ಲವ್, ಸೆಕ್ಸ್, ದೋಖಾ: ಯುವಕನ ಮನೆ ಎದುರೇ ಧರಣಿ ಕುಳಿತ ಯುವತಿ, ಸಹಾಯಕ್ಕೆ ಬಾರದ ಪೊಲೀಸರು!

ಯುವತಿಯೋರ್ವಳು ತನಗೆ ಅನ್ಯಾಯವಾಗಿದೆ ಎಂದು ಯುವಕನ ಮನೆಯೆದುರು ನಿನ್ನೆಯಿಂದ ಧರಣಿ ಕುಳಿತಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಮೈನಳ್ಳಿಯಲ್ಲಿ ನಡೆದಿದೆ.  

Love sex dokha case A young woman sitting in front of her lovers house at mundagoda uttarakannada rav

ಉತ್ತರ ಕನ್ನಡ (ಮೇ.16) : ಯುವತಿಯೋರ್ವಳು ತನಗೆ ಅನ್ಯಾಯವಾಗಿದೆ ಎಂದು ಯುವಕನ ಮನೆಯೆದುರು ನಿನ್ನೆಯಿಂದ ಧರಣಿ ಕುಳಿತಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಮೈನಳ್ಳಿಯಲ್ಲಿ ನಡೆದಿದೆ.  

ಮೈನಳ್ಳಿಯ ಯುವಕ ಪ್ರಸಾದ್ ಪ್ರಕಾಶ್ ಕಲಾಲ್ ಬದಂಕರ್ (22) ಎಂಬಾತ ತನ್ನನ್ನು ಪುಸಲಾಯಿಸಿ, ಪ್ರೀತಿಯ ಬಲೆ ಹೆಣೆದು, ಬಳಸಿಕೊಂಡು ಈಗ ಮದುವೆ ವಿಚಾರ ಮಾತನಾಡಿದ್ರೆ ಆಗಲ್ಲ ಅಂತಾ ದ್ರೋಹ ಮಾಡ್ತಿದಾನೆಂದು ಹಾವೇರಿ ಹಿರೇಕೆರೂರಿನ  ಕಾಂಡೆಬಾಗೂರ್ ನಿವಾಸಿ ಯುವತಿ ಗಿರಿಜಾ ಪರಮೇಶ್ ಲಮಾಣಿ(Girija paramesh lamani) (19) ಅಲವತ್ತುಕೊಂಡಿದ್ದಾಳೆ. ಅಂದಹಾಗೆ, ಯುವತಿ ಹೇಳೋ ಪ್ರಕಾರ, ಮೈನಳ್ಳಿ ಗ್ರಾಮದ  ಯುವಕ ಪ್ರಸಾದ್ ಪ್ರಕಾಶ್ ಕಲಾಲ್(prasad prakash kalal) ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಉದ್ಯೋಗ ಸಂಬಂಧಿತ ತರಬೇತಿಗೆ ಹೋದಾಗ, ಯುವತಿ ಗಿರಿಜಾ ಜತೆ ಸ್ನೇಹ ಬೆಳಸಿಕೊಂಡಿದ್ದ. ಆ ಸ್ನೇಹ ಮುಂದುವರಿದು ಪ್ರೀತಿಗೆ ತಿರುಗಿ ಪ್ರೇಮಲೋಕದಲ್ಲಿ ತೇಲಾಡ್ತಾ  ಇಬ್ಬರೂ ಜೊತೆ ಜೊತೆಯಾಗೇ ಬೆಂಗಳೂರಿಗೆ ಕೆಲಸಕ್ಕೆ ತೆರಳಿದ್ದರು. 

