Ramanagara ಕೋಟ್ಯಾಂತರ ರೂ ಮೌಲ್ಯದ ಭೂಮಿಯನ್ನ ಕಬಳಿಸಲು ಹುನ್ನಾರ, 6 ಮಂದಿ ಅಂದರ್!
ರಾಮನಗರ ಜಿಲ್ಲೆಯಲ್ಲಿ ಇಂಚಿಂಚೂ ಭೂಮಿಗೂ ಬಂಗಾರದ ಬೆಲೆ ಇದೆ. ಇದೀಗ ಕೋಟ್ಯಾಂತರ ರೂ ಬೆಲೆಬಾಳುವ ಆರೂವರೆ ಎಕರೆ ಜಮೀನಿನ ಆರ್ ಟಿಸಿ(ಪಹಣಿ)ಯನ್ನ ಆಕ್ರಮವಾಗಿ ಸೃಷ್ಠಿಸಿ ಇದೀಗ 6 ಮಂದಿ ಪೊಲೀಸರ ಅತಿಥಿಯಾಗಿದ್ದಾರೆ.
ವರದಿ: ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್,
ರಾಮನಗರ (ಸೆ.15): ಸಿಲಿಕಾನ್ ಸಿಟಿ ಬೆಂಗಳೂರಿನ ಪಕ್ಕದಲ್ಲೇ ಇರೋ ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಇಂಚಿಂಚೂ ಭೂಮಿಗೂ ಬಂಗಾರದ ಬೆಲೆ ಇದೆ. ಅದರಲ್ಲೂ ಒಂದು ಎಕರೆ ಜಮೀನಿಗೆ ಕೋಟ್ಯಾಂತರ ರೂ ದರವಿದೆ. ಹೀಗಾಗಿ ಸರ್ಕಾರಿ ಜಮೀನುಗಳನ್ನ ಕಬಳಿಸಲು ಹಲವರು, ಹೊಂಚು ಹಾಕಿ ಕುಳಿತಿರುತ್ತಾರೆ. ಅದೇ ರೀತಿ ಕೋಟ್ಯಾಂತ ರೂ ಬೆಲೆಬಾಳುವ ಆರೂವರೆ ಎಕರೆ ಜಮೀನಿನ ಆರ್ ಟಿಸಿ(ಪಹಣಿ)ಯನ್ನ ಆಕ್ರಮವಾಗಿ ಸೃಷ್ಠಿಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಸರ್ಕಾರಿ ನಿಯಮಗಳನ್ನ ಗಾಳಿಗೆ ತೂರಿ ಆಕ್ರಮವಾಗಿ ಪಹಣಿ ಮಂಜೂರು ಮಾಡಿ, ಕೋಟ್ಯಾಂತರ ರೂ ಮೌಲ್ಯದ ಭೂಮಿಯನ್ನ ಕಬಳಿಸಲು ಮುಂದಾಗಿದ್ದ ರೈತ ಹಾಗೂ ಅದಕ್ಕೆ ಸಹಾಯ ಮಾಡಿದ ಬ್ರೋಕರ್ ಗಳು, ಸರ್ಕಾರಿ ಅಧಿಕಾರಿಗಳು ಇದೀಗ ರಾಮನಗರ ಪೊಲೀಸರ ಅತಿಥಿಗಳಾಗಿದ್ದಾರೆ. ಅಂದ ಹಾಗೆ ರಾಮನಗರ ಜಿಲ್ಲೆ, ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿ ಇದೆ. ಜಿಲ್ಲೆಯಲ್ಲಿ ಇಂಚಿಂಚೂ ಭೂಮಿಗೂ ಬಂಗಾರದ ಬೆಲೆ. ರಿಯಲ್ ಎಸ್ಟೇಟ್ ಮಾಫಿಯಾ ಜೋರಾಗಿದೆ. ಒಂದೂ ಎಕರೆ ಜಮೀನಿಗೆ ಕಡಿಮೆ ಅಂದರೂ ಒಂದೂ ಕೋಟಿ ರೂ ಮೌಲ್ಯವಿದೆ. ಹೀಗಾಗಿ ಸರ್ಕಾರಿ ಗೋಮಾಳಗಳ ಮೇಲೆ ಸಾಕಷ್ಟು ಜನರ ಕಣ್ಣಿದೆ. ಅದೇ ರೀತಿ ಕೋಟ್ಯಾಂತರ ರೂ ಮೌಲ್ಯದ ಜಮೀನಿನಗಳನ್ನ ಕಬಳಿಸಲು ಮುಂದಾಗಿದ್ದ ಹಾಗೂ ಅದಕ್ಕೆ ಸಹಕಾರ ನೀಡಿದ ಖತರ್ನಾಕ್ ಗಳನ್ನ ಇದೀಗ ರಾಮನಗರ ಸಿಇಎನ್ ಠಾಣೆ ಪೊಲೀಸರು ಎಡೆಮೂರಿ ಕಟ್ಟಿದ್ದಾರೆ.
ಅಂದಹಾಗೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಬನ್ನಿಕುಪ್ಪೆ ಗ್ರಾಮದ ಸರ್ವೆ ನಂಬರ್ 170, ತುಂಗಣಿ ಗ್ರಾಮದ ಸರ್ವೆ ನಂಬರ್ 174, ರಾಂಪುರ ಗ್ರಾಮದ ಸರ್ವೆ ನಂಬರ್ 148ರಲ್ಲಿ ಒಟ್ಟು ಆರೂವರೆ ಎಕರೆ ಜಮೀನು ನಾಗರಾಜ್, ಮಹದೇವಯ್ಯ, ಮಾದಯ್ಯ, ದುಂಡಮ್ಮ, ಜಯಮ್ಮ, ಟಿಡಿ ಶಿವರಾಜು ಎಂಬುವವರ ಹೆಸರಿಗೆ 2019-20 ಪಹಣಿ ಆಗಿದೆ. ಆದರೆ ಇದನ್ನ ಯಾವುದೇ ಸಂಬಂಧಪಟ್ಟ ಅಧಿಕಾರಿಗಳು ಮಂಜೂರು ಮಾಡಿಲ್ಲ. ಈ ಬಗ್ಗೆ ಸ್ಥಳೀಯ ವಿಎ ಗಮನಕ್ಕೆ ಬಂದಿದೆ.
ಹೀಗಾಗಿ ಜಿಲ್ಲಾಧಿಕಾರಿಗಳ ಗಮನಕ್ಕೆ ವಿಎ ಒಬ್ಬರು ತಂದಿದ್ದಾರೆ. ಆನಂತರ ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ಕ್ರಮ ತೆಗೆದುಕೊಳ್ಳುವಂತೆ ರಾಮನಗರ ಉಪವಿಭಾಗಾಧಿಕಾರಿ ಮಂಜುನಾಥ್, ರಾಮನಗರ ಸಿಇಎನ್ ಠಾಣೆಗೆ ಸೆಪ್ಟೆಂಬರ್ 14ರಂದು ದೂರು ನೀಡಿದ್ರು. ದೂರಿನ ಅನ್ವಯ ಪೊಲೀಸರು ಕನಕಪುರ ತಾಲೂಕಿನ ಚಿಕ್ಕಮುದವಾಡಿ ಗ್ರಾಮದ ಚಿಕ್ಕಮರಿಗೌಡ, ರಿಯಲ್ ಎಸ್ಟೇಟ್ ಏಜೆಂಟ್ ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಹಾರ್ಡ್ ವೇರ್ ಇಂಜನಿಯರ್ ಗಳಾದ ರಾಘವಮೂರ್ತಿ, ಅರುಣ್ ಕುಮಾರ್, ಕನಕಪುರ ನಿವಾಸಿ ಬ್ರೋಕರ್ ನಂದೀಶ್, ಕನಕಪುರ ನಗರಭೆ ಉಪಾಧ್ಯಕ್ಷ, ಸೈಬರ್ ಶಾಪ್ ನ ಮಾಲೀಕ ರಾಮದುರ್ಗಯ್ಯ ಸೇರಿ ಏಳು ಜನ ಆರೋಪಿಗಳನ್ನ ಬಂಧಿಸಿದ್ದಾರೆ.
ಅಂದಹಾಗೆ ಯಾವುದೇ ಒಬ್ಬ ರೈತನ ಹೆಸರಿಗೆ ಪಹಣಿ ಮಂಜೂರು ಆಗಬೇಕಾದರೆ ಸಾಕಷ್ಟು ನಿಮಯಗಳು ಇವೆ. ಆತ ಗೋಮಾಳ ಜಮೀನಿನಲ್ಲಿ ಅನುಭವದಲ್ಲಿ ಇರಬೇಕು. ಆನಂತರ ಫಾರ್ಂ 57 ಅರ್ಜಿ ಹಾಕಿ ಭೂಮಿ ಮಂಜೂರು ಮಾಡುವಂತೆ ಸಂಬಂಧಪಟ್ಟ ತಾಲೂಕು ಆಡಳಿತಕ್ಕೆ ಮನವಿ ಮಾಡಬೇಕು. ಆನಂತರ ಅದನ್ನ ಪರಿಶೀಲನೆ ಮಾಡಿ, ಆನಂತರ ಆತನಿಗೆ ಸಾಗವಳಿ ಪತ್ರ ಮಂಜೂರು ಆಗುತ್ತದೆ. ಆನಂತರ ತಹಶೀಲ್ದರ್, ಆರ್ ಐ, ವಿಎ, ಶಿರಸ್ತೇಧಾರ್ ಅವರು ಪರಿಶೀಲನೆ ಮಾಡಿ, ಅವರು ಡಿಜಿಟಲ್ ಸಹಿ ಮಾಡಿದ ನಂತರ ಪಹಣಿ ಮಂಜೂರು ಆಗುತ್ತದೆ. ಭೂಮಿ ತಂತ್ರಾಂಶದ ಮೂಲಕವೇ ಇದನೆಲ್ಲ ಪಡೆಯಬೇಕು. ಅಲ್ಲದೆ ಪಹಣಿಯಲ್ಲಿ ಯಾವ ರೀತಿ ಮಂಜೂರಾಗಿದೆ ಎಂಬುದನ್ನ ಎಮ್ ಆರ್ ನಲ್ಲಿ ನಮೂದು ಆಗಿರುತ್ತದೆ.
