* ಬೆಂಗಳೂರಿನ ವಿ.ವಿ.ಪುರದಲ್ಲಿ ನಡೆದ ಘಟನೆ* ಬಿಎಂಎಸ್ ಕಾನೂನು ಕಾಲೇಜಿನ ವಿದ್ಯಾರ್ಥಿ ಪ್ರಮೋದ್ ಮೃತ ದುರ್ದೈವಿ* ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ
ಬೆಂಗಳೂರು(ಏ.11): ಜೀವನದಲ್ಲಿ ಜಿಗುಪ್ಸೆಗೊಂಡು ಖಾಸಗಿ ಕಾನೂನು ಕಾಲೇಜಿನ ವಿದ್ಯಾರ್ಥಿಯೊಬ್ಬ(Student) ಹಾಸ್ಟೆಲ್‌ನಲ್ಲಿ ಆತ್ಮಹತ್ಯೆಗೆ(Suicide) ಶರಣಾಗಿರುವ ಘಟನೆ ವಿ.ವಿ.ಪುರದಲ್ಲಿ ನಡೆದಿದೆ. ವಿ.ವಿ.ಪುರದ ಬಿಎಂಎಸ್ ಕಾನೂನು ಕಾಲೇಜಿನ ವಿದ್ಯಾರ್ಥಿ ಪ್ರಮೋದ್ (19) ಮೃತ(Death) ದುರ್ದೈವಿ. ಕಾಲೇಜಿನ ಹಾಸ್ಟೆಲ್‌ನಲ್ಲಿ ಶುಕ್ರವಾರ ಮಧ್ಯಾಹ್ನ ನೇಣು ಬಿಗಿದುಕೊಂಡು ಪ್ರಮೋದ್ ಆತ್ಮಹತ್ಯೆ ಮಾಡಿಕೊಂಡಿದ್ದು, ಕೆಲ ಹೊತ್ತಿನ ಬಳಿಕ ಮೃತನ ಕೊಠಡಿಗೆ ಆತನ ಸ್ನೇಹಿತರು ಬಂದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು(Police) ತಿಳಿಸಿದ್ದಾರೆ.
ಬಿಎಂಎಸ್ ಕಾನೂನು ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದ ಪ್ರಮೋದ್, ವಿ.ವಿ.ಪುರದಲ್ಲಿದ್ದ ಕಾಲೇಜಿನ ಹಾಸ್ಟೆಲ್‌ನಲ್ಲಿ ತಂಗಿದ್ದ. ಆ ಕೋಣೆಯಲ್ಲಿ ಆತನೊಂದಿಗೆ ಮತ್ತೆ ಮೂವರು ನೆಲೆಸಿದ್ದರು. ಬೆಳಗ್ಗೆ ಸಹಪಾಠಿಗಳು ಕಾಲೇಜಿಗೆ ತೆರಳಿದ ಬಳಿಕ ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆಗೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ವಿ.ವಿ.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Gadag: ಜೈಲಲ್ಲಿ ಫೋನ್ ಸಮಸ್ಯೆ: ಜಾಮೀನು ಸಿಕ್ಕ ವಿಷಯ ತಿಳಿಯದೆ ಕೈದಿ ಆತ್ಮಹತ್ಯೆ..!
