ಸಾಲಿಗ್ರಾಮ(jU.೨೮): ದೃಶ್ಯ ಸಿನಿಮಾದ ಪ್ರೇರಣೆ ಪಡೆದು ಕೊಲೆ ಮಾಡಿದ ಬಳಿಕ ಅಪಘಾತ ಎಂದು ಬಿಂಬಿಸಲು ಯತ್ನಿಸಿ ಸಿಕ್ಕಿಬಿದ್ದಿರುವ ಪ್ರಕರಣ ಮೈಸೂರಿನ ಸಾಲಿಗ್ರಾಮದಲ್ಲಿ ಜರುಗಿದೆ.

ಜೂ.22ರಂದು ನಡೆದಿದ್ದ ಟ್ರಾವೆಲ್ಸ್‌ ಮಾಲಿಕ ಆನಂದ್‌ (37) ಅಪಘಾತ ರಹಸ್ಯ ಬಹಿರಂಗವಾಗಿದೆ. ಮೃತನ ಪತ್ನಿ ಶಾರದಾ (25) ಮತ್ತು ಆಕೆಯ ಪ್ರಿಯಕರ ಬಾಬು (37)ನನ್ನು ಬಂಧಿಸಲಾಗಿದೆ. ಆನಂದ್‌ ಪತ್ನಿಯೊಂದಿಗೆ ಬಾಬುಗೆ ಸ್ನೇಹವಿತ್ತು. ‘ನನ್ನ ಗಂಡನ ಕೊಂದರೆ ನಿನ್ನ ಜೊತೆ ಇರುವೆ’ ಎಂದು ಪ್ರಿಯಕರನಿಗೆ ತಿಳಿಸಿದ್ದಳು.

ಟೆಕ್ಕಿ ಆತ್ಮಹತ್ಯೆ, ಪತಿಯ ಘನಘೋರ ವಿಡಿಯೋ ಬಹಿರಂಗ ಮಾಡಿದ ಕುಟುಂಬ!

ಬಾಬು, ಆನಂದ್‌ಗೆ ಕಂಠಪೂರ್ತಿ ಕುಡಿಸಿ ಕೊಡಲಿಯಿಂದ ತಲೆಗೆ ಹೊಡೆದು ಕೊಲೆ ಮಾಡಿದ ಬಳಿಕ ಶವವನ್ನು ದೇವಸ್ಥಾನದ ಬಳಿ ಎಸೆದು, ಬೈಕ್‌ ಸಹ ಪಕ್ಕ​ದಲ್ಲೇ ಬೀಳಿಸಿ ಹೋಗಿದ್ದ. ಆನಂದ್‌ ತಂದೆ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ವಿಚಾರಣೆ ನಡೆಸಿದಾಗ ಕೃತ್ಯ ಬಯ​ಲಾ​ಗಿದೆ.