Bengaluru: 6 ವರ್ಷದ ಪ್ರೀತಿಗೆ ಬ್ರೇಕ್ ಬಿದ್ದಿದ್ದಕ್ಕೆ ಪ್ರಿಯತಮ ಆತ್ಮಹತ್ಯೆ

ಆರು ವರ್ಷದ ಪ್ರೀತಿಗೆ ಬ್ರೇಕ್ ಬಿದ್ದಿದ್ದಕ್ಕೆ ಪ್ರಿಯತಮ ಆತ್ಮಹತ್ಯೆ ಘಟನೆ ಬೆಂಗಳೂರಿನ ಉಲ್ಲಾಳ ಉಪನಗರದಲ್ಲಿ ನಡೆದಿದೆ. ರೋಹಿತ್ (25) ಮೃತ ಯುವಕ. ಕೊರಿಯರ್ ಕಂಪನಿ ಒಂದರಲ್ಲಿ ಕೆಲಸ ಮಾಡ್ತಿದ್ದ ರೋಹಿತ್, ಕಳೆದ ಆರು ವರ್ಷಗಳಿಂದ ಯುವತಿಯನ್ನ ಲವ್ ಮಾಡ್ತಿದ್ದ.

love breakup the young man committed suicide in bengaluru gvd

ಬೆಂಗಳೂರು (ಜ.19): ಆರು ವರ್ಷದ ಪ್ರೀತಿಗೆ ಬ್ರೇಕ್ ಬಿದ್ದಿದ್ದಕ್ಕೆ ಪ್ರಿಯತಮ ಆತ್ಮಹತ್ಯೆ ಘಟನೆ ಬೆಂಗಳೂರಿನ ಉಲ್ಲಾಳ ಉಪನಗರದಲ್ಲಿ ನಡೆದಿದೆ. ರೋಹಿತ್ (25) ಮೃತ ಯುವಕ. ಕೊರಿಯರ್ ಕಂಪನಿ ಒಂದರಲ್ಲಿ ಕೆಲಸ ಮಾಡ್ತಿದ್ದ ರೋಹಿತ್, ಕಳೆದ ಆರು ವರ್ಷಗಳಿಂದ ಯುವತಿಯನ್ನ ಲವ್ ಮಾಡ್ತಿದ್ದ. ಆದರೆ ಕೊನೆ ಬಾರಿ ಭೇಟಿಯಾದಾಗ ಇಬ್ಬರ ನಡುವೆ ಜಗಳವಾಗಿದ್ದು, ಈ ವೇಳೆ ಇನ್ನು ಪ್ರೀತಿ ಬೇಡ ನಾವು ಬ್ರೇಕಪ್ ಮಾಡಿಕೊಳ್ಳುವ ಎಂದು ಗಲಾಟೆ ಮಾಡಿಕೊಂಡಿದ್ದಾರೆ. ಇದರಿಂದ ಮನನೊಂದು ಮನೆಯಲ್ಲಿ ನೇಣುಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ನಿಯಿಂದ ಮಾನಸಿಕ ಕಿರುಕುಳ: ಪತಿ ಆತ್ಮಹತ್ಯೆ: ಪತ್ನಿ, ಪತ್ನಿಯ ಕುಟುಂಬದವರ ಮಾನಸಿಕ ಹಾಗೂ ದೈಹಿಕ ಕಿರುಕುಳದಿಂದ ಬೇಸತ್ತ ಗಂಡನೋರ್ವ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲಾರ ತಾಲೂಕಿನ ಕ್ಯಾಲನೂರು ಕ್ರಾಸ್‌ ಬಳಿ ನಡೆದಿದೆ. ತಾಲೂಕಿನ ದಿನ್ನೆಹೊಸಹಳ್ಳಿಯ ಮಂಜುನಾಥ್‌ (35) ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿ. ಇದೀಗ ಪತ್ನಿ ಸೌಂದರ್ಯ, ಮಾವ ಮುನಿಸ್ವಾಮಿ, ಅತ್ತೆ ಶ್ಯಾಮಲಮ್ಮ ಹಾಗೂ ಪತ್ನಿಯ ಮಾವ ರಾಜೇಶ್‌ ವಿರುದ್ದ ಮಂಜುನಾಥ್‌ ತಂದೆ ರೆಡ್ಡಪ್ಪ ನೀಡಿದ ದೂರಿನ ಮೇರೆಗೆ ವೇಮಗಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂತ್ರಿಗಿರಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ, ನಾನು ಬಿಜೆಪಿ ಬಿಡಲ್ಲ: ರಮೇಶ್‌ ಜಾರಕಿಹೊಳಿ