ರೈತನಿಂದ ನಿಂದನೆ: ನೊಂದ ಕುರಿಗಾಯಿ ಆತ್ಮಹತ್ಯೆ
ಚಳ್ಳಕೆರೆ: ಜಮೀನಿನಲ್ಲಿ ಬೆಳೆದಿದ್ದ ಬೆಳೆ ಕುರಿಗಳು ಮೇಯ್ದಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಿನ್ನೆಲೆಯಲ್ಲಿ ನೊಂದ ಕುರಿಗಾಯಿ ಈರಣ್ಣ ನಗರಂಗೆರೆ ಚನ್ನಬಸಪ್ಪ ಎಂಬುವವರ ಹೊಲದಲ್ಲಿದ್ದ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಈರಣ್ಣನನ್ನು ನಿಂದಿಸಿದ ಅಭಿ ಎಂಬುವರ ವಿರುದ್ದ ಪತ್ನಿ ಕವಿತಮ್ಮ ಚಳ್ಳಕೆರೆ ಪೊಲೀಸರಿಗೆ ದೂರು ನೀಡಿದ್ದಾರೆ. ತಾಲೂಕಿನ ಡಿ.ಉಪ್ಪಾರಹಟ್ಟಿಗ್ರಾಮದ ಈರಣ್ಣ (30) ಪ್ರತಿನಿತ್ಯ ತನ್ನ ಕುರಿ ಸುತ್ತಮುತ್ತಲ ಗೋಮಾಳದಲ್ಲಿ ಮೇಯಿಸುತ್ತಿದ್ದರು. ಶನಿವಾರ ಬೆಳಗ್ಗೆ 10ರ ಸಮಯದಲ್ಲಿ ಆದರ್ಶ ಶಾಲೆ ಪಕ್ಕದಲ್ಲಿರುವ ಜಮೀನಿಗೆ ನುಗ್ಗಿದ ಕುರಿಗಳು ಟೊಮೆಟೋ ಬೆಳೆ ತಿಂದು ಹಾಕಿವೆ. ಜಾನಮ್ಮನಹಳ್ಳಿ ರೈತ ಅಭಿ ನೀನು ಕುರಿ ಬಿಟ್ಟು ಮೈಯಿಸಿದ್ದರಿಂದ ನನಗೆ 5 ಲಕ್ಷ ನಷ್ಟ ಉಂಟಾಗಿದೆ. ನನ್ನ ನಷ್ಟನೀನೆ ಕೊಡಬೇಕು. ಇಲ್ಲವಾದರೆ ನಿನ್ನ ಕುರಿ ನಾನು ಬಿಡುವುದಿಲ್ಲ, ನೀನು ಎಲ್ಲಿಯಾದರೂ ಹೋಗಿ ಸಾಯಿ ಎಂದು ಅವಾಚ್ಯಶಬ್ದಗಳಿಂದ ನಿಂತಿಸಿದ್ದು ನೊಂದ ಈರಣ್ಣ ನಾಪತ್ತೆಯಾಗಿದ್ದಾರೆ(Missing).
ಸುದ್ದಿ ತಿಳಿದ ಪತ್ನಿ ಕವಿತಮ್ಮ, ಅತ್ತೆ ಈರಣ್ಣ, ಸಂಬಂಧಿ ಈರಣ್ಣ ನಷ್ಟದ ಬಾಬತ್ತು 25 ಸಾವಿರ ಹಣ ಕೊಡುವ ಭರವಸೆ ನೀಡಿ ಕುರಿ ಬಿಡಿಸಿಕೊಂಡು ಹೋಗಿದ್ದಾರೆ. ಭಾನುವಾರ ಚನ್ನಬಸಪ್ಪನವರ ಹೊಲದ ಬಾವಿ ಬಳಿ ಈರಣ್ಣನ್ನ ಒಂದು ಚಪ್ಪಲಿ ದಡದ ಮೇಲಿದ್ದು, ಮತ್ತೊಂದು ಚಪ್ಪಲಿ ನೀರಿನಲ್ಲಿ ತೇಲುತ್ತಿತ್ತು. ಕವಿತಮ್ಮ ಮತ್ತು ಸಂಬಂಧಿಕರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಪಡೆ ಸಿಬ್ಬಂದಿ ಶವ ಹೊರ ತೆಗೆದಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಪರಿಚಿತದಿಂದ ಅಶ್ಲೀಲ ಫೋಟೋ ಕಿರುಕುಳ: ಯುವತಿ ಆತ್ಮಹತ್ಯೆ
ಶಿರಾಳಕೊಪ್ಪ: ಅಪರಿಚಿತ ವ್ಯಕ್ತಿಯೊಬ್ಬ ಇನ್‌ಸ್ಟಾಗ್ರಾಮ್(Instagram) ಖಾತೆಗೆ ಅಶ್ಲೀಲ ಪೋಟೋ ಹಾಕು ಎಂದು ಇನ್‌ಸ್ಟಾಗ್ರಾಮ್ ಖಾತೆ ಹೊಂದಿದ್ದ ಯುವತಿಗೆ ವಿಡಿಯೋಕಾಲ್ ಮಾಡಿ ಬ್ಲಾಕ್ ಮೇಲೆ(Blakmail)ಮಾಡಿದ ಹಿನ್ನೆಲೆ ಮನನೊಂದು ಯುವತಿ ನೇಣಿಗೆ ಶರಣಾದ ಘಟನೆ ಏ.6ರಂದು ಸಂಜೆ ಶಿರಾಳಕೊಪ್ಪ ಹತ್ತಿರದ ತೊಗರ್ಸಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೆ(Suicide) ಶರಣಾದ ಯುವತಿಯನ್ನು ಸುಮಾ ಎಂದು ಗುರುತಿಸಲಾಗಿದೆ. ಮೇಲಿಂದ ಮೇಲೆ ಇಂತಹ ವೀಡಿಯೋ ಕಾಲ್ ಮಾಡಿ ಯುವತಿಗೆ ನಿನ್ನ ಅಶ್ಲೀಲ ಚಿತ್ರವನ್ನು ಇನ್‌ಸ್ಟಾಗ್ರಾಮ್ ಖಾತೆಗೆ ಹಾಕು, ಇಲ್ಲವಾದರೆ ನಿನ್ನ ನಗ್ನ ಪೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಹೇಳಿ ಹೆದರಿಸಿದ್ದಾನೆ. ಅಪರಿಚಿತ ವ್ಯಕ್ತಿ ತನಗೆ ಕಿರುಕುಳ ಕೊಡುತ್ತಿರುವ ವಿಷಯವನ್ನು ಯುವತಿ ತನ್ನ ತಂದೆಗೆ ತಿಳಿಸಿದ್ದಾಳೆ.
