PM Narendra Modi Birthday: ಆಫ್ರಿಕನ್ ಚೀತಾಗಳ ಕರೆತರಲು ನಮೀಬಿಯಾ ತಲುಪಿದ ವಿಶೇಷ ವಿಮಾನ

PM Narendra Modi Birthday: ಬಹುನಿರೀಕ್ಷಿತ ಆಫ್ರಿಕಾ ಚೀತಾಗಳ ಭಾರತಾಗಮನಕ್ಕೆ ಕೊನೆಗೂ ಮುಹೂರ್ತ ನಿಗದಿಯಾಗಿರುವುದು ಹಳೆ ವಿಚಾರ ಹೊಸ ವಿಚಾರ ಏನೆಂದರೆ ಈ ಚೀತಾಗಳ ಆಗಮನಕ್ಕಾಗಿ ವಿಶೇಷವಾಗಿ B747 ಜಂಬೋ ಜೆಟ್ (jumbo jet) ವಿಮಾನವನ್ನು ನಿರ್ಮಿಸಲಾಗಿದ್ದು, ಅದು ಈಗಾಗಲೇ ನಮೀಬಿಯಾದ ರಾಜಧಾನಿ ತಲುಪಿದೆ.

specially customised B747 jumbo jet went to Namibian capital Windhoek to ferry eight cheetahs to India akb

ಬಹುನಿರೀಕ್ಷಿತ ಆಫ್ರಿಕಾ ಚೀತಾಗಳ ಭಾರತಾಗಮನಕ್ಕೆ ಕೊನೆಗೂ ಮುಹೂರ್ತ ನಿಗದಿಯಾಗಿರುವುದು ಹಳೆ ವಿಚಾರ ಹೊಸ ವಿಚಾರ ಏನೆಂದರೆ ಈ ಚೀತಾಗಳ ಆಗಮನಕ್ಕಾಗಿ ವಿಶೇಷವಾಗಿ B747 ಜಂಬೋ ಜೆಟ್ (jumbo jet) ವಿಮಾನವನ್ನು ನಿರ್ಮಿಸಲಾಗಿದೆ. ಈ ಜೆಟ್ ಭಾರತಕ್ಕೆ ವಿಶೇಷ ಆಫ್ರಿಕಾದ ಚೀತಾಗಳನ್ನು ಕರೆತರಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಸೆ.17ರಂದು ನಮೀಬಿಯಾ ಮೂಲದ ಚೀತಾಗಳು ಭಾರತಕ್ಕೆ ಬರಲಿವೆ. ಭಾರತಕ್ಕೆ ಬಂದ ದಿನವೇ ಎಲ್ಲಾ ಚೀತಾಗಳನ್ನು ಮಧ್ಯಪ್ರದೇಶ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಲಾಗುತ್ತಿದ್ದು, ಇದಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿ (Narendra Modi) ಚಾಲನೆ ನೀಡಲಿದ್ದಾರೆ.

ಇದಕ್ಕಾಗಿ ಎಲ್ಲಾ ಸಿದ್ಧತೆಗಳು ನಡೆದಿದ್ದು, ಈಗಾಗಲೇ ಈ B747 ಜಂಬೋ ಜೆಟ್ ವಿಮಾನ ಆಫ್ರಿಕಾ ಖಂಡದ ನಮೀಬಿಯಾ (Namibia) ದೇಶದ ರಾಜಧಾನಿ ವಿಂಡೆಕ್‌ಗೆ (Windhoek) ಹಾರಿದೆ. ಹುಲಿಗಳ ನಾಡಿಗೆ ಸದ್ಭಾವನಾ ರಾಯಭಾರಿಗಳನ್ನು ಕೊಂಡೊಯ್ಯಲು ವಿಶೇಷ ಹಕ್ಕಿಯೊಂದು ಧೈರ್ಯದ ನಾಡಿನ ಭೂಮಿಯನ್ನು ಸ್ಪರ್ಶಿಸಿದೆ ಎಂದು ಕಾವ್ಯಾತ್ಮಕವಾಗಿ ವಿಂಡ್‌ಹೋಕ್‌ನಲ್ಲಿರುವ ಭಾರತದ ಹೈಕಮಿಷನ್ ಬುಧವಾರ ಟ್ವೀಟ್ ಮಾಡಿದೆ.

