ಯಾದಗಿರಿ, (ಜ.19): ಪ್ರೇಮಿಗಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ವಡಿಗೇರಾ ತಾಲೂಕಿನ ಗುಂಡಗುರ್ತಿ ಗ್ರಾಮದಲ್ಲಿ ನಡೆದಿದೆ.

ಶರಣಬಸವ(23) ಮತ್ತು ಶೇಖಮ್ಮ(19) ಆತ್ಮಹತ್ಯೆಗೆ ಶರಣಾಗಿದ್ದು, ತಮ್ಮ ಪ್ರೀತಿಗೆ ಮನೆಯವರು ಸಮ್ಮತಿ ಸೂಚಿಸದ ಹಿನ್ನೆಲೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮೈಸೂರು; ಗರ್ಲ್ ಫ್ರೆಂಡ್ ಜತೆ ಮಾತಾಡುತ್ತಿದ್ದಾಗಲೇ ಹಿಂದಿಂದ ಏಟು ಬಿದ್ದಿತ್ತು!

ಶರಣಬಸವ ಹಾಗು ಶೇಖಮ್ಮ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ, ಕುಟುಂಬದವರು ಮದುವೆಗೆ ಒಪ್ಪದಿರುವುದನ್ನೇ ಕಾರಣವಾಗಿಟ್ಟುಕೊಂಡು ಮನೆಯಲ್ಲಿರುವ ಪೈಪ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಘಟನಾ ಸ್ಥಳಕ್ಕೆ ಶಹಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.