Asianet Suvarna News Asianet Suvarna News

Love Sex Aur Dhokha : ಮದುವೆ ಆಗೋದಾಗಿ ನಂಬಿಸಿ ಲವ್.. ಸೆಕ್ಸ್.. ದೋಖಾ..  ಗೋಕಾಕದ ಕಿರಾತಕ

ಗೋಕಾಕ್‌ನಲ್ಲಿ ಲವ್.. ಸೆಕ್ಸ್.. ದೋಖಾ ಪ್ರಕರಣ
ಮದುವೆ ಆಗೋದಾಗಿ ನಂಬಿಸಿ ಯುವತಿ ಅತ್ಯಾಚಾರ
ಅತ್ಯಾಚಾರ ಮಾಡಿ ಫೋಟೋ ತೆಗೆದುಕೊಂಡಿರುವ ಆರೋಪಿ
ನ್ಯಾಯಕ್ಕಾಗಿ ಬೆಳಗಾವಿ ಎಸ್‌ಪಿ ಮೊರೆ ಹೋದ ಸಂತ್ರಸ್ತೆ
ಬೇರೆ ಹೆಣ್ಣೊಂದಿಗೆ ಮದುವೆಯಾಗುತ್ತಿರುವ ಆರೋಪಿ ಯುವಕ

ಬೆಳಗಾವಿ (ಫೆ. 22)   ಬೆಳಗಾವಿ (Belagavi) ಜಿಲ್ಲೆ ಗೋಕಾಕ್‌ನಲ್ಲಿ ಲವ್.. ಸೆಕ್ಸ್.. ದೋಖಾ ಪ್ರಕರಣವೊಂದು ಬಯಲಾಗಿದೆ.  ಮದುವೆ (Marriage) ಆಗೋದಾಗಿ ನಂಬಿಸಿ (Rape) ಅತ್ಯಾಚಾರವೆಸಗಿ, ಬಳಿಕ ಮೋಸ ಮಾಡಿದ್ದಾನೆಂದು ಯುವಕನೊಬ್ಬನ ವಿರುದ್ಧ ಸಂತ್ರಸ್ತೆ ಆರೋಪಿಸಿದ್ದಾಳೆ.

ಇದೀಗ ಯುವಕ ಬೇರೆ ಯುವತಿ ಜತೆ ಯುವಕ ಮದುವೆಯಾಗುತ್ತಿದ್ದು, ನೊಂದ ಯುವತಿ ನ್ಯಾಯಕ್ಕಾಗಿ ಬೆಳಗಾವಿ ಎಸ್‌ಪಿ ಮೊರೆ ಹೋಗಿದ್ದಾಳೆ. ಗೋಕಾಕ್‌ನ‌ ಬಾಲಕಿಯರ ವಸತಿ ನಿಲಯವೊಂದರಲ್ಲಿ ಸೂಪರಿಂಟೆಂಡೆಂಟ್ ಆಗಿ ಕೆಲಸ ಮಾಡ್ತಿದ್ದ ನೊಂದ ಯುವತಿ,  ಕಟ್ಟಡ ಮಾಲೀಕನ ಪುತ್ರ ಆದರ್ಶ ಮಾಲದಿನ್ನಿ ವಿರುದ್ಧ ದೂರು ನೀಡಿದ್ದಾಳೆ. 2016ರ ಡಿಸೆಂಬರ್ 5ರಂದು ಅತ್ಯಾಚಾರ ಮಾಡಿ ಫೋಟೋ ತಗೆದುಕೊಂಡು,  ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಅಪ್‌ಲೋಡ್ ಮಾಡೋದಾಗಿ ಬೆದರಿಸಿದ್ದಾನೆಂದು ಆಕೆ ಆರೋಪಿಸಿದ್ದಾಳೆ.

Double Murder In Bengaluru : ಹೆಂಡತಿ ಹಾಗೂ ಅತ್ತೆಯನ್ನು ಎಳನೀರಿನಂತೆ ಕತ್ತರಿಸಿದ ಆರೋಪಿ!

ಇದಾದ ಬಳಿಕ ಯುವತಿ ಪೊಲೀಸರಿಗೆ (Police)  ದೂರು ನೀಡಲು ಮುಂದಾಗುತ್ತಿದ್ದಂತೆ‌, ಮದುವೆಯಾಗ್ತೀನಿ ಅಂತಾ ನಂಬಿಸಿದ್ದಾನಂತೆ.  ನಂಬಿಸಿ ಮೋಸ ಮಾಡಿ ಇಂದು ಬೇರೆ ಯುವತಿ ಜೊತೆ ಮದುವೆಯಾಗುತ್ತಿದ್ದಾನೆ ಎಂದು ಯುವತಿ ಅಳಲು ತೋಡಿಕೊಂಡಿದ್ದಾಳೆ.

ಯುವಕ ಆದರ್ಶನ ತಂದೆ ತಾಯಿಗೆ ಹೇಳಿದ್ರೂ ಹಣದ ಆಮಿಷ ತೋರಿಸಿ ಬಳಿಕ ಜೀವ ಬೆದರಿಕೆ ಹಾಕಿದ್ದಾರೆ, ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳಲಿಲ್ಲ ಎಂದು ಆಕೆ ಆರೋಪಿಸಿದ್ದಾಳೆ.

Video Top Stories