ಅಂತರ್-ಖಂಡಾಂತರ ಸ್ಥಳಾಂತರ ಯೋಜನೆ ಅಡಿ ನಮೀಬಿಯಾದಿಂದ ಐದು ಹೆಣ್ಣು ಮೂರು ಗಂಡು ಸೇರಿ ಎಂಟು ಚೀತಾಗಳು ರಾಜಸ್ಥಾನದ (Rajasthan) ಜೈಪುರಕ್ಕೆ ಇವುಗಳನ್ನು ಕರೆತರಲೆಂದೇ ನಿರ್ಮಿಸಿದ ವಿಶೇಷ ವಿಮಾನದಲ್ಲಿ ಸೆಪ್ಟೆಂಬರ್ 17 ರಂದು ಆಗಮಿಸಲಿವೆ. ಅಲ್ಲಿಂದ ಅವುಗಳು ತಮ್ಮ ಹೊಸ ಆವಾಸ ಸ್ಥಾನಕ್ಕೆ ಪ್ರಯಾಣ ಬೆಳೆಸಲಿವೆ. ಅಲ್ಲಿಂದ ಮಧ್ಯಪ್ರದೇಶದ ಶಿಪುರ ಜಿಲ್ಲೆಯಲ್ಲಿರುವ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಅವುಗಳನ್ನು ಹೆಲಿಕಾಪ್ಟರ್ ಮೂಲಕ ಕರೆದೊಯ್ಯಲಾಗುತ್ತದೆ. 

ಈ ಚೀತಾಗಳನ್ನು ಪ್ರಧಾನಿ ನರೇಂದ್ರ ಮೋದಿ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ (Kuno National Park) ಬಿಡುಗಡೆ ಮಾಡಲಿದ್ದಾರೆ. ಆಫ್ರಿಕಾದ ಈ ಚೀತಾಗಳನ್ನು ಭಾರತಕ್ಕೆ ಕರೆತರುತ್ತಿರುವ ಈ ವಿಶೇಷ ವಿಮಾನದ ಮುಖ್ಯ ಕ್ಯಾಬಿನ್‌ನಲ್ಲಿ ಪಂಜರಗಳನ್ನು ಭದ್ರಪಡಿಸಲು ಸಾಧ್ಯವಾಗುವಂತೆ ಮಾರ್ಪಡಿಸಲಾಗಿದೆ . ಆದರೆ ಹಾರಾಟದ ಸಮಯದಲ್ಲಿ ಪಶುವೈದ್ಯರಿಗೆ ಈ ಚಿರತೆಗಳನ್ನು ಗಮನಿಸಲು ಪೂರ್ಣ ಅವಕಾಶವನ್ನು ನೀಡಲಾಗಿದೆ. ಈ ವಿಶೇಷ ಜೆಟ್ ವಿಮಾನಕ್ಕೆ ಹುಲಿಯ ಚಿತ್ರದ ಪೇಂಟಿಂಗ್ ಮಾಡಲಾಗಿದೆ.

ಮೋದಿ ಜನ್ಮದಿನದಂದೇ ಭಾರತಕ್ಕೆ ಆಫ್ರಿಕಾ ಚೀತಾ

ಇದು ಒಂದೇ ಹಾರಾಟದಲ್ಲಿ ಸುಮಾರು 16 ಗಂಟೆಗಳ ಕಾಲ ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿದ್ದು, ಇದು ತುಂಬಾ ದೂರ ಪ್ರಯಾಣ ಮಾಡಬಲ್ಲ ವಿಮಾನವಾಗಿದೆ, ಹೀಗಾಗಿ ಒಂದೇ ನೆಗೆತಕ್ಕೆ ಎಲ್ಲಿಯೂ ನಿಲ್ಲದೇ ನಮೀಬಿಯಾದಿಂದ ಸೀದಾ ಭಾರತಕ್ಕೆ ಈ ವಿಮಾನ ಹಾರಾಟ ನಡೆಸಲಿದೆ. ಇಂಧನ ತುಂಬಿಕೊಳ್ಳಲು ಕೂಡ ಇದು ಎಲ್ಲಿಯೂ ನಿಲ್ಲುವುದಿಲ್ಲ. ಚೀತಾಗಳ ಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಈ ವಿಶೇಷ ವಿಮಾನವನ್ನು ನಿರ್ಮಿಸಲಾಗಿದೆ. 