Love Sex Aur Dhokha : ಮದುವೆ ಆಗೋದಾಗಿ ನಂಬಿಸಿ ಲವ್.. ಸೆಕ್ಸ್.. ದೋಖಾ..  ಗೋಕಾಕದ ಕಿರಾತಕ

ಅಲ್ಲಿಯೂ ಇವ್ರು ಒಂದೇ ರೂಮಿನಲ್ಲಿ ವಾಸ ಮಾಡಿದ್ದರು. ಹೀಗೆ ಬರೋಬ್ಬರಿ ಒಂದು ವರ್ಷಗಳ‌ ಕಾಲ ನಡೆದ ಇವ್ರ ಪ್ರೇಮ, ಸರಸ ಸಲ್ಲಾಪ ಕಡೆ ಕಡೆಗೆ ಮದುವೆ ಮಾತಿಗೆ ಬಂದಾಗ ಯುವಕ ಬಿಲ್ ಕುಲ್ ಬದಲಾಗಿಬಿಟ್ಟಿದ್ದ. ನಾನು ಮಾಡಿದ್ದು ಜಸ್ಟ್ ಟೈಮ್ ಪಾಸ್ ಅಷ್ಟೇ ಮದುವೆ ಏನೂ ಸಾಧ್ಯ ಇಲ್ಲ ಅಂತಾ ಕಡ್ಡಿ ಮುರಿದಂತೆ ಹೇಳಿದ್ದು, ನಂತರ ಯುವತಿಯಿಂದ ದೂರವಾಗಿದ್ದಾನೆ. ಹೀಗಾಗಿ, ಯುವತಿ ದೂರವಾದ ತನ್ನ ಪ್ರೇಮಿಯನ್ನು ಹುಡುಕಿಕೊಂಡು ಮುಂಡಗೋಡಿನ ಮೈನಳ್ಳಿವರೆಗೂ ಬಂದಿದ್ದಾಳೆ.

ಮುಂಡಗೋಡಿಗೆ‌ ನೇರವಾಗಿ ಬಂದಿಳಿದಿದ್ದ ಯುವತಿ, ಇಲ್ಲಿನ ಪೊಲೀಸ್ ಠಾಣೆ(Mundagoda police station)ಗೆ ತೆರಳಿ ತನಗಾಗಿರುವ ಮೋಸದ ಬಗ್ಗೆ ತಿಳಿಸಿ, ನನ್ನ ಪ್ರೇಮಿಯ ಜೊತೆ ಸೇರಿಸಿ ಅಂತಾ ಅಲವತ್ತುಕೊಂಡಿದ್ದಾಳೆ. ಆದ್ರೆ, ಮುಂಡಗೋಡ ಪೊಲೀಸರು ಆ ಯುವತಿಗೆ ಬುದ್ದಿವಾದ ಹೇಳಿ ಕಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಮತ್ತೆ ಯುವತಿ ಮೈನಳ್ಳಿಯ ಯುವಕನ ಮನೆ ಬಳಿ ಬಂದು ಮನೆ ಎದುರೇ ಧರಣಿ ಕುಳಿತಿದ್ದಾಳೆ. ದುರಂತ ಅಂದ್ರೆ ಏಕಾಂಗಿಯಾಗಿ ಬಂದಿರೋ ಯುವತಿಗೆ ಕಾನೂನು ಸಹ ಸಹಕಾರಿಯಾಗಿಲ್ಲ. ಜೊತೆಗೆ ಯಾರೂ ಕ್ಯಾರೇ ಅಂದಿಲ್ಲ. ಹೀಗಾಗಿ, ಮಯುನಳ್ಳಿಯ ಕೆಲವು ಮುಖಂಡರು, ಗ್ರಾಮಸ್ಥರು ಯುವತಿಗೆ ಊಟ ತಿಂಡಿ ಕೊಟ್ಟು ಸಹಾಯಕ್ಕೆ ಬಂದಿದ್ದಾರೆ. 

ಪ್ಯಾರ್ ಮೊಹಬ್ಬತ್ ದೋಖಾ.: ಉತ್ತರ ಕನ್ನಡ ಜೆಡಿಎಸ್‌ ಅಧ್ಯಕ್ಷನ ವಿರುದ್ಧ ದೂರು

ಆದ್ರೆ, ಈ ಯುವತಿಯ ಸಹಾಯಕ್ಕೆ ಯಾವೊಬ್ಬ ಮಹಿಳಾ ರಕ್ಷಣೆ ಇಲಾಖೆಯ ಅಧಿಕಾರಿಗಳಾಗಲೀ, ಪೊಲೀಸರಾಗಲೀ ಬಂದಿಲ್ಲ ಅನ್ನೋದು ಗ್ರಾಮಸ್ಥರ ಆರೋಪ. ಹಾವೇರಿ ಜಿಲ್ಲೆಯಿಂದ ತನ್ನ ಪ್ರಿಯತಮನನ್ನು ಹುಡುಕಿಕೊಂಡು ಬಂದಿರೋ ಯುವತಿಗೆ ರಕ್ಷಣೆ ಬೇಕಿದೆ. ತಪ್ಪು, ಸರಿ ಅದೇನೇ ಇದ್ದರೂ ಯುವತಿಗೆ ಪೊಲೀಸರು ರಕ್ಷಣೆ ಒದಗಿಸಬೇಕಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಯುವತಿಗೆ ನೆರವಿಗೆ ಬರಬೇಕಿದೆ.

Latest Videos
Follow Us:
Download App:
  • android
  • ios