ಅಪ್ರಾಪ್ತ ವಯಸ್ಸಿನಲ್ಲಿಯೇ ಪ್ರೀತಿ-ಪ್ರೇಮ ಎಂಬ ಹುಚ್ಚಾಟಕ್ಕೆ ಬಿದ್ದು ಜೀವ ಕಳೆದುಕೊಂಡ ಜೋಡಿ

ಬಾಳಿ ಬದುಕಬೇಕಾಗಿದ್ದ ಇಬ್ಬರು ಅಪ್ರಾಪ್ತ ವಯಸ್ಸಿನಲ್ಲಿಯೇ ಪ್ರೀತಿ ಪ್ರೇಮ ಎಂಬ ಹುಚ್ಚಾಟಕ್ಕೆ ಬಿದ್ದು ಜೋಡಿ ಜೀವ ಕಳೆದುಕೊಂಡಿದೆ.  ಮಕ್ಕಳನ್ನು ಕಳೆದುಕೊಂಡ 2 ಕುಟುಂಬಗಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Lovers Commits Suicide By Hanging In Haveri rbj

ಹಾವೇರಿ, (ಜುಲೈ.13): ಅಪ್ರಾಪ್ತ ವಯಸ್ಸಿನ ಇಬ್ಬರು ಪ್ರೇಮಿಗಳು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿಯ ಬ್ಯಾಡಗಿ  ಪಟ್ಟಣದಲ್ಲಿ ನಡೆದಿದೆ.

ಇಬ್ಬರು ಅಪ್ರಾಪ್ತ ಪ್ರೇಮಿಗಳು ಬ್ಯಾಡಗಿ  ಪಟ್ಟಣದ ಕುಂಬಾರ ಓಣಿ ನಿವಾಸಿಗಳು ಎಂದು ಗುರುತಿಸಲಾಗಿದೆ. ಕಳೆದ ಕೆಲ ವರ್ಷಗಳಿಂದ ಅನ್ಯ ಕೋಮಿನ ಬಾಲಕನೊಂದಿಗೆ ಕುಂಬಾರ ಒಣಿಯ ಬಾಲಕಿಗೆ ಪ್ರೇಮಾಂಕುರವಾಗಿ ಇಬ್ಬರೂ ಪರಸ್ಪರ ಪ್ರೀತಿ ಮಾಡುತ್ತಿದ್ದರು.  

ಮೊಬೈಲ್ ಕೊಡಿಸದ್ದಕ್ಕೆ ತಂದೆ ಜನ್ಮದಿನದಂದೇ ಮಗ ನೇಣಿಗೆ ಶರಣು!

ಬ್ಯಾಡಗಿ ಪಟ್ಟಣದ ಎಸ್ ಎಸ್ ಪಿಎನ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದ ಬಾಲಕಿ, ಇಂದು(ಬುಧವಾರ)  ಮಧ್ಯಾಹ್ನ ಊಟಕ್ಕೆಂದು ಮನೆಗೆ ಹೋಗಿ ಬರುವುದಾಗಿ ಶಾಲೆಯಲ್ಲಿ ತಿಳಿಸಿ ಅಲ್ಲಿಂದ ಪ್ರಿಯಕರನ ಮನೆಗೆ ತೆರಳಿದ್ದಾಳೆ. ನಂತರ ಕೆಲ ಗಂಟೆಗಳ ಕಾಲ ಇಬ್ಬರೂ ಒಟ್ಟಿಗೆ ಸಮಯವನ್ನು ಕಳೆದಿದ್ದಾರೆ. ಸಂಜೆಯ ಹೊತ್ತಿಗೆ ಬಾಲಕನ ಮನೆಯಲ್ಲಿಯೇ ಒಂದೇ ಹಗ್ಗಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಪೋಷಕರು ಇಬ್ಬರನ್ನು ಸ್ಥಳೀಯ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ.
 ಆದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮಕ್ಕಳನ್ನು ಕಳೆದುಕೊಂಡ 2 ಕುಟುಂಬಗಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಅಪ್ರಾಪ್ತ ವಯಸ್ಸಿನಲ್ಲಿಯೇ ಪ್ರೀತಿ ಪ್ರೇಮ ಎಂಬ ಹುಚ್ಚಾಟಕ್ಕೆ ಬಿದ್ದು  ಜೀವ ಕಳೆದುಕೊಂಡಿವೆ. ಘಟನೆ ಕುರಿತಂತೆ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios