* ತನ್ನ ಹೆಂಡತಿ ಮಹಿಳೆಯೇ ಅಲ್ಲ* ನ್ಯಾಯ ಕೊಡಿ ಎಂದು ಸುಪ್ರೀಂ ಮೆಟ್ಟಿಲೇರಿದ ಗಂಡ* ಪತ್ನಿ ಪುರುಷ ಜನನಾಂಗ ಹೊಂದಿದ್ದಾಳೆ* ವೈದ್ಯಕೀಯ ವರದಿ ಇಲ್ಲದೇ  ವಿವರಣೆ ಸಾಧ್ಯವಿಲ್ಲ

ನವದೆಹಲಿ(ಮಾ. 15) ಇದೊಂದು ವಿಚಿತ್ರ ಪ್ರಕರಣ. ನನ್ನ ಪತ್ನಿ ಮಹಿಳೆಯೇ ಅಲ್ಲ ಹಾಗಾಗಿ ನನಗೆ ಡಿವೋರ್ಸ್ ನೀಡಬೇಕು ಎಂಬ ಪ್ರಕರಣ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲು ಏರಿದೆ. ನ್ಯಾಯಾಲಯ ಮಹಿಳೆಗೆ (Woman) ನೋಟಿಸ್ ನೀಡಿದ್ದು ಈ ಆರೋಪಕ್ಕೆ ಉತ್ತರ ನೀಡುವಂತೆ ತಿಳಿಸಿದೆ.

ಪತಿ ತನ್ನ ಹೆಂಡತಿಯ (Wife) ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. ತನ್ನ ಹೆಂಡತಿ ತನಗೆ ದ್ರೋಹ ಮಾಡಿದ್ದಾಳೆ ಎಂದಿರುವ ಪತಿ, ನನ್ನ ಹೆಂಡತಿ ಹೆಂಗಸಲ್ಲ, ಗಂಡು ( Imperforate hymen) ಎಂದು ಹೇಳಿಕೊಂಡಿದ್ದಾನೆ. ಇನ್ನು ಪತಿ ನ್ಯಾಯಾಲಯಕ್ಕೆ ವೈದ್ಯಕೀಯ ವರದಿ ಸಲ್ಲಿಸಿದ್ದಾನೆ.

ಮಧ್ಯಪ್ರದೇಶ (Madhya Pradesh) ಹೈಕೋರ್ಟ್ ನೀಡಿರುವ ಆದೇಶ ಪ್ರಶ್ನಿಸಿ ವ್ಯಕ್ತಿ ಮೇಲ್ಮನವಿ ಸಲ್ಲಿಸಿದ್ದಾನೆ. ತನೆಗೆ ವಂಚನೆಯಾಗಿದ್ದು ನ್ಯಾಯ ದೊರಕಿಸಿಕೊಡಿ ಎಂದು ಕೇಳಿದ್ದಾನೆ.

ಮದುವೆಗೂ ಮುನ್ನ ಆಕೆ ಏನು ಹೇಳಿರಲಿಲ್ಲ. ಹೆಂಡತಿ ಪುರುಷ ಜನನಾಂಗ ಹೊಂದಿದ್ದಾಳೆ. ಲೈಂಗಿಕ ಸುಖದಿಂದ ತನೆಗೆ ವಂಚನೆಯಾಗಿದೆ ಎಂದು ಆರೋಪಿಸಿದ್ದು ಪ್ರಕರಣ ಸಂಜಯ್ ಕಿಶಾನ್ ಕೌಲ್ ಮತ್ತು ಎಂಎಂ ಸುಂದರೇಶ್ ಅವರ ಪೀಠದಲ್ಲಿದೆ.

ಲೈಂಗಿಕ ಕ್ರಿಯೆ ಬಳಿಕ ಯೋನಿಯಲ್ಲಿ ವೀರ್ಯವು ಎಷ್ಟು ಕಾಲವಿರುತ್ತೆ?

ಪತ್ನಿ ಇಂಪರ್ಫೋರ್ಟ್ ಹೈಮೆನ್ ಅಸ್ವಸ್ಥತೆಯೊಂದಿಗೆ ಜನಿಸಿದ್ದಾಳೆ. ಯೋನಿಯನ್ನ ತೆರೆಯದೆ ಹೈಮೆನ್ ಸಂಪೂರ್ಣವಾಗಿ ಅಡ್ಡಿ ಪಡಿಸುತ್ತದೆ ಎಂದಿದ್ದು ನ್ಯಾಯಾಲಯ ಅರ್ಜಿಯನ್ನು ಪುರಸ್ಕಾರ ಮಾಡಿದೆ.

ವೈದ್ಯಕೀಯ ವರದಿಯನ್ನು ನೀಡದೆ ಈ ಅರ್ಜಿ ಪುರಸ್ಕಾರ ಸಾಧ್ಯವಿಲ್ಲ ಎಂದು ಕೆಳ ನ್ಯಾಯಾಲಯ ತಿರಸ್ಕಾರ ಮಾಡಿತ್ತು. ತಾನು ಲೈಂಗಿಕ ಕ್ರಿಯೆಗೆ ಮುಂದಾದಾಗ ಯೋನಿದ್ವಾರ ಸಿಕ್ಕಿಲ್ಲ. ಬದಲಾಗಿ ಚಿಕ್ಕ ಮಕ್ಕಳ ರೀತಿ ಶಿಶ್ನ ಕಂಡುಬಂದಿದೆ ಎನ್ನುವುದು ಪ್ರಮುಖ ಆರೋಪ 

ಶರ್ಮಾ ಮತ್ಉತ ಮಹಿಳೆ 2016 ರಲ್ಲೇ ಮದುವೆಯಾಗಿದ್ದರು. ಮದುವೆ ನಂತರ ಸೆಕ್ಸ್ ಗೆ ಮುಂದಾದಾಗ ಋತುಸ್ರಾವದ ದಿನ ಎಂದು ದೂರ ತಳ್ಳಿದ್ದಾಳೆ. ದಿನಗಳು ಕಳೆದ ಮೇಲೆ ಪ್ರಯತ್ನಿಸಿದಾಗ ಸಂಗತಿ ಗೊತ್ತಾಗಿದೆ. ಗಂಡ ಪತ್ನಿಯನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾನೆ.

ಸಣ್ಣದೊಂದು ಸರ್ಜರಿ ಮಾಡಿಸಿಕೊಂಡು ಮಹಿಳೆ ಹಿಂದಕ್ಕೆ ಬಂದಿದ್ದಾಳೆ. ಇದಾದ ಮೇಲೆ ಗಂಡನ ಮನೆಗೆ ಹೋಗಿದ್ದಾಳೆ. ಆದರೆ ಮಹಿಳೆಯ ತಂದೆ ಬೆದರಿಕೆ ಹಾಕಿದ್ದು ಕೊನೆಗೆ ಗಂಡ ಪೊಲೀಸ್ ಮೊರೆ ಹೋಗಿದ್ದಾನೆ.