ಬೆಂಗಳೂರಿನಲ್ಲಿ 6 ವರ್ಷದ ಪುಟ್ಟ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಈ ಸಂಬಂಧ ಆರೋಪಿ ಮಮ್ಜುಲ್ ಎಂಬಾತನನ್ನು ಬಂಧಿಸಲಾಗಿದೆ.

ಬೆಂಗಳೂರು (ಏ.23): ಬೆಂಗಳೂರಿನಲ್ಲಿ 6 ವರ್ಷದ ಪುಟ್ಟ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಈ ಸಂಬಂಧ ಕೆ.ಆರ್ .ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ತನಿಖೆ ನಡೆಸಿರುವ ಪೊಲೀಸರು ಆರೋಪಿ ಮಮ್ಜುಲ್ ಎಂಬಾತನನ್ನು ಬಂಧಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರೋಪಿ ಮಮ್ಜುಲ್ (30) ಕೂಲಿ ಕೆಲಸ ಮಾಡೋ ದಂಪತಿ ಮಗಳ ಮೇಲೆ ಕಣ್ಣು ಹಾಕಿದ್ದ. ಬಾಲಕಿಯನ್ನು ಆಟವಾಡಿಸೋ ನೆಪದಲ್ಲಿ ಮೈ ಕೈ ಮುಟ್ಟಿ ಅಸಭ್ಯ ವರ್ತನೆ ತೋರಿದ್ದಾನೆ. ಇದನ್ನು ಗಮನಿಸಿದ ಬಾಲಕಿಯ ತಂದೆ ಆರೋಪಿಗೆ ಬೈದು ಕಳಿಸಿದ್ದರು.

ಗದಗ ಒಂದೇ ಕುಟುಂಬ ನಾಲ್ವರನ್ನು ಭೀಕರ ಹತ್ಯೆಗೈದ ಫಯಾಜ್ ಗ್ಯಾಂಗ್; ಹಿರಿ ಮಗನಿಂದಲೇ ಕುಟುಂಬದ ಕೊಲೆಗೆ ಸುಪಾರಿ!

ಬಾಲಕಿಯ ತಂದೆ ಬೈದಿದ್ದಕ್ಕೆ ಕುಪಿತಗೊಂಡಿದ್ದ ಆರೋಪಿ ಬಾಲಕಿಯ ತಾಯಿ ಕೆಲಸಕ್ಕೆ ಹೋಗಿದ್ರು, ತಂದೆ ಹಾಲು ತರಲು ಹೋಗಿದ್ದರು. ಈ ಸಮಯವನ್ನೇ ದುರ್ಬಳಕ್ಕೆ ಮಾಡಿಕೊಂಡ ಆರೋಪಿ ಮಗುವಿನ ಜೊತೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಬಾಲಕಿಯ ತಂದೆ ಮನೆಗೆ ವಾಪಸ್ ಬಂದಾಗ ಮಗು ಅಳುವುದು, ಕಿರುಚಾಡುವುದು ಕೇಳಿಸಿದೆ. ನೋಡಿದಾಗ ಮಗುವಿನ ಮೇಲೆ ಆರೋಪಿ ಮಲಗಿದ್ದ. ತಕ್ಷಣ ಮಗುವಿನ ತಂದೆ ಪೊಲೀಸರಿಗೆ ಮಾಹಿತಿ ನೀಡಿದರು.

Bengaluru: ಕುಖ್ಯಾತ ರೌಡಿ ಕುಣಿಗಲ್ ಗಿರಿ ಕೊಲೆ ಸಂಚು, ತಿಪ್ಪಸಂದ್ರ ರೌಡಿಶೀಟರ್ ಜೋಶ್ವಾ ಅಟ್ಟಾಡಿಸಿದ ಗ್ಯಾಂಗ್!

ತಂದೆಯ ದೂರಿನ್ವಯ ಫೋಕ್ಸೋ ಅಡಿ ಎಫ್ ಐಆರ್ ದಾಖಲಿಸಿಕೊಂಡ ಕೆ.ಪುರಂ ಠಾಣೆ ಪೊಲೀಸರು ಸಿಸಿಟಿವಿಯಲ್ಲಿ ಆರೋಪಿ ಚಹರೆ ಪತ್ತೆ ಹಚ್ಚಿ ಬಂಧಿಸಿದರು. ಬಂಧಿತ ಆರೋಪಿ ಕೂಡ ಕಟ್ಟಡ ಕಾರ್ಮಿಕನಾಗಿದ್ದು, ಈತ ಪಶ್ಚಿಮ ಬಂಗಾಳದವನು ಎಂದು ತಿಳಿದುಬಂದಿದೆ.