ಬೆಂಗಳೂರಿನಲ್ಲಿ ಪಿಎಸ್ಐ ಆತ್ಮಹತ್ಯೆ, ಕಾರಣ ನಿಗೂಢ

* ಮಾನಸಿಕವಾಗಿ ಮನನೊಂದು ಪಿಎಸ್ಐ ಆತ್ಮಹತ್ಯೆ
* ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸಬ್  ಇನ್ಸ್‌ಪೆಕ್ಟರ್
* ಹನುಮಂತನಗರ ಪೊಲೀಸ್ ಠಾಣಾ ಸಬ್ ಇನ್ಸ್‌ಪೆಕ್ಟರ್ ಆತ್ಮಹತ್ಯೆ

hanumantha nagar police station PSI Commits Suicide In bengaluru rbj

ಬೆಂಗಳೂರು, (ಜೂನ್.19): ಹನುಮಂತನಗರ ಪೊಲೀಸ್ ಠಾಣೆಯ ಸಬ್  ಇನ್ಸ್‌ಪೆಕ್ಟರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಇಂದು(ಭಾನುವಾರ) ಯಶವಂತಪುರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸುದರ್ಶನ್ ಶೆಟ್ಟಿ (45) ಆತ್ಮಹತ್ಯೆ ಮಾಡಿಕೊಂಡ ಸಬ್  ಇನ್ಸ್‌ಪೆಕ್ಟರ್. ಕೆಲ ವರ್ಷಗಳ ಹಿಂದೆ ಕುಡಿತಕ್ಕೆ ದಾಸನಾಗಿದ್ದ ಸುದರ್ಶನ್ ಶೆಟ್ಟಿ, ಕರ್ತವ್ಯದ ವೇಳೆಯಲ್ಲೂ ಕುಡಿದಿದ್ದ ಹಿನ್ನೆಲೆಯಲ್ಲಿ ಅವರು ಸಸ್ಪೆಂಡ್ ಆಗಿದ್ದರು. ಇದರಿಂದ ಮಾನಸಿಕವಾಗಿ ಮನನೊಂದು ಪಿಎಸ್ಐ ಸುದರ್ಶನ್ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ನಿವೃತ್ತ ಯೋಧರಾಗಿದ್ದ ಸುದರ್ಶನ್ ಶೆಟ್ಟಿ ಅವರು   ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕಾರ್ಯ  ನಿರ್ವಹಿಸುತ್ತಿದ್ದರು.  ರಿಹ್ಯಾಬಿಟೇಶನ್ ಸೆಂಟರ್ ಗೆ ತೆರಳಿ ಕುಡಿತವನ್ನ ಬಿಟ್ಟಿದ್ದರು ಎಂದು ತಿಳಿದುಬಂದಿದೆ. ಆದ್ರೆ, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿದೆ.

ಅಪ್ಪಂದಿರ ದಿನದಂದೇ ದುರಂತ ಅಂತ್ಯಕಂಡ ತಂದೆ-ಮಗ

ದಕ್ಷಿಣ ಕನ್ನಡ: ಜಿಲ್ಲೆಯ ಬೆಳ್ತಂಗಡಿ‌  ತಾಲೂಕಿನ ಉಜಿರೆಯ ನಾಗರಾಜ ಅವರ ಕಾಂಪೌಂಡ್ ನ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.ಮನೆಯ ಪರಿಸರದಲ್ಲಿ ವಾಸನೆ ಬಂದು ಬಾವಿಯನ್ನು ಪರಿಶೀಲಿಸಿದಾಗ ಶವ ಇರುವುದು ತಿಳಿದು ಬಂದಿದೆ. 

ಮನೆಯ‌ ಮಾಲೀಕರು ಮೈಸೂರಿನಲ್ಲಿ ನೆಲೆಸಿದ್ದು, ವಾರದ ಹಿಂದೆ ಬಂದು ಬಾವಿಯನ್ನು ಗಮನಿಸಿದ್ದರು. ಈ ವೇಳೆ ಮೃತ ದೇಹದ ತಲೆಯನ್ನು ತೆಂಗಿನಕಾಯಿ ಎಂದುಕೊಂಡು ವಾಪಾಸ್ ಆಗಿದ್ದರು. ಇಂದು ವಾಪಾಸು ಬಂದಾಗ ಮೃತದೇಹ ಇರುವುದು ಪತ್ತೆಯಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ. ಅಪರಿಚಿತ ಮೃತದೇಹವನ್ನು ಸ್ಥಳೀಯರ ಸಹಕಾರದಿಂದ ಪೊಲೀಸರು ಮೇಲಕೆತ್ತಿದ್ದಾರೆ.

Latest Videos
Follow Us:
Download App:
  • android
  • ios