Shivamogga: ಮದುವೆಗೆ ಅಡ್ಡಿಯಾದ ಕುಜದೋಷ: ವಿಷ ಸೇವಿಸಿದ್ದ ಮಹಿಳಾ ಪೇದೆ ಸಾವು!
ಮದುವೆಯಾಗಲು ಕುಜ ದೋಷ ಅಡ್ಡಿಯಾಗಿದ್ದರಿಂದ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಸುಧಾ ಎಂದು ಗುರುತಿಸಲಾಗಿದೆ.
ವರದಿ: ರಾಜೇಶ್ ಕಾಮತ್, ಶಿವಮೊಗ್ಗ
ಶಿವಮೊಗ್ಗ (ಜೂ.17): ಮದುವೆಯಾಗಲು ಕುಜ ದೋಷ ಅಡ್ಡಿಯಾಗಿದ್ದರಿಂದ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಸುಧಾ ಎಂದು ಗುರುತಿಸಲಾಗಿದೆ. ಭದ್ರಾವತಿ ತಾಲೂಕಿನ ಕಲ್ಲಾಪುರ ನಿವಾಸಿಯಾಗಿರುವ ತೀರ್ಥಹಳ್ಳಿ ಪೊಲೀಸ್ ಕಾನ್ಸ್‌ಟೇಬಲ್ ಸುಧಾ ಹಾಗೂ ಭದ್ರಾವತಿ ಅರಣ್ಯ ವಲಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬೆಳಗಾವಿ ಮೂಲದ ಪ್ರವೀಣ್ ಆರು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿಗೆ ಹೆತ್ತವರ ವಿರೋಧವಿತ್ತು. ಆರಂಭದಲ್ಲಿ ಇವರಿಬ್ಬರ ಪ್ರೀತಿಗೆ ಜಾತಿ ಅಡ್ಡಿಯಾಗಿತ್ತು.
ಜಾತಿ ಅಡ್ಡಿಯ ನಡುವೆಯೂ ಇಬ್ಬರು ಮದುವೆಗೆ ಸಿದ್ಧರಾಗಿದ್ದರು. ಆದರೆ ಪ್ರವೀಣ್ ತಾಯಿ ಯುವತಿಯ ಜಾತಕವನ್ನು ಜ್ಯೋತಿಷಿಯೊಬ್ಬರಿಗೆ ತೋರಿಸಿದ್ದರು. ಜ್ಯೋತಿಷಿ ಈ ಯುವತಿಗೆ ಕುಜ ದೋಷ ಇದೆ. ಇವಳೊಂದಿಗೆ ವಿವಾಹವಾದರೆ ನಿಮ್ಮ ಮಗನ ಆಯಸ್ಸು ಕಡಿಮೆ ಎಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಕುಜ ದೋಷ ಇರುವ ಹುಡುಗಿ ಜೊತೆ ಮದುವೆ ಮಾಡಲು ಸಾಧ್ಯವಿಲ್ಲ ಎಂದು ಪ್ರವೀಣ್ ತಾಯಿ ತಿಳಿಸಿದ್ದರು. ಅಲ್ಲದೇ ಯುವತಿ ಸುಧಾಳಿಗೂ ಫೋನ್ ಮಾಡಿ ನನ್ನ ಮಗನ ಸಹವಾಸ ಬಿಟ್ಟು ಬಿಡು. ಈ ಮದುವೆ ಮಾಡಲು ಸಾಧ್ಯವಿಲ್ಲ ಎಂದಿದ್ದರು ಎನ್ನಲಾಗಿದೆ.
ಮಾನಸಿಕ ಖಿನ್ನತೆ: ರೈಫಲ್‌ನಿಂದ ಶೂಟ್ ಮಾಡಿಕೊಂಡು ಪೇದೆ ಆತ್ಮಹತ್ಯೆ!
