ಮದುವೆಯಾಗುವುದಾಗಿ ಯುವತಿಗೆ ವಂಚನೆ: ಕೇಸು ದಾಖಲು
ಮದುವೆಯಾಗುವುದಾಗಿ ನಂಬಿಸಿ ಯುವತಿ ಜತೆ ದೈಹಿಕ ಸಂಪರ್ಕ ಹೊಂದಿ ಬಳಿಕ ಮದುವೆಯಾಗಲ್ಲ ಎಂದು ವಂಚಿಸಿದ ತಾಲೂಕಿನ ಮೈನಳ್ಳಿ ಯುವಕ, ಆತನ ಕುಟುಂಬದವರ ವಿರುದ್ಧ ಯುವತಿ ದೂರು ದಾಖಲಿಸಿದ್ದಾರೆ.
ಮುಂಡಗೋಡ (ಮೇ.20) : ಮದುವೆಯಾಗುವುದಾಗಿ ನಂಬಿಸಿ ಯುವತಿ ಜತೆ ದೈಹಿಕ ಸಂಪರ್ಕ ಹೊಂದಿ ಬಳಿಕ ಮದುವೆಯಾಗಲ್ಲ ಎಂದು ವಂಚಿಸಿದ ತಾಲೂಕಿನ ಮೈನಳ್ಳಿ ಯುವಕ, ಆತನ ಕುಟುಂಬದವರ ವಿರುದ್ಧ ಯುವತಿ ದೂರು ದಾಖಲಿಸಿದ್ದಾರೆ.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಖಂಡೆಬಾಗೂರ ಗ್ರಾಮದ 19 ವರ್ಷದ ಯುವತಿ ದೂರು ದಾಖಲಿಸಿದ್ದು, ತಾಲೂಕಿನ ಮೈನಳ್ಳಿ ಗ್ರಾಮದ ಆರೋಪಿ ಪ್ರಸಾದಕುಮಾರ (21), ಪೋಷಕರಾದ ಪ್ರಕಾಶ ಭಡಂಗಕರ, ಶಾಂತಾ ಭಡಂಗಕರ ಎಂಬವರ ವಿರುದ್ಧ ದೂರು ದಾಖಲಾಗಿದೆ.
ಲವ್, ಸೆಕ್ಸ್, ದೋಖಾ: ಯುವಕನ ಮನೆ ಎದುರೇ ಧರಣಿ ಕುಳಿತ ಯುವತಿ, ಸಹಾಯಕ್ಕೆ ಬಾರದ ಪೊಲೀಸರು!
ಆರೋಪಿಯು ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ 2022ರ ಆಗಸ್ಟ್ 28ರಂದು ಯುವತಿ ಜತೆ ದೈಹಿಕ ಸಂಪರ್ಕ ಬೆಳೆಸಿದ್ದ. ಇದೀಗ ಮದುವೆಯಾಗುವುದಿಲ್ಲ ಎಂದು ಹೇಳುತ್ತಿದ್ದು, ಆರೋಪಿಯ ಕುಟುಂಬದವರಿಗೆ ವಿಷಯ ತಿಳಿಸಿದರೂ ಪ್ರಯೋಜನವಾಗಿಲ್ಲ. ‘ನೀನು ಲಂಬಾಣಿ, ಕೀಳು ಜಾತಿಯವಳು. ಮದುವೆ ಆಗುವುದಿಲ್ಲ’ ಎಂದು ಹೇಳುವ ಮೂಲಕ ಜಾತಿ ನಿಂದನೆಯನ್ನೂ ಮಾಡಿದ್ದಾರೆ’ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಮುಂಡಗೋಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಎರಡು ದಿನಗಳ ಹಿಂದೆ ಇದೇ ಯುವತಿಯು ಯುವಕನ ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆಸಿದ್ದಳು.
Love Sex Aur Dhokha : ಮದುವೆ ಆಗೋದಾಗಿ ನಂಬಿಸಿ ಲವ್.. ಸೆಕ್ಸ್.. ದೋಖಾ.. ಗೋಕಾಕದ ಕಿರಾತಕ
ಮೈನಳ್ಳಿ ಗ್ರಾಮದ ಯುವಕ ಪ್ರಸಾದ್ ಪ್ರಕಾಶ್ ಕಲಾಲ್(prasad prakash kalal) ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಉದ್ಯೋಗ ಸಂಬಂಧಿತ ತರಬೇತಿಗೆ ಹೋದಾಗ, ಯುವತಿ ಗಿರಿಜಾ ಜತೆ ಸ್ನೇಹ ಬೆಳಸಿಕೊಂಡಿದ್ದ. ಆ ಸ್ನೇಹ ಮುಂದುವರಿದು ಪ್ರೀತಿಗೆ ತಿರುಗಿ ಪ್ರೇಮಲೋಕದಲ್ಲಿ ತೇಲಾಡ್ತಾ ಇಬ್ಬರೂ ಜೊತೆ ಜೊತೆಯಾಗೇ ಬೆಂಗಳೂರಿಗೆ ಕೆಲಸಕ್ಕೆ ತೆರಳಿದ್ದರು.
ಅಲ್ಲಿಯೂ ಇವ್ರು ಒಂದೇ ರೂಮಿನಲ್ಲಿ ವಾಸ ಮಾಡಿದ್ದರು. ಹೀಗೆ ಬರೋಬ್ಬರಿ ಒಂದು ವರ್ಷಗಳ ಕಾಲ ನಡೆದ ಇವ್ರ ಪ್ರೇಮ, ಸರಸ ಸಲ್ಲಾಪ ಕಡೆ ಕಡೆಗೆ ಮದುವೆ ಮಾತಿಗೆ ಬಂದಾಗ ಯುವಕ ಬಿಲ್ ಕುಲ್ ಬದಲಾಗಿಬಿಟ್ಟಿದ್ದ. ನಾನು ಮಾಡಿದ್ದು ಜಸ್ಟ್ ಟೈಮ್ ಪಾಸ್ ಅಷ್ಟೇ ಮದುವೆ ಏನೂ ಸಾಧ್ಯ ಇಲ್ಲ ಅಂತಾ ಕಡ್ಡಿ ಮುರಿದಂತೆ ಹೇಳಿದ್ದು, ನಂತರ ಯುವತಿಯಿಂದ ದೂರವಾಗಿದ್ದಾನೆ. ಹೀಗಾಗಿ, ಯುವತಿ ದೂರವಾದ ತನ್ನ ಪ್ರೇಮಿಯನ್ನು ಹುಡುಕಿಕೊಂಡು ಮುಂಡಗೋಡಿನ ಮೈನಳ್ಳಿವರೆಗೂ ಬಂದಿದ್ದಾಳೆ.