ಮುಂಬೈ (ಫೆ. 06)  ಆ ಬಂಗಲೆ ಮೇಲೆ ದಾಳಿ ಮಾಡಿದ್ದ ಪೊಲೀಸರೆ ಬೆಚ್ಚಿ ಬಿದ್ದಿದ್ದರು. ಒಳಗೆ ಪೋರ್ನ್ ಶೂಟಿಂಗ್ ಸಲೀಸಾಗಿ ಸಾಗಿತ್ತು.

ಮಲಾದ್  ದ್ವೀಪ ಪ್ರದೇಶದ ಬಂಗಲೆಯೊಂದರಲ್ಲಿ ಪೋರ್ನ್ ಶೂಟಿಂಗ್ ನಡೆಯುತ್ತಿತ್ತು. ಈ ಜಾಲವನ್ನು ಮುಂಬೈ ಪೊಲೀಸರು ಪತ್ತೆ ಮಾಡಿದ್ದಾರೆ.

ಇಬ್ಬರು ಮಹಿಳೆಯರು ಸೇರಿದಂತೆ ಪ್ರೊಡಕ್ಷನ್ ಹೌಸ್‌ನ ಐವರನ್ನು  ಬಂಧಿಸಿದ್ದಾರೆ. ಒಬ್ಬ ಮಹಿಳೆ ಪೋಟೋಗ್ರಾಫರ್ ಮತ್ತು ಇನ್ನೊಬ್ಬ ಮಹಿಳೆ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು. ಓಲ್ಡ್ ಫೆರ್ರಿ ಮಾರ್ಗದಲ್ಲಿರುವ ಗ್ರೀನ್ ಪಾರ್ಕ್ ಬಂಗಲೆಯಲ್ಲಿ ಶೂಟಿಂಗ್ ನಡೆಯುತ್ತಿತ್ತು.

'ಹುಡುಗರಿಗೆ ಪೋರ್ನ್ ನೋಡಿ ಎಂದು ಸಲಹೆ ಕೊಟ್ಟಳು'

ಇದು ಕೇವಲ ಒಂದು ಸ್ಯಾಂಪಲ್ ಆಗಿದ್ದು ಇಲ್ಲಿನ ಎಲ್ಲ ಬಂಗಲೆಗಳಲ್ಲಿಯೂ ಇಂಥ ಕೆಲಸ ನಡೆಯುತ್ತದೆ ಎನ್ನಲಾಗಿದೆ.  ಸಿನಿಮಾ ಇಂಡಸ್ಟ್ರಿಯಲ್ಲಿ ಬ್ರೇಕ್ ನೀಡುತ್ತವೇ..ಶೂಟಿಂಗ್ ಇದೆ ಎಂದು ಯುವತಿಯರನ್ನು ನಂಬಿಸಿ ಇಲ್ಲಿಗೆ ಕರೆದುಕೊಂಡು ಬರಲಾಗುತ್ತಿತ್ತು. ಪೊಲೀಸರು 25 ವರ್ಷದ ಯುವತಿಯನ್ನು ರಕ್ಷಿಸಿ  ಆಶ್ರಯ ಕಲ್ಪಿಸಿಕೊಡಲಾಗಿದೆ.

ಮೋಸ, ಅಶ್ಲೀಲ ಕೃತ್ಯಗಳಲ್ಲಿ ತೊಡಗಿರುವುದು, ಅಶ್ಲೀಲ ಪುಸ್ತಕಗಳು ಅಥವಾ ಸಾಹಿತ್ಯವನ್ನು ಸಾರ್ವಜನಿಕವಾಗಿ ಪ್ರಸಾರ ಮಾಡುವುದು ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಗಾಗಿ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.  ಪ್ರೊಡಕ್ಷನ್ ಹೌಸ್‌ನ ಬ್ಯಾಂಕ್ ಖಾತೆಯನ್ನು ಸೀಜ್  ಮಾಡಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಪ್ರಕಾಶ್ ಜಾಧವ್ ತಿಳಿಸಿದ್ದಾರೆ.

ಯುವತಿಯರನ್ನು ಶೂಟಿಂಗ್ ಇದೆ ಎಂದು ನಂಬಿಸಿ ಕರೆದುಕೊಂಡು ಹೋಗಲಾಗುತ್ತಿತ್ತು. ಒಪ್ಪಂದಕ್ಕೆ ಸಹಿ ಮಾಡಿಸಿಕೊಂಡು ಬಲಾತ್ಕಾರಯುತವಾಗಿ ಅಶ್ಲೀಲ ದೃಶ್ಯದಲ್ಲಿ ಕಾಣಿಸಿಕೊಳ್ಲುವಂತೆ ಮಾಡುತ್ತಿದ್ದರು. ಒಪ್ಪಿಕೊಂಡವರಿಗೆ 5,000 ರಿಂದ 15,000 ರೂ. ಹಣವನ್ನು ಕಿರಾತಕರು  ನೀಡುತ್ತಿದ್ದರು. 

ಪೊಲೀಸರು ವಾಟ್ಸಾಪ್ ಚಾಟ್ ಮತ್ತು ಆರೋಪಿಗಳ ಬ್ಯಾಂಕ್ ಖಾತೆ ವಿವರಗಳನ್ನು ಸ್ಕ್ಯಾನ್ ಮಾಡಿದ್ದು, ಕನಿಷ್ಠ ಒಂದೂವರೆ ವರ್ಷಗಳಿಂದ ಈ ದಂಧೆ ನಡೆಯುತ್ತಿರಬಹುದು ಎಂದು ಹೇಳಿದ್ದಾರೆ.