ಆದರೆ ಕುಜ ದೋಷಕ್ಕೆ ಯುವತಿ ಕೊನೆಗೂ ಬಲಿಯಾಗಿದ್ದು, ನಿನ್ನೆ (ಗುರುವಾರ) ಮಣಿಪಾಲಿನಲ್ಲಿ ಯುವತಿ ಕೊನೆ ಉಸಿರೆಳೆದಿದ್ದಾಳೆ. ವಿಷ ಸೇವಿಸಿ 16 ದಿನಗಳ ಬಳಿಕ ಯುವತಿ ಸಾವನ್ನಪ್ಪಿರುವುದು ವಿಪರ್ಯಾಸ. ಮೇ.31 ರಂದು ಭದ್ರಾವತಿಯ ಆರ್‌ಎಂಸಿ ಯಾರ್ಡ್‌ನ ಬಳಿ ತೀರ್ಥಹಳ್ಳಿಯ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಧಾ ತಾನು ಪ್ರೀತಿಸಿದ ಅರಣ್ಯ ಇಲಾಖೆಯ ಆರ್‌ಎಫ್‌ಒ ಪ್ರವೀಣ್ ಕುಮಾರ್ ಮೊಕಾಶಿಯನ್ನ ಪ್ರೀತಿಸುತ್ತಿದ್ದು, ಮದುವೆಗೆ ಜಾತಕ ಅಡ್ಡವಾಗಿದ್ದ ಕಾರಣ ವಿಷ ಸೇವಿಸಿದ್ದಳು. ಪ್ರವೀಣ್ ಕುಮಾರ್ ಮೊಕಾಶಿ ಮತ್ತು ಸುಧಾ ಪರಸ್ಪರ ಪ್ರೀತಿಸಿ 6 ವರ್ಷಗಳಾಗಿವೆ.
ಇಬ್ಬರು ಬೇರೆ ಬೇರೆ ಜಾತಿಯಾಗಿದ್ದು ಇಬ್ಬರು ಮದುವೆಗೆ ಮುಂದಾಗಿದ್ದರು. ಮದುವೆಗೆ ಸುಧಾರವರ ಜಾತಕ ಪಡೆದು ಹೋದ ಪ್ರವೀಣ್‌ನ ತಾಯಿ ಜ್ಯೋತಿಷ್ಯರು ಹುಡುಗಿಗೆ ಕುಜ ದೋಷವಿದೆ ಎಂದು ಹೇಳಿದ್ದಾರೆ. ಕುಜ ದೋಷವಿದ್ದರೆ ಮಗ ಬಲುಬೇಗ ಸಾವನ್ನಪ್ಪುತ್ತಾನೆ ಎಂದು ಜ್ಯೋತಿಷ್ಯ ಹೇಳುತ್ತದೆ. ಹಾಗಾಗಿ ಮದುವೆಯನ್ನ ನಿರಾಕರಿಸಿದ್ದರು. ಹೀಗಾಗಿ ಎಷ್ಟೇ ಪ್ರಯತ್ನಿಸಿದರೂ ಪ್ರವೀಣ್ ತದ ನಂತರ ಸುಧಾರನ್ನ ಭೇಟಿಯಾಗಿರಲಿಲ್ಲ.ಮೇ. 30 ರಂದು ಭದ್ರಾವತಿ ತಾಲೂಕು ಉಬ್ರಾಣಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೊಕಾಶಿಯನ್ನ ಭೇಟಿಯಾದಾಗ ನೀನು ಇಲ್ಲದೆ ನಾನು ಸಾಯುವುದಾಗಿ ಹೇಳಿದ್ದಾಳೆ.
ವಿಜಯಪುರ: ಕೃಷಿ ಹೊಂಡಕ್ಕೆ ಹಾರಿ ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ
ಸಾವು ಹೇಗಿರುತ್ತದೆ ಎಂದು ನಾನು ತೋರಿಸುವೆ ಎಂದು ಸುಧಾಳನ್ನ ಬೈಕ್‌ನಲ್ಲಿ ಕೂರಿಸಿಕೊಂಡು ಪ್ರವೀಣ್ ಅಡ್ಡಾದಿಡ್ಡಿ ಬೈಕ್ ಹೊಡೆದು ಆರ್‌ಎಂಸಿ ಬಳಿ ಕರೆದುಕೊಂಡು ಬರುತ್ತಾನೆ. ತದನಂತರ ಆರ್‌ಎಂಸಿಯ ಬಳಿ ಪ್ರವೀಣ್ ನಾಟಕವಾಡಿ ಇಬ್ಬರು ವಿಷ ಸೇವಿಸಿ ಸತ್ತು ಬಿಡೋಣ ಎಂದು ತಿಳಿಸಿ ಮೊದಲು ನೀನು ಕುಡಿ ಎಂದು ಸುಧಾಳಿಗೆ ವಿಷದ ಬಾಟಲ್ ನೀಡಿದ್ದಾನೆ. ವಿಷ ಸೇವಿಸಿದ ಸುಧಾ, ಪ್ರವೀಣ್ ವಿಷ ಸೇವಿಸುವುದನ್ನ ಕಾಣಲಿಲ್ಲವೆಂದು ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ. ಹೀಗೆ ಕುಜ ದೋಷಕ್ಕೆ ಯುವತಿ ಬಲಿಯಾಗಿದ್ದು, ಅಪ್ಪಟ ಪ್ರೀತಿ ಜ್ಯೋತಿಷ್ಯದ ಕುಜದೋಷಕ್ಕೆ ಆಹುತಿಯಾಗಿದೆ.