ಇನ್ನು ಈ ಚೀತಾಗಳು ತಮ್ಮ ಪ್ರಯಾಣದ ವೇಳೆ ಸಂಪೂರ್ಣ ಖಾಲಿ ಹೊಟ್ಟೆಯಲ್ಲಿ ಪ್ರಯಾಣ ಬೆಳೆಸಲಿವೆ ಎಂದು ಹಿರಿಯ ಭಾರತೀಯ ಅರಣ್ಯ ಇಲಾಖೆಯ ಸಿಬ್ಬಂದಿ ಹೇಳಿದ್ದಾರೆ. ಇಂತದೊಂದು ದೂರ ಪ್ರಯಾಣವೂ ಅವುಗಳಿಗೆ ವಾಂತಿ ತಲೆಸುತ್ತುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡುವ ಸಾಧ್ಯತೆ ಇರುವುದರಿಂದ ಅವುಗಳಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಖಾಲಿ ಹೊಟ್ಟೆಯಲ್ಲಿ ಅವುಗಳನ್ನು ಕರೆತರಲಾಗುತ್ತಿದೆ. ಈ ಮಾಂಸಹಾರಿ ಆಫ್ರಿಕಾನ್ ಚೀತಾ ಭಾರತದಲ್ಲಿ ಅಳಿದು ಹೋಗಿದೆ. 1947ರಲ್ಲಿ ಛತ್ತೀಸಗಢದ (Chhattisgarh) ಕೊರಿಯಾ ಜಿಲ್ಲೆಯಲ್ಲಿ (Koria district) ಕಟ್ಟ ಕಡೆ ಬಾರಿ ಆಫ್ರಿಕನ್ ಚೀತಾವನ್ನು ನೋಡಲಾಗಿತ್ತು. 1952ರಲ್ಲಿ ದೇಶದಿಂದ ಚೀತಾಗಳ ಸಂತತಿ ಅಳಿದು ಹೋಗಿದೆ ಎಂದು ಘೋಷಿಸಲಾಗಿತ್ತು.

ಆಪರೇಷನ್‌ ಚೀತಾ ಫೇಲ್‌: ಬೆಳಗಾವಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ, ಆತಂಕದಲ್ಲಿ ಜನತೆ..!

ಈ ಚೀತಾವೂ (ಪಾಂತೇರಾ ಪಾರ್ದೂಸ್) ಆಫ಼್ರಿಕಾ ಹಾಗೂ ಉಷ್ಣವಲಯ ಏಷ್ಯಾದ ಕೆಲವು ಭಾಗಗಳಲ್ಲಿ ಕಂಡು ಬರುತ್ತವೆ. ಸೈಬೀರಿಯಾ(Siberia), ದಕ್ಷಿಣ ಹಾಗೂ ಪಶ್ಚಿಮ ಏಷ್ಯಾದಿಂದ ಆಫ಼್ರಿಕಾದ ಉಪ ಸಹಾರಾ ಪ್ರದೇಶಗಳ ಬಹುಪಾಲು ಉದ್ದಗಲದವರೆಗಿನ ವ್ಯಾಪಕ ವ್ಯಾಪ್ತಿಯಲ್ಲಿರುವ ಫ಼ೆಲಿಡೈ (Felidae) ಕುಟುಂಬದ ಒಂದು ಸದಸ್ಯ ಪ್ರಾಣಿ ಇದಾಗಿದೆ. ಅವಾಸ ಸ್ಥಾನದ ನಾಶ ಹಾಗೂ ಛಿದ್ರೀಕರಣ, ಮತ್ತು ವ್ಯಾಪಾರ ಹಾಗೂ ಉಪಟಳ ನಿಯಂತ್ರಣಕ್ಕಾಗಿ ಬೇಟೆಯ ಕಾರಣದಿಂದ ಚೀತಾ ತನ್ನ ಆವಾಸ ಸ್ಥಾನದಲ್ಲಿ ಕಣ್ಮರೆಯಾಗುತ್ತಿದೆ. ಈ ಕಾರಣದಿಂದ ಐಯುಸಿಎನ್ ಕೆಂಪು ಪಟ್ಟಿಯಲ್ಲಿ ಅಳಿವನಂಚಿನಲ್ಲಿರುವ ಪ್ರಬೇಧ ಎಂದು ಪಟ್ಟಿ ಮಾಡಲಾಗಿದೆ. ಹಾಂಗ್ ಕಾಂಗ್ (Hong Kong), ಸಿಂಗಪೋರ್ (Singapore), ಕುವೈಟ್‌ (Kuwait), ಸಿರಿಯಾದ ಅರಬ್ ಗಣರಾಜ್ಯ, ಲಿಬ್ಯಾ ಮತ್ತು ಟುನಿಷಿಯಾದಲ್ಲಿ ಅದು ಪ್ರಾದೇಶಿಕವಾಗಿ ಈಗಾಗಲೇ ನಾಶವಾಗಿದೆ. 

Latest Videos
Follow Us:
Download App:
  • android
  • ios