50 ಸಾವಿರ ರುಪಾಯಿ ದಾಟಿದ ಚಿನ್ನದ ಬೆಲೆ!
50 ಸಾವಿರ ರುಪಾಯಿ ದಾಟಿದ ಚಿನ್ನದ ಬೆಲೆ!| ಅಬ್ಬಬ್ಬಾ-24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 50,100 ರು.
ಬೆಂಗಳೂರು(ಜೂ. 28): ಕೊರೋನಾ ಬಿಕ್ಕಟ್ಟಿನ ನಡುವೆಯೂ ಬಂಗಾರದ ದರ ದಾಖಲೆಯ ಮಟ್ಟದಲ್ಲಿ ಏರಿಕೆಯಾಗಿದ್ದು, ಪ್ರತಿ 10 ಗ್ರಾಂ. ಬೆಲೆ 50 ಸಾವಿರ ರು. ಗಡಿ ದಾಟಿದೆ. ತಜ್ಞರ ಪ್ರಕಾರ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದ್ದು, ಜನರು ಚಿನ್ನದ ಮೇಲೆ ಹೂಡಿಕೆ ಹೆಚ್ಚು ಮಾಡುತ್ತಿರುವುರಿಂದ ಈ ವರ್ಷಾಂತ್ಯದ ವೇಳೆಗೆ ಚಿನ್ನದ ದರ ಮತ್ತಷ್ಟುಹೆಚ್ಚಾಗುವ ಸಾಧ್ಯತೆಯಿದೆ.
ಆರ್ಥಿಕತೆಗೆ ಬಲ ತುಂಬಲು ಆರ್‌ಬಿಐ 4 ಅಸ್ತ್ರ: ಸಾಲಗಾರರಿಗೆ ಬಿಗ್ ರಿಲೀಫ್!
ರಾಜ್ಯದಲ್ಲಿ ಶನಿವಾರ 22 ಕ್ಯಾರೆಟ್ 10 ಗ್ರಾಂ. ಚಿನ್ನದ ಬೆಲೆ 45,720 ರು., 24 ಕ್ಯಾರೆಟ್ 10 ಗ್ರಾಂ. ಗೆ 50,100 ರು. ನಿಗದಿಯಾಗಿದೆ. ರಾಜ್ಯಾದ್ಯಂತ ಮೇ ಕೊನೆಯ ವಾರದಿಂದ ಈವರೆಗೆ 400 ಕೆ.ಜಿ.ಗೂ ಅಧಿಕ ಚಿನ್ನ, 350 ಕೆ.ಜಿ.ಗೂ ಹೆಚ್ಚು ಬೆಳ್ಳಿ ವಹಿವಾಟು ನಡೆದಿದೆ. ಈ ವರ್ಷ ಚಿನ್ನದ ದರದಲ್ಲಿ ಶೇ.24ರಷ್ಟುಏರಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.
10 ಗ್ರಾಂ. ಚಿನ್ನಕ್ಕೆ 50,100 ರು., ಒಂದು ಕೆ.ಜಿ. ಬೆಳ್ಳಿ 50,000 ರು. ಆಗಿದೆ. ಜನರು ಚಿನ್ನವನ್ನು ಅವಶ್ಯಕತೆ ಇದ್ದಷ್ಟುಮಾತ್ರ ಖರೀದಿಸಬೇಕು. ಮುಂದಿನ ದಿನಗಳಲ್ಲಿ ಒಂದು ಗ್ರಾಂ. ಬೆಲೆ 6,500 ರು.ವರೆಗೆ ಏರಿಕೆಯಾಗಬಹುದು ಎಂದು ಸಾಯಿ ಗೋಲ್ಡ್ ಪ್ಯಾಲೇಸ್ ಮಾಲಿಕ ಟಿ. ಎ. ಶರವಣ ಮಾಹಿತಿ ನೀಡಿದ್ದಾರೆ.
80 ದಿನ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ!
ಲಾಕ್‌ಡೌನ್ ಸಡಿಲಿಕೆ ನಂತರ ಮೇ ತಿಂಗಳ ಕೊನೆಯ ವಾರ ಹಾಗೂ ಜೂನ್‌ನಲ್ಲಿ ಶೇ.40-45ರಷ್ಟುವ್ಯಾಪಾರ ಹೆಚ್ಚಾಗಿದೆ. ರಾಜ್ಯದಲ್ಲಿ ಈವರೆಗೆ ಅಂದಾಜು 400 ಕೆ.ಜಿ.ಗೂ ಹೆಚ್ಚು ಚಿನ್ನ, 350 ಕೆ.ಜಿ.ಗೂ ಹೆಚ್ಚು ಬೆಳ್ಳಿ ಖರೀದಿಯಾಗಿದೆ. ಬೆಳ್ಳಿ ಬೆಲೆಯಲ್ಲಿ ಸಾಕಷ್ಟುವ್ಯತ್ಯಾಸವಾಗಿಲ್ಲ. ಶೇ.80ರಷ್ಟುಲೈಟ್ ವೇಟೆಡ್, ಶೇ.20ರಷ್ಟುಸ್ಟಡ್ಸ್ ಆಭರಣಗಳ ಖರೀದಿಯಾಗುತ್ತಿದೆ ಎಂದು ರಾಜ್ಯ ಆಭರಣ ವರ್ತಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾ.ಬಿ.ರಾಮಾಚಾರಿ ಹೇಳಿದ್ದಾರೆ.