ಮೆಟ್ರೋ ನಿಲ್ದಾಣದಿಂದ ಜಿಗಿದು ಎಂಬಿಎ ವಿದ್ಯಾರ್ಥಿನಿ ಆತ್ಮಹತ್ಯೆ
ತಂದೆ ಶಿವಾಜಪ್ಪ ಮಗಳಿಗೆ ಧೈರ್ಯ ಹೇಳಿ ಪೋಲೀಸ್ ಠಾಣೆಗೆ ದೂರು ನೀಡಿ, ಕಿಡಿಗೇಡಿಗೆ ತಕ್ಕ ಪಾಠ ಕಲಿಸೋಣ ಎಂದು ಹೇಳಿ ಸಿದ್ಧಳಾಗಿ ಬಾ ಎಂದಿದ್ದಾರೆ. ಆದರೆ ರೆಡಿಯಾಗಿ ಬರಲು ಬೆಡ್ ರೂಂಗೆ ಹೋದವಳು ಸಾಕಷ್ಟು ಸಮಯವಾದರೂ ಬರಲಿಲ್ಲ. ಆಗ ಸ್ವತಃ ತಂದೆ- ತಾಯಿ ಕೊಠಡಿಗೆ ಹೋಗಿ ನೋಡಿದಾಗ ಮಗಳು ಮರದ ಗಳಕ್ಕೆ ಸೀರೆಯಿಂದ ಕುತ್ತಿಗೆಗೆ ನೇಣು ಹಾಕಿಕೊಂಡಿದ್ದಳು. ಇದರಿಂದ ಗಾಬರಿಗೊಂಡ ಪೋಷಕರು ಅಕ್ಕಪಕ್ಕದವರನ್ನು ಕೂಗಿ ಕರೆದು ಕುತ್ತಿಗೆಯ ನೇಣುಬಿಚ್ಚಿ ತಕ್ಷಣ ಶಿರಾಳಕೊಪ್ಪ ಸರ್ಕಾರಿ ಆಸ್ಪತ್ರೆಗೆ ಕರೆತಂದು ವೈದ್ಯರಿಗೆ ತೋರಿಸಿದರು. ಪರಿಶೀಲಿಸಿದ ವೈದ್ಯರ ತಮ್ಮ ಮಗಳು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮನನೊಂದ ತಂದೆ ಶಿವಾಜಪ್ಪ ಅವಳಿಗೆ ಹೆದರಿಸಿ ಮಾನಸಿಕ ಹಿಂಸೆ ನೀಡಿದ್ದ ಹಿನ್ನೆಲೆ ಅವಳು ನೇಣು ಹಾಕಿಕೊಂಡು ಮೃತಪಟ್ಟಿದ್ದಾಳೆ, ಮಗಳ ಸಾವಿಗೆ ಕಾರಣನಾದ ಅಪರಿಚಿತನಾಧ ಇನ್‌ಸ್ಟಾಗ್ರಾಮ್ ಖಾತೆಯ ವ್ಯಕ್ತಿ ಮೇಲೆ ವಿರುದ್ಧ ಲಿಖಿತ ದೂರು ನೀಡಿ, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