ಆದರೆ ಈ ಯಾವ ಅಂಶಗಳನ್ನು ಕೂಡ ಫಾಲೋ ಮಾಡದೇ ರೈತರಾದ ನಾಗರಾಜ್, ಮಹದೇವಯ್ಯ, ಮಾದಯ್ಯ, ದುಂಡಮ್ಮ, ಜಯಮ್ಮ, ಟಿಡಿ ಶಿವರಾಜು ಎಂಬುವವರಿಂದ ತಲಾ ಐದು ಲಕ್ಷ ರೂ ಪಡೆದು ಚಿಕ್ಕಮರಿಗೌಡ, ನರಸಿಂಹಮೂರ್ತಿ, ರಾಘವಮೂರ್ತಿ, ಅರುಣ್ ಕುಮಾರ್, ಕನಕಪುರ ನಂದೀಶ್, ಸೈಬರ್ ಶಾಪ್ ನ ಮಾಲೀಕ ರಾಮದುರ್ಗಯ್ಯ ಸೇರಿ ಭೂಮಿ ತಂತ್ರಾಂಶದಲ್ಲಿಯೇ ಅಧಿಕಾರಿಗಳ ಡಿಜಿಟಲ್ ಸಹಿ ಪಡೆಯದೇ ಪಹಣಿಯನ್ನ ಮಾಡಿಕೊಟ್ಟಿದ್ದಾರೆ.
ಆಫ್ರಿಕನ್ ಚೀತಾಗಳ ಕರೆತರಲು ನಮೀಬಿಯಾ ತಲುಪಿದ ವಿಶೇಷ ವಿಮಾನ
ಹೀಗಾಗಿ ಅಧಿಕಾರಿಗಳಿಗೆ ಸಾಕಷ್ಟು ಅನುಮಾನ ಬಂದಿದೆ. ಇನ್ನು ಈ ಹಿಂದೆ ಕೂಡ ಆಕ್ರಮ ಖಾತೆ ವಿಚಾರ ಕೂಡ ಸಾಕಷ್ಟು ಸದ್ದು ಮಾಡಿತ್ತು. ಅದನ್ನ ಸಹಾ ಸೈಬರ್ ರಾಮು ಎಂಬಾತನ ತನ್ನ ಸೈಬರ್ ಶಾಪ್ ನಲ್ಲಿ ಮಾಡಿದ್ದ. ಇದೀಗ ಪಹಣಿಗಳನ್ನ ಸಹಾ ತನ್ನದೇ ಸೈಬರ್ ಶಾಪ್ ನಲ್ಲಿ ಮಾಡಿ ತಗಲಾಕಿಕೊಂಡಿದ್ದಾನೆ. ಇನ್ನು ಈ ಬಗ್ಗೆ ಪೊಲೀಸರು ಕೂಲಂಷುಶವಾಗಿ, ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದಾರೆ.
ಹೆದ್ದಾರಿಯಲ್ಲಿ ಅಟ್ಟಾಡಿಸಿದ ಗಜರಾಜ, ಬೆಟ್ಟಹತ್ತಿ ಕುಳಿತ ಮಾಜಿ ಸಿಎಂ, ವಿಡಿಯೋ ವೈರಲ್!
ಒಟ್ಟಾರೆ ಸರ್ಕಾರಿ ನಿಮಯಗಳನ್ನ ಗಾಳಿಗೆ ತೂರಿ ಅಧಿಕಾರಿಗಳ ಗಮನಕ್ಕೂ ಬಾರದೆ ಕೋಟ್ಯಾಂತರ ರೂ ಮೌಲ್ಯದ ಜಮೀನನ್ನ ಕಬಳಿಸಲು ನಕಲಿ ಪಹಣಿಗಳನ್ನ ಸೃಷ್ಠಿಸಿದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.ಪೊಲೀಸರು ಮತ್ತಷ್ಟು ತನಿಖೆಯಿಂದ ಇನ್ನಾಷ್ಟು ಸತ್ಯಾಸತ್ಯತೆ ಹೊರಬೀಳಲಿದ್ದು, ಮತ್ತಷ್ಟು ಜನ ಬಲೆಗೆ ಬೀಳಲಿದ್ದಾರೆ.