿನೆಸ್‌ನಲ್ಲಿ .2 ಕೋಟಿ ನಷ್ಟವಾಗಿದ್ದಕ್ಕೆ ಬೇಸರಗೊಂಡು ಲಾಡ್ಜ್‌ನಲ್ಲಿ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸದ್ದುಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾಕ್ಸ್‌ಟೌನ್ ನಿವಾಸಿ ಅರ್ಜುನ್ (33) ಮೃತ ದುರ್ದೈವಿ. ಬಿಟಿಎಂ ಲೇಔಟ್‌ನ ಹೊರ ವರ್ತುಲ ರಸ್ತೆಯ ಓಯೋ ಲಾಡ್ಜ್‌ನಲ್ಲಿ ವಿಷ ಸೇವಿಸಿ ಗುರುವಾರ ಮಧ್ಯಾಹ್ನ ಅರ್ಜುನ್ ಆತ್ಮಹತ್ಯೆ ಮಾಡಿಕೊಂಡಿದ್ದು, ರಾತ್ರಿ ಮೃತನ ಕೊಠಡಿಗೆ ಲಾಡ್ಜ್ ಸಿಬ್ಬಂದಿ ತೆರಳಿದ್ದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೃತ ಅರ್ಜುನ್, ತನ್ನ ಪೋಷಕರ ಜತೆ ಕಾಕ್ಸ್‌ಟೌನ್‌ನಲ್ಲಿ ನೆಲೆಸಿದ್ದ. 2014ರಿಂದ ಆನ್‌ಲೈನ್‌ನಲ್ಲಿ ಟ್ರೇಡಿಂಗ್ ಬ್ಯುಸಿನೆಸ್‌ನಲ್ಲಿ ತೊಡಗಿದ್ದ ಆತ, ಲಕ್ಷಾಂತರ ರುಪಾಯಿಯನ್ನು ಹೂಡಿಕೆ ಮಾಡಿದ್ದ. ಆದರೆ ಇತ್ತೀಚೆಗೆ ಷೇರು ಮಾರುಕಟ್ಟೆಯಲ್ಲೇ ಏರಿಳಿತದಿಂದ ಅರ್ಜುನ್‌ಗೆ ಸುಮಾರು .2 ಕೋಟಿ ನಷ್ಟವಾಗಿತ್ತು. ಈ ಹಣಕಾಸು ಸಮಸ್ಯೆಯಿಂದ ಬೇಸರಗೊಂಡ ಅರ್ಜುನ್, ಬುಧವಾರ ಮಧ್ಯಾಹ್ನ ಬಿಟಿಎಂ ಲೇಔಟ್‌ನ ರಿಂಗ್ ರೋಡ್‌ನಲ್ಲಿ ಓಯೋ ಲಾಡ್ಜ್‌ಗೆ ಬಂದು ಕೊಠಡಿ ಪಡೆದಿದ್ದಾನೆ.
ಬೆಂಗಳೂರಿನಲ್ಲಿ ಪಿಎಸ್ಐ ಆತ್ಮಹತ್ಯೆ, ಕಾರಣ ನಿಗೂಢ
ಮರುದಿನ ಮಧ್ಯಾಹ್ನ ಕೊಠಡಿಯಲ್ಲಿ ವಿಷ ಸೇವಿಸಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದು, ರಾತ್ರಿ 9 ಗಂಟೆಯಾದರೂ ಕೊಠಡಿಯಿಂದ ಅರ್ಜುನ್ ಹೊರಗೆ ಬಾರದೆ ಹೋದಾಗ ಲಾಡ್ಜ್ ಕೆಲಸಗಾರರಿಗೆ ಅನುಮಾನ ಮೂಡಿದೆ. ಆಗ ಕಿಟಕಿ ತೆಗೆದು ನೋಡಿದಾಗ ಪ್ರಜ್ಞಾಹೀನನಾಗಿ ಅರ್ಜುನ್ ಬಿದ್ದಿರುವುದನ್ನು ಕಂಡ ಸಿಬ್ಬಂದಿ, ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ. ಈ ಮಾಹಿತಿ ಮೇರೆಗೆ ಲಾಡ್ಜ್‌ಗೆ ತೆರಳಿದ ಪೊಲೀಸರು, ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