ಕೋಲಾರ ತಾಲೂಕಿನ ದಿನ್ನೆಹೊಸಹಳ್ಳಿಯ ಮಂಜುನಾಥ್‌, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ತಾವರೆಕೆರೆ ಸೌಂದರ್ಯರನ್ನ ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಪತ್ನಿ ಸೌಂದರ್ಯ ತನ್ನ ತಂದೆ, ತಾಯಿ ಹಾಗೂ ಮಾವನ ಮಾತು ಕೇಳಿಕೊಂಡು ಈಗಲೇ ಮಗು ಬೇಡ ಗರ್ಭಪಾತ ಮಾಡಿಸಿಕೊಳ್ಳುತ್ತೇನೆ ಅಂತ ಗಂಡನಿಗೆ ತಿಳಿಸಿದ್ದಾಳೆ. ಆಗ ಗಂಡ ಮಂಜುನಾಥ್‌ ಗರ್ಭಪಾತ ಮಾಡಿಸುವುದು ಬೇಡ ಅಂತ ಪತ್ನಿಗೆ ಬುದ್ದಿವಾದ ಹೇಳಿದ್ದಾನೆ. ಆದರೆ ಪತ್ನಿ ಸೌಂದರ್ಯ ಗಂಡ ಮಂಜುನಾಥ್‌ ನನಗೆ ಕಿರುಕುಳ ನೀಡುತ್ತಿದ್ದಾನೆ ಅಂತ ಸುಳ್ಳು ದಾಖಲಿಸಿ, ಗಂಡನ ಬೆದರಿಕೆ ಹಾಕಿ, ಅನುಮತಿ ಪಡೆಯದೆ ಗರ್ಭಪಾತ ಮಾಡಿಸಿಕೊಂಡು ತವರು ಮನೆ ಸೇರಿಕೊಂಡಿದ್ದಾರೆ.

ಉತ್ತಮ ಕಾರ್ಯಕ್ರಮ ಕೊಡದಿದ್ದರೆ 2028ರಲ್ಲಿ ಜೆಡಿಎಸ್‌ ಪಕ್ಷ ವಿಸರ್ಜನೆ: ಎಚ್‌ಡಿಕೆ

ಇದರಿಂದ ಮನನೊಂದ ಮಂಜುನಾಥ್‌ ಜ.10 ರಂದು ಕೋಲಾರ ತಾಲೂಕಿನ ಕ್ಯಾಲನೂರು ಕ್ರಾಸ್‌ ಬಳಿ ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಕೂಡಲೇ ಮಂಜುನಾಥ್‌ ಕುಟುಂಬದವರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಕೊಡಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಜುನಾಥ್‌ ಜ.17 ರಂದು ಮೃತಪಟ್ಟಿದ್ದಾನೆ. ಪತ್ನಿ ಸೌಂದರ್ಯ, ಮಾವ ಮುನಿಸ್ವಾಮಿ, ಅತ್ತೆ ಶ್ಯಾಮಲಮ್ಮ, ಪತ್ನಿಯ ಮಾವ ರಾಜೇಶ್‌ ಅವರು ಮಂಜುನಾಥ್‌ ಅವರನ್ನ ಕೊಲೆ ಮಾಡಿ ಆತ್ಮಹತ್ಯೆಯ ಕಥೆ ಸೃಷ್ಟಿಸಿದ್ದಾರೆ ಅಂತಾ ಆರೋಪಿಸಿ ಮಂಜುನಾಥ್‌ ತಂದೆ ವೇಮಗಲ್‌ ಪೊಲೀಸ್‌ ಠಾಣೆಯಲ್ಲಿ ನಾಲ್ವರು ವಿರುದ್ದ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ವೇಮಗಲ್‌ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Latest Videos
Follow Us:
Download App:
  • android
  • ios