Asianet Suvarna News Asianet Suvarna News

ಚಿಕ್ಕಮಗಳೂರು: ಒಂದೇ ಕುಣಿಕೆಗೆ ಕೊರಳೊಡ್ಡಿದ ಪ್ರೇಮಿಗಳು

ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಗುಲ್ಲನಪೇಟೆಯ ಸತ್ತಿಹಳ್ಳಿ ನಿರ್ಜನ ಪ್ರದೇಶದಲ್ಲಿ ನಡೆದ ಘಟನೆ  

Lovers Committed Suicide in Chikkamagaluru grg
Author
First Published Dec 20, 2022, 9:57 PM IST

ಚಿಕ್ಕಮಗಳೂರು(ಡಿ.20):  ಪ್ರೇಮಿಗಳು ಒಂದೇ ನೇಣಿನ ಕುಣಿಕೆಗೆ ಕೊರಳೊಡ್ಡಿದ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಗುಲ್ಲನಪೇಟೆಯ ಸತ್ತಿಹಳ್ಳಿ ನಿರ್ಜನ ಪ್ರದೇಶದಲ್ಲಿ ಇಂದು(ಮಂಗಳವಾರ) ನಡೆದಿದೆ. ಮೃತ ಯುವಕನನ್ನ ಚಿಕ್ಕಮಗಳೂರು ತಾಲೂಕಿನ ಕಲ್ಲುಗುಡ್ಡೆ ಅಣೂರಿನ ದರ್ಶನ್‌ ಹಾಗೂ ಹಾಸನ ಜಿಲ್ಲೆಯ ಹಾನಬಾಳು ಮೂಲದ ಪೂರ್ವಿಕಾ ಅಂತ ಗುರುತಿಸಲಾಗಿದೆ. 

ಒಂದೇ ವೇಲ್‌ನಲ್ಲಿ ಯುವಕ-ಯುವತಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಬ್ಬರೂ ಪ್ರೇಮಿಗಳಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. 

7ನೇ ಮಹಡಿಯಿಂದ ಜಿಗಿದು ಎಲ್‌ಎಲ್‌ಬಿ ವಿದ್ಯಾರ್ಥಿನಿ ಆತ್ಮಹತ್ಯೆ!

ಮೃತದೇಹಗಳನ್ನ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.  
 

Follow Us:
Download App:
  • android
